ಪತ್ನಿಯನ್ನು ಬ್ಲಾಕ್​​ಮೇಲ್​​​ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೂಗು, ಕಿವಿ ಮತ್ತು ತುಟಿ ಕತ್ತರಿಸಿದ ಪಾಕ್ ವ್ಯಕ್ತಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2022 | 2:15 PM

ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಝಾಂಗ್ ಜಿಲ್ಲೆಯಲ್ಲಿ ಭಾನುವಾರ ಮುಹಮ್ಮದ್ ಇಫ್ತಿಕರ್ ಎಂಬ ವ್ಯಕ್ತಿ ತನ್ನ ಸಹಚರರೊಂದಿಗೆ ಸೇರಿ ಕಾನ್‌ಸ್ಟೆಬಲ್ ಖಾಸಿಂ ಹಯಾತ್ ಎಂಬವರ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸುವ ಮೊದಲು...

ಪತ್ನಿಯನ್ನು ಬ್ಲಾಕ್​​ಮೇಲ್​​​ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ  ಮೂಗು, ಕಿವಿ ಮತ್ತು ತುಟಿ ಕತ್ತರಿಸಿದ ಪಾಕ್ ವ್ಯಕ್ತಿ
ಪ್ರಾತಿನಿಧಿಕ ಚಿತ್ರ
Follow us on

ಲಾಹೋರ್: ಪತ್ನಿಗೆ ಬ್ಲಾಕ್ ಮೇಲ್ ಮಾಡಿ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರ ಮೂಗು, ಕಿವಿ ಮತ್ತು ತುಟಿಯನ್ನು ವ್ಯಕ್ತಿಯೊಬ್ಬ ಕತ್ತರಿಸಿರುವ ಘಟನೆ ಪಾಕಿಸ್ತಾನದ (Pakistan) ಪಂಜಾಬ್‌ ಪ್ರಾಂತ್ಯದಲ್ಲಿ ಸೋಮವಾರ ನಡೆದಿದೆ. ಲಾಹೋರ್‌ನಿಂದ (Lahore) ಸುಮಾರು 200 ಕಿಮೀ ದೂರದಲ್ಲಿರುವ ಝಾಂಗ್ ಜಿಲ್ಲೆಯಲ್ಲಿ ಭಾನುವಾರ ಮುಹಮ್ಮದ್ ಇಫ್ತಿಕರ್ ಎಂಬ ವ್ಯಕ್ತಿ ತನ್ನ ಸಹಚರರೊಂದಿಗೆ ಸೇರಿ ಕಾನ್‌ಸ್ಟೆಬಲ್ ಖಾಸಿಂ ಹಯಾತ್ ಎಂಬವರ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸುವ ಮೊದಲು ಆತನಿಗೆ ತೀವ್ರ ಚಿತ್ರಹಿಂಸೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹಯಾತ್ ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ ಇಫ್ತಿಕರ್, 12 ಸಹಚರರೊಂದಿಗೆ ಸೇರಿ ಹಯಾತ್​​ನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ತೀವ್ರ ಚಿತ್ರಹಿಂಸೆ ನೀಡಿ ನಂತರ ಆತನ ದೇಹದ ಭಾಗಗಳನ್ನು ಹರಿತವಾದ ಆಯುಧಗಳಿಂದ ಕತ್ತರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಝಾಂಗ್​​ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಹಯಾತ್ ಚಿಕಿತ್ಸೆ ಪಡೆಯುತ್ತಿದ್ದು ಈತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಕಳೆದ ತಿಂಗಳು ಹಯಾತ್ ವಿರುದ್ಧ ಇಫ್ತಿಕರ್ ದೂರು ನೀಡಿದ್ದು, ಪಾಕಿಸ್ತಾನ್ ಪೀನಲ್ ಕೋಡ್ (PPC) ಅಡಿಯಲ್ಲಿ 354 (ಮಹಿಳೆ ಮೇಲೆ ದೌರ್ಜನ್ಯ), 384 (ಸುಲಿಗೆ) ಮತ್ತು 292 (ಪೋರ್ನೋಗ್ರಫಿ) ಸೆಕ್ಷನ್ ಅಡಿಯಲ್ಲಿ ಹಯಾತ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಹಯಾತ್ ನನ್ನ ಪತ್ನಿಯಲ್ಲಿ ಆತನ ಜತೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದು ಮಗನನ್ನು ಹತ್ಯೆಮಾಡುವುದಾಗಿ ಬೆದರಿಕೆಯನ್ನೊಡ್ಡಿದ್ದ ಎಂದು ಇಫ್ತಿಕರ್ ದೂರು ನೀಡಿದ್ದನು. ನನ್ನ ಪತ್ನಿ ಹಯಾತ್ ನ್ನು ಭೇಟಿ ಮಾಡಿದಾಗ ಆತನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದ. ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದ ಆತ ಅದನ್ನು ತೋರಿಸಿ ಬ್ಲಾಕ್​​ಮೇಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಇಫ್ತಿಕರ್ ಮತ್ತು ಆತನ ಸಹಚರರನ್ನು ಪತ್ತೆ ಹಚ್ಚಲು ಪೊಲೀಸ್ ಜಾಲ ಬೀಸಿದೆ.