Shocking News: ಶವಪೆಟ್ಟಿಗೆಯಿಂದ ಬಂತು ವಿಚಿತ್ರ ಸದ್ದು, ತೆರೆದು ನೋಡಿದರೆ ನಂಬಲಸಾಧ್ಯ ದೃಶ್ಯವದು! ಆ ಮೇಲೆ?
ಕೆಲವೊಮ್ಮೆ ಈ ಜಗತ್ತಿನಲ್ಲಿ ಜರುಗುವ ಪವಾಡಗಳನ್ನು ನೋಡಿದರೆ... ನಮ್ಮ ಕಣ್ಣನ್ನೇ ನಂಬಲು ಆಗುವುದಿಲ್ಲ. ಶವಪೆಟ್ಟಿಗೆಯ ಗಾಜಿನ ಮೇಲೆ ಮಂಜು ಕವಿದಿರುತ್ತದೆ. ತಾಯಿ ತನ್ನ ಅಂತಃಕರಣದಿಂದ ಮಗುವನ್ನು ದಿಟ್ಟಿಸಿ ನೋಡಿದಾಗ ಅದು ಜೀವಂತವಾಗಿರುವುದು ಮನವರಿಕೆಯಾಗುತ್ತದೆ. ವೈದ್ಯರು ಆತುರಕ್ಕೆ ಬಿದ್ದು, ಮಗು ಸತ್ತಿದೆ ಅಂದುಬಿಟ್ಟಿದ್ದಾರೆ.
ಕೆಲವೊಮ್ಮೆ ಈ ಜಗತ್ತಿನಲ್ಲಿ ಜರುಗುವ ಪವಾಡಗಳನ್ನು ನೋಡಿದರೆ… ನಮ್ಮ ಕಣ್ಣನ್ನೇ ನಂಬಲು ಆಗುವುದಿಲ್ಲ. ಅಂತ್ಯಸಂಸ್ಕಾರ ನಡೆಯುವಾಗ ಮನುಷ್ಯರು ಎದ್ದು ಕುಳಿತು ಶವಪೆಟ್ಟಿಗೆ ಸರಿಸಿದಂತಹ ಅಪರೂಪದ ಘಟನೆಗಳು ಸಾಕಷ್ಟಿವೆ. ಅಂತಹ ಒಂದು ಪವಾಡ ಸದೃಶ ಘಟನೆ ಇತ್ತೀಚೆಗೆ ಮೆಕ್ಸಿಕೋದಲ್ಲಿ ನಡೆದಿದೆ. ಮೂರು ವರ್ಷದ ಮಗು ಅಕಾಲಿಕವಾಗಿ ಮೃತಪಟ್ಟಿದೆಯೆಂಬ ಅಳಲಿನೊಂದಿಗೆ ಶವಪೆಟ್ಟಿಗೆಯಲ್ಲಿ ಆ ಮಗುವಿನ ಶವವನ್ನು ಇರಿಸಿ… ಇನ್ನೇನು ಅಂತ್ಯಕ್ರಿಯೆ ನೆರವೇರಿಸಿಬೇಕು.. ಆಗ ನಡೆಯಿತು ಅನಿರೀಕ್ಷಿತವೊಂದು. ಆ ಮಗು ಅನಿರೀಕ್ಷಿತವಾಗಿ ತನ್ನ ಕಣ್ಣುಗಳನ್ನು ತೆರೆದಿದೆ. ಇದನ್ನು ಕಂಡು ಅಲ್ಲಿದ್ದವರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಜೊತೆಗೆ ಆನಂದವೂ ಆಗಿದೆ ಅವರಿಗೆಲ್ಲಾ.
ಘಟನಯೆ ವಿವರಗಳಿಗೆ ಹೋಗುವುದಾದರೆ.. ಮೆಕ್ಸಿಕೋದ ಮೂರು ವರ್ಷದ ಮೆಲ್ಡೋಜಾ ತನ್ನ ತಾಯಿಯೊಂದಿಗೆ ವಿಲ್ಲಾ ಡೀರಾಮೋಸ್ ಎಂಬ ಪ್ರದೇಶದಲ್ಲಿ ವಾಸಿಸುತ್ತಾಳೆ. ಆಗಸ್ಟ್ 17ರಂದು ಬಾಲಕಿಗೆ ತೀವ್ರ ಹೊಟ್ಟೆ ನೋವು, ವಾಂತಿ, ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ತಾಯಿಯು ತನ್ನ ಮಗುವನ್ನು ಮನೆ ಸಮೀಪವೇ ಇದ್ದ ವೈದ್ಯರ ಬಳಿ ಕರೆದೊಯ್ದರು. ಬಾಲಕಿ ನಿರ್ಜಲೀಕರಣಗೊಂಡಿದ್ದು, ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಮನೆ ವೈದ್ಯರು ಸೂಚಿಸಿದರು.
ಆ ವೈದ್ಯರ ಸಲಹೆಯಂತೆ ಪೋಷಕರು ಬಾಲಕಿಯನ್ನು ಕ್ಲಿನಿಕ್ ಗೆ ಕರೆದೊಯ್ದರು. ಅಲ್ಲಿನ ವೈದ್ಯರು ತಕ್ಷಣಕ್ಕೆ ಪ್ಯಾರಸಿಟಮಾಲ್ ಮಾತ್ರೆ ನೀಡಿ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದ್ದಾರೆ. ಆ ನಂತರ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗು ಮೆಲ್ಡೋಜಾ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ್ದು, ಸ್ವಲ್ಪ ಹೊತ್ತಿನ ಬಳಿಕ ಮಗು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಇದರೊಂದಿಗೆ ಮೆಲ್ಡೋಜಾ ಪೋಷಕರು ಮರುದಿನ ಮಗುವಿನ ಅಂತ್ಯಕ್ರಿಯೆ ನಡೆಸಲು ಸಿದ್ಧರಾದರು. ಮಗುವಿನ ದೇಹವನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಶವಪೆಟ್ಟಿಗೆಯ ಗಾಜು ಮಂಜು ಕವಿದಿರುವುದನ್ನು ತಾಯಿ ಗಮನಿಸಿದರು. ಅದಲ್ಲದೆ, ಮಗುವಿನಲ್ಲಿ ಚಲನೆ ಇರುವುದನ್ನು ನೋಡಿದರು. ಒಂದಷ್ಟು ಶಬ್ದವೂ ಹೊರಹೊಮ್ಮಿದೆ. ತಡಮಾಡದೆ ಶವಪೆಟ್ಟಿಗೆಯನ್ನು ತೆರೆದು ನೋಡಿದ್ದಾರೆ. ಅಲ್ಲಿ ಮಗು ಜೀವಂತವಾಗಿರುವುದನ್ನು ಕುಟುಂಬದ ಇತರೆ ಸದಸ್ಯರೂ ಸಹ ಮನವರಿಕೆ ಮಾಡಿಕೊಳ್ಳುತ್ತಾರೆ. ಕೂಡಲೇ ಮಗುವನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಆತುರಕ್ಕೆ ಬಿದ್ದು, ಮಗು ಸತ್ತಿದೆ ಅಂದುಬಿಟ್ಟಿದ್ದಾರೆ. ಆದರೆ ಇದು ವೈದ್ಯರು ತೋರಿರುವ ನಿರ್ಲಕ್ಷ್ಯದ ಪರಮಾವಧಿ ಎಂದು ಆಕೆಯ ತಾಯಿ ಪೊಲೀಸರಿಗೆ ಇದೀಗ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Published On - 2:15 pm, Fri, 26 August 22