Brazil: ಬರೋಬ್ಬರಿ 5 ಡೋಸ್​ ಕೊರೊನಾ ಲಸಿಕೆ ಪಡೆದು, ಆರನೇ ಡೋಸ್​ಗಾಗಿ ಬಂದ ವ್ಯಕ್ತಿ; ಆದ್ರೆ ಆಗಿದ್ದೇ ಬೇರೆ ಅಲ್ಲಿ

| Updated By: Lakshmi Hegde

Updated on: Aug 28, 2021 | 5:24 PM

ಈ ವ್ಯಕ್ತಿ ಕೇಂದ್ರಬಿಂದುವಾಗಿದ್ದು, ಐದು ಡೋಸ್​ ಲಸಿಕೆ ಪಡೆದದ್ದು ಹೇಗೆ ಎಂಬುದನ್ನು ಆರೋಗ್ಯಾಧಿಕಾರಿಗಳಿಗೆ ವಿವರಿಸಬೇಕಾಗಿದೆ.

Brazil: ಬರೋಬ್ಬರಿ 5 ಡೋಸ್​ ಕೊರೊನಾ ಲಸಿಕೆ ಪಡೆದು, ಆರನೇ ಡೋಸ್​ಗಾಗಿ ಬಂದ ವ್ಯಕ್ತಿ; ಆದ್ರೆ ಆಗಿದ್ದೇ ಬೇರೆ ಅಲ್ಲಿ
ಕೊರೊನಾ ಲಸಿಕೆ
Follow us on

ಬರೋಬ್ಬರಿ 5 ಡೋಸ್​ ಲಸಿಕೆ ಪಡೆದುಕೊಂಡು, ಆರನೇ ಡೋಸ್​ ಲಸಿಕೆ (Covid 19 Vaccine) ಪಡೆಯಲು ಹೋದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಹೀಗೊಂದು ವಿಚಿತ್ರ ಘಟನೆ ಬ್ರೆಜಿಲ್ (Brazil)​​ನ ರಿಯೋ ಡಿ ಜನೈರೊ ಎಂಬ ನಗರದಲ್ಲಿ ನಡೆದಿದೆ. ಮೇ 12ರಿಂದ ಜುಲೈ 21ರ ಅವಧಿಯಲ್ಲಿ 5 ಡೋಸ್​ ಲಸಿಕೆ ಪಡೆದಿದ್ದ ಈತ, ಆರನೇ ಡೋಸ್​ ಪಡೆಯಲು ಹೋದಾಗ ಆರೋಗ್ಯ ಕಾರ್ಯದರ್ಶಿಯೊಬ್ಬರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈತ ಎರಡು ಡೋಸ್ ಫೈಜರ್​, ಮತ್ತೆರಡು ಡೋಸ್​ ಕೊರೊನಾವ್ಯಾಕ್​ ಮತ್ತು ಒಂದು ಡೋಸ್​ ಆಸ್ಟ್ರಾಜೆನಿಕಾದ ವ್ಯಾಕ್ಸೇವ್ರಿಯಾ ಲಸಿಕೆಯನ್ನು ಪಡೆದಿದ್ದಾನೆ ಎಂಬುದು ಗೊತ್ತಾಗಿದೆ.

ಇದೀಗ ಈ ವ್ಯಕ್ತಿ ಕೇಂದ್ರಬಿಂದುವಾಗಿದ್ದು, ಐದು ಡೋಸ್​ ಲಸಿಕೆ ಪಡೆದದ್ದು ಹೇಗೆ ಎಂಬುದನ್ನು ಆರೋಗ್ಯಾಧಿಕಾರಿಗಳಿಗೆ ವಿವರಿಸಬೇಕಾಗಿದೆ. ಯಾವುದೇ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕುವಾಗಲೂ ವಯಸ್ಸು, ಗುರುತಿಗೆ ಸಂಬಂಧಪಟ್ಟ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ. ಹಾಗಿದ್ದಾಗ್ಯೂ ಈ ವ್ಯಕ್ತಿ ಆರೋಗ್ಯ ಸಿಬ್ಬಂದಿ ಕಣ್ತಪ್ಪಿಸಿ ಲಸಿಕೆ ಪಡೆದದ್ದು ಹೇಗೆಂಬುದು ಅಚ್ಚರಿಯಾಗಿದೆ. ಆಗಸ್ಟ್​ 16ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದೇ ತಡ, ಇದೀಗ ಹೆಚ್ಚಿನ ತನಿಖೆಯೂ ಶುರುವಾಗಿದೆ. ಈ ವ್ಯಕ್ತಿಯೊಬ್ಬನೇ ಹೀಗೆ ಮಾಡಿದ್ದಾನೋ ಅಥವಾ ಬೇರೆ ಯಾರಾದರೂ ಹೀಗೆ ನಾಲ್ಕೈದು ಡೋಸ್​​ ವ್ಯಾಕ್ಸಿನ್​ ಪಡೆದಿದ್ದಾರೋ ಎಂಬುದನ್ನು ಪತ್ತೆ ಹಚ್ಚಲು ಕಾರ್ಯ ಶುರುವಾಗಿದೆ.

ಬ್ರೆಜಿಲ್​​ನಲ್ಲಿ ಕೊವಿಡ್​ 19 ಪ್ರಕರಣಗಳು
ಕೊವಿಡ್​ನಿಂದ ಅತಿಹೆಚ್ಚು ಬಾಧಿತವಾದ ರಾಷ್ಟ್ರಗಳಲ್ಲಿ ಬ್ರೆಜಿಲ್ ಕೂಡ ಒಂದು. ಆ ದೇಶದ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ   20,676,561ಕ್ಕೆ ಏರಿಕೆಯಾಗಿದೆ. ಇದುವರೆಗೂ 19.6 ಮಿಲಿಯನ್​ ಕೊವಿಡ್​ ರೋಗಿಗಳು ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯನ್ನು ದೇಶದಿಂದಲೇ ಕಿತ್ತೊಗೆಯುತ್ತೇವೆ, ತಾಕತ್ತಿದ್ದರೆ ಟಿಎಂಸಿಯನ್ನು ತಡೆಯಿರಿ; ಅಮಿತ್​ ಶಾಗೆ ಅಭಿಷೇಕ್ ಬ್ಯಾನರ್ಜಿ ಸವಾಲು

ಸುಮಲತಾ​ ಬರ್ತ್​ಡೇ ಪಾರ್ಟಿಯಲ್ಲಿ ಯಶ್​, ಸುಧಾಕರ್​, ದರ್ಶನ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು