ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬಳು ಡಲ್ಲಾಸ್ನಲ್ಲಿ ಭಾರತೀಯ ಮೂಲದ ಮಹಿಳೆಯರ ಮೇಲೆ ನಡೆಸಿದ ಹಲ್ಲೆ ವಿಡಿಯೋ ವೈರಲ್ ಆಗಿದೆ
ಆಕೆ ಜನಾಂಗೀಯ ನಿಂದನೆಯನ್ನು ಮುಂದುವರಿಸಿ, ‘ಇಂಡಿಯಾದಲ್ಲಿ ಬದುಕು ಅಷ್ಟೆಲ್ಲಾ ಅದ್ಭುತವಾಗಿದ್ದರೆ ಅಮೆರಿಕದಲ್ಲೇನು ಕೆಲಸ ನಿಮಗೆ?’ ಅಂತ ಕೇಳಿದ್ದಾಳೆ. ಅವಳಿಂದ ನಿಂದಿಸಿಕೊಂಡ ಮಹಿಳೆಯರ ಗುಂಪಿನ ಸದಸ್ಯರಲ್ಲಿ ಒಬ್ಬರಾಗಿರುವ ರಾಣಿ ಬ್ಯಾನರ್ಜೀ ಐದೂವರೆ-ನಿಮಿಷ ಅವಧಿಯ ಸದರಿ ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಮೂಲದ ಅಮೆರಿಕನ್ ಮಹಿಳೆಯರ ಗುಂಪೊಂದರ ವಿರುದ್ಧ ಮೆಕ್ಸಿಕನ್ ಮೂಲದ ಅಮೆರಿಕನ್ ಮಹಿಳೆಯೊಬ್ಬಳು ಜನಾಂಗೀಯ ನಿಂದನೆಯಲ್ಲಿ (racial abuse) ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳ್ಲಿ ವೈರಲ್ ಆಗಿದೆ. ಈ ಮಹಿಳೆ ಭಾರತೀಯ ಮಹಿಳೆಯರನ್ನು ಎಫ್… ಪದ ಬಳಸಿ ನಿಂದಿಸುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ‘ಈ ದರಿದ್ರ ಭಾರತೀಯರನ್ನು ನಾನು ದ್ವೇಷಿಸುತ್ತೇನೆ (I hate f… Indians)’ ಅಂತ ಅವಳು ಹೇಳಿರುವುದನ್ನು ಕೇಳಿದ ಭಾರತೀಯರು ಆಘಾತಕ್ಕೊಳಗಾಗಿದ್ದಾರೆ. ಸದರಿ ಘಟನೆಯು ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿರುವ ಸಿಕ್ಸ್ಟಿ ವೈನ್ಸ್ ರೆಸ್ಟುರಾಂಟ್ ನ ಪಾರ್ಕಿಂಗ್ ಲಾಟ್ ನಲ್ಲಿ ನಡೆದಿದೆ. ಅಮೆರಿಕದಲ್ಲಿ ಹುಟ್ಟಿರುವಳೆಂದು ಹೇಳಲಾಗಿರುವ ಮೆಕ್ಸಿಕನ್ ಮಹಿಳೆಯು ಭಾರತೀಯ ಮೂಲದ ಮಹಿಳೆಯರನ್ನು ಉದ್ದೇಶಿಸಿ, ‘ಭಾರತಕ್ಕೆ ವಾಪಸ್ಸು ಹೋಗಿ!’ ಅಂತ ಅರಚುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಮಹಿಳೆಯರ ನಡುವೆ ವಾಗ್ವಾದ ಶುರುವಾದ ಸ್ವಲ್ಪ ಹೊತ್ತಿಗೆ ವಿಡಿಯೋ ಆರಂಭವಾಗುತ್ತದೆ.
‘ಭಾರತೀಯ ಮಹಿಳೆಯರೆಲ್ಲ ಒಂದು ಉತ್ತಮ ಬದುಕನ್ನು ಅರಸಿಕೊಂಡು ಅಮೆರಿಕ ಬರುತ್ತಾರೆ. ನಮ್ಮ ದೇಶಕ್ಕೆ ಬಂದ ನಂತರ ನಿಮಗೆ ಎಲ್ಲವೂ ಪುಕ್ಕಟೆಯಾಗಿ ಬೇಕು. ನಾನು ಮೆಕ್ಸಿಕನ್-ಅಮೆರಿಕನ್ ಆಗಿದ್ದು ಇಲ್ಲೇ ಹುಟ್ಟಿದ್ದೇನೆ,’ ಎಂದು ನಾಲ್ಕು ಸದಸ್ಯರ ಬಾರತೀಯ-ಅಮೆರಿಕನ್ ಮಹಿಳೆಯರ ಗುಂಪನ್ನು ಬಯ್ಯುತ್ತಾ, ನಿಂದಿಸುತ್ತಾ ಅವಳು ಹೇಳುತ್ತಾಳೆ. ಅಕೆಯನ್ನು ಎಸ್ಮೆರಾಲ್ಡಾ ಉಪ್ಟನ್ ಎಂದು ಗುರುತಿಸಲಾಗಿದ್ದು ಪ್ಲಾನೋದಲ್ಲಿ ವಾಸವಾಗಿದ್ದಾಳೆ.
ಭಾರತೀಯ ಮೂಲದ ಮಹಿಳೆಯರು ಉಪ್ಟನ್ ಮಾಡಿದ ನಿಂದನೆ ಬಗ್ಗೆ ಪ್ಲಾನೋ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ ಬಳಿಕ ಪೊಲೀಸ್ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ.
‘ಉಪ್ಪನ್ ಳನ್ನು ದೈಹಿಕವಾಗಿ ಘಾಸಿಗೊಳಿಸಿದ ಮತ್ತು ಭಯೋತ್ಪಾದನೆ ಬೆದರಿಕೆಗಳ ಆರೋಪಗಳ ಆಧಾರದಲ್ಲಿ ಬಂಧಿಸಲಾಗಿದೆ,’ ಎಂದು ಪೊಲೀಸರು ಹೇಳಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಉಪ್ಟನ್ ಳನ್ನು ಸುಮಾರು 8 ಲಕ್ಷ ರೂ. ಗಳ ಬಾಂಡ್ ಮೇಲೆ ಬಂಧಿಸಲಾಗಿದೆ.
ಭಾರತೀಯ ಮೂಲದ ಮಹಿಳೆಯೊಬ್ಬರು, ‘ಯಾಕೆ ನಮ್ಮನ್ನು ಸುಖಾಸುಮ್ಮನೆ ನಿಂದಿಸುತ್ತಿದ್ದೀಯಾ, ಕಾರಣವೇನು? ನಾವು ಅಮೆರಿಕನ್ನರಲ್ಲವೆಂದು ಯಾಕೆ ಭಾವಿಸುತ್ತಿದ್ದೀಯಾ?’ ಅಂತ ಕೇಳಿದ್ದಕ್ಕೆ ಉಪ್ಟನ್, ‘ನೀವಾಡುವ ಭಾಷೆಯೇ ಸಾಕು ನೀವು ಅಮೆರಿಕನ್ನರಲ್ಲ ಅಂತ ಹೇಳಲು. ನಾನು ಮೆಕ್ಸಿಕನ್-ಅಮೇರಿಕನ್ ಆಗಿರುವುದರಿಂದ ಇಂಗ್ಲಿಷ್ ನಲ್ಲ್ಲಿ ಮಾತಾಡುತ್ತೇನೆ,’ ಎಂದಿದ್ದಾಳೆ.
ಆಕೆ ಜನಾಂಗೀಯ ನಿಂದನೆಯನ್ನು ಮುಂದುವರಿಸಿ, ‘ಇಂಡಿಯಾದಲ್ಲಿ ಬದುಕು ಅಷ್ಟೆಲ್ಲಾ ಅದ್ಭುತವಾಗಿದ್ದರೆ ಅಮೆರಿಕದಲ್ಲೇನು ಕೆಲಸ ನಿಮಗೆ?’ ಅಂತ ಕೇಳಿದ್ದಾಳೆ.
ಅವಳಿಂದ ನಿಂದಿಸಿಕೊಂಡ ಮಹಿಳೆಯರ ಗುಂಪಿನ ಸದಸ್ಯರಲ್ಲಿ ಒಬ್ಬರಾಗಿರುವ ರಾಣಿ ಬ್ಯಾನರ್ಜೀ ಐದೂವರೆ-ನಿಮಿಷ ಅವಧಿಯ ಸದರಿ ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತೀಯ ಮೂಲದ ಮಹಿಳೆಯರ ಪೈಕಿ ಒಬ್ಬರು ಉಪ್ಟನ್ ಳ ಉಪಟಳವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಾಗ ಆಕೆ ಕೆಮೆರಾವನ್ನು ಆಫ್ ಮಾಡುವಂತೆ ಗದರುತ್ತಾಳೆ ಮತ್ತು ಗನ್ ನಿಂದ ಆ ನಾಲ್ವರು ಭಾರತೀಯ ಮೂಲದ ಮಹಿಳೆಯರನ್ನು ಶೂಟ್ ಮಾಡುವುದಾಗಿ ಹೆದರಿಸುತ್ತಾಳೆ.
‘ನಿನ್ನ ಫೋನ್ ಕೆಮೆರಾವನ್ನು ಆಫ್ ಮಾಡು. ಇಲ್ಲದಿದ್ದರೆ ನಿನ್ನ ತಿ..ದ ಮೇಲೆ ಗುಂಡು ಹಾರಿಸುತ್ತೇನೆ,’ ಅಂತ ಹೇಳಿ ವಿಡಿಯೋ ಮಾಡುತ್ತಿದ್ದ ಮಹಿಳೆಯ ಕೆನ್ನೆಗೆ ಬಾರಿಸುತ್ತಾಳೆ.
ಈ ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆದ ಬಳಿಕ ವೈರಲ್ ಆಗಿದೆ.
ಯುಎಸ್ ಡೆಮೊಕ್ರಾಟಿಕ್ ಪಕ್ಷದ ಕಾರ್ಯಕರ್ತೆ ರೀಮಾ ರಸೂಲ್ ಎನ್ನುವವರು ವಿಡಿಯೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ, ‘ಇದು ಹೆದರಿಕೆ ಹುಟ್ಟಿಸುವ ಸಂಗತಿಯಾಗಿದೆ. ಅವಳ ಹತ್ತಿರ ನಿಜವಾಗಿಯೂ ಗನ್ ಇತ್ತು ಮತ್ತು ಭಾರತೀಯ ಮೂಲದ ಮಹಿಳೆಯರ ಮೇಲೆ ಅವಳು ಗುಂಡು ಹಾರಿಸುವ ಉದ್ದೇಶ ಹೊಂದಿದ್ದಳು. ಬರೀ ದ್ವೇಷವನ್ನೇ ಕಾರಿದ ಈ ಕೆಟ್ಟ ಹೆಂಗಸಿಗೆ ಶಿಕ್ಷೆಯಾಗಲೇ ಬೇಕು,’ ಎಂದು ಕಾಮೆಂಟ್ ಮಾಡಿದ್ದಾರೆ.
ASSAULT ARRESTOn Thursday, August 25, 2022, at approximately 3:50 p.m., Plano Police Detectives arrested Esmeralda Upton of Plano on one charge of Assault Bodily Injury and one for Terroristic Threats and is being held on a total bond amount of $10,000. A jail photo is attached. pic.twitter.com/cEj9RwWdt1
— Plano Police (Texas) (@PlanoPoliceDept) August 25, 2022
ದ್ವೇಷದ ಅಪರಾಧ ಅಡಿಯಲ್ಲಿ ಮೆಕ್ಸಿಕನ್ ಮೂಲದ ಮಹಿಳೆಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಆಕೆಯ ಮೇಲೆ ಹೆಚ್ಚುವರಿ ಆರೋಪಗಳನ್ನು ಹೇರುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.