Italy: ಇಟಲಿಯ ಮಿಲನ್‌ನಲ್ಲಿ ನಿಲ್ಲಿಸಿದ್ದ ವ್ಯಾನ್ ಸ್ಫೋಟ, ಅನೇಕ ಕಾರುಗಳು ಬೆಂಕಿಗೆ ಆಹುತಿ

ಇಟಲಿಯ ಮಿಲನ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಹಲವಾರು ಕಾರುಗಳು ಬೆಂಕಿಗೆ ಆಹುತಿಯಾಗಿವೆ.

Italy: ಇಟಲಿಯ ಮಿಲನ್‌ನಲ್ಲಿ ನಿಲ್ಲಿಸಿದ್ದ ವ್ಯಾನ್ ಸ್ಫೋಟ, ಅನೇಕ ಕಾರುಗಳು ಬೆಂಕಿಗೆ ಆಹುತಿ
ಇಟಲಿಯ ಮಿಲನ್‌ನಲ್ಲಿ ಭಾರಿ ಸ್ಫೋಟ

Updated on: May 11, 2023 | 4:26 PM

ರೋಮ್: ಇಟಲಿ(Italy) ಮಿಲನ್‌ನಲ್ಲಿ ನಿಲ್ಲಿಸಿದ್ದ ವ್ಯಾನ್ ಸ್ಫೋಟಗೊಂಡಿದ್ದು, ಅಲ್ಲಿಯೇ ನಿಲ್ಲಿಸಿದ್ದ ಹಲವು ವಾಹನಗಳಿಗೆ ಬೆಂಕಿ ತಗುಲಿದೆ. ಇಂದು (ಮೇ 11) ಇಟಲಿಯ ಮಿಲನ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಹಲವಾರು ಕಾರುಗಳು ಬೆಂಕಿಗೆ ಆಹುತಿಯಾಗಿವೆ ಮತ್ತು ದಟ್ಟವಾದ ಕಪ್ಪು ಹೊಗೆಯು ದೈತ್ಯ ಕಟ್ಟಡದ ಒಳಗೆ ಹೋಗಿದೆ. ಸ್ಫೋಟಗೊಂಡ ಪ್ರದೇಶದಲ್ಲಿ ಭಾರೀ ಹೊಗೆ ಮುಚ್ಚೊ ಹೋಗಿದೆ.

ಸ್ಕೈಟಿಜಿ 24 ಪ್ರಕಾರ, ನಗರದ ಮಧ್ಯಭಾಗದಲ್ಲಿ ಸ್ಫೋಟ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೆಗ್ಗೋ ಪ್ರಕಾರ, ಇದು ನಿಲ್ಲಿಸಿದ ವ್ಯಾನ್ ಸ್ಫೋಟಗೊಂಡಿದೆ. ಈ ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಸ್ಫೋಟದ ನಂತರದ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

Published On - 4:26 pm, Thu, 11 May 23