AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಸ್ಕಾನ್ಸಿನ್ ನದಿಯಲ್ಲಿ ಟ್ಯೂಬಿಂಗ್ ಮಾಡುತ್ತಿದ್ದ ಗುಂಪಿನ ಮೇಲೆರಗಿದ ಇವನು ಒಬ್ಬನನ್ನು ಕೊಂದು ನಾಲ್ವರನ್ನು ಗಾಯಗೊಳಿಸಿದ

ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದವರು ಮಿಯು ಜನರನ್ನು ಇರಿಯುತ್ತಿದ್ದ ಪೋಟೋಗಳನ್ನು ತೆಗೆದಿದ್ದಾರೆ. ಅವುಗಳ ನೆರವಿನಿಂದಲೇ ಪೊಲೀಸರು ಸುಮಾರು 90 ನಿಮಿಷಗಳ ಕಾರ್ಯಾಚರಣೆಯ ನಂತರ ಅವನನ್ನು ಸೆರೆಹಿಡಿದು ನದಿಯಿಂದ ಹೊರತಂದಿದ್ದಾರೆ.

ವಿಸ್ಕಾನ್ಸಿನ್ ನದಿಯಲ್ಲಿ ಟ್ಯೂಬಿಂಗ್ ಮಾಡುತ್ತಿದ್ದ ಗುಂಪಿನ ಮೇಲೆರಗಿದ ಇವನು ಒಬ್ಬನನ್ನು ಕೊಂದು ನಾಲ್ವರನ್ನು ಗಾಯಗೊಳಿಸಿದ
ಘಟನೆ ನಡೆದ ಸ್ಥಳ
TV9 Web
| Edited By: |

Updated on: Aug 03, 2022 | 8:08 AM

Share

ವಿಸ್ಕಾನ್ಸಿನ್ ನದಿಯಲ್ಲಿ ರಬ್ಬರ್ ದೋಣಿಗಳಲ್ಲಿ (ಟ್ಯೂಬಿಂಗ್) (tubing) ವಿಹರಿಸುತ್ತಿದ್ದ ಹಲವಾರು ಜನರನ್ನು ಹರಿತವಾದ ಅಯುಧವೊಂದರಿಂದ (sharp weapon) ಇರಿದ ಅರೋಪದಲ್ಲಿ ಬಂಧಿಸಲಾಗಿದ್ದ ಮಿನಿಸೊಟಾದ (Minnesota) ವ್ಯಕ್ತಿಯೊಬ್ಬನ ವಿರುದ್ಧ ಕೊಲೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಸಿಬಿಎಸ್ ಮಿನಿಸೋಟಾ ವರದಿ ಮಾಡಿದೆ. ಶನಿವಾರ ನಡೆದ ಇರಿತದ ಪ್ರಕರಣದಲ್ಲಿ 17-ವರ್ಷ-ವಯಸ್ಸಿನ ಯುವಕ ಬಲಿಯಾಗಿದ್ದ ಮತ್ತು ನಾಲ್ಕು ಜನ ಗಾಯಗೊಂಡಿದ್ದರು.

ಸೋಮಾವಾರದಂದು ವಿಸ್ಕಾನ್ ಸಿನ್ ಸೆಂಟ್ ಕ್ರಾಯಿಕ್ಸ್ ಕೌಂಟಿಯಲ್ಲಿ 52-ವರ್ಷ ವಯಸ್ಸಿನ ನಿಕೊಲಾಯ್ ಮಿಯು ವಿರುದ್ಧ ಪ್ರಥಮ-ಡಿಗ್ರಿ ಉದ್ದೇಶಪೂರ್ವಕ ಕೊಲೆ ಮತ್ತು ಪ್ರಥಮ-ಡಿಗ್ರಿ ಕೊಲೆ ಯತ್ನದ ನಾಲ್ಕು ದೋಷಾರೋಪಣೆಗಳನ್ನು ದಾಖಲಿಸಲಾಗಿದೆ. ಬೇಲ್ ಮೊತ್ತವನ್ನು ಒಂದು ಮಿಲಿಯನ್ ಡಾಲರ್ ಗಳಿಗೆ (ಸುಮಾರು 7 ಕೋಟಿ 85 ಲಕ್ಷ ರೂ.) ನಿಗದಿಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊತ್ತವು ಪ್ರಾಸಿಕ್ಯೂಟರ್ ಗಳು ಮನವಿ ಮಾಡಿದಕ್ಕಿಂತ ಎರಡು ಪಟ್ಟು ಜಾಸ್ತಿಯಾಗಿದೆ.

ನ್ಯಾಯಾಲಯದಲ್ಲಿ ಮಿಯು ವಕೀಲರು ಸದರಿ ಘಟನೆಯನ್ನು ‘ಅನಿರೀಕ್ಷಿತ’ ಎಂದು ಬಣ್ಣಿಸಿದ್ದಾರೆ.

ಮಿನಿಸೊಟಾ ಬಾರ್ಡರ್ ಗೆ ಹತ್ತಿರದಲ್ಲೇ ವಿಸ್ಕಾನ್ಸಿನ್ ನ ಸಾಮರ್ ಸೆಟ್ ಮೂಲಕ ಹರಿದು ಹೋಗುವ ಌಪಲ್ ನದಿಯಲ್ಲಿ ಟ್ಯೂಬಿಂಗ್ ಮಾಡುತ್ತಿದ್ದ ಐವರನ್ನು ತಿವಿದ ಆರೋಪ ಮಿಯು ಎದುರಿಸುತ್ತಿದ್ದಾನೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮಿಯು ತನ್ನ ಗುಂಪಿನ ಸದಸ್ಯರೊಂದಿಗೆ ತನ್ನ ಟಾರ್ಗೆಟ್ ಗಳ ಗುಂಪಿನ ಸದಸ್ಯರ ಪಕ್ಕದಲ್ಲೇ ಟ್ಯೂಬಿಂಗ್ ಮಾಡುತ್ತಿದ್ದ.

ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದವರು ಮಿಯು ಜನರನ್ನು ಇರಿಯುತ್ತಿದ್ದ ಪೋಟೋಗಳನ್ನು ತೆಗೆದಿದ್ದಾರೆ. ಅವುಗಳ ನೆರವಿನಿಂದಲೇ ಪೊಲೀಸರು ಸುಮಾರು 90 ನಿಮಿಷಗಳ ಕಾರ್ಯಾಚರಣೆಯ ನಂತರ ಅವನನ್ನು ಸೆರೆಹಿಡಿದು ನದಿಯಿಂದ ಹೊರತಂದಿದ್ದಾರೆ.

ಸೆಂಟ್ ಕ್ರಾಯಿಕ್ಸ್ ಕೌಂಟಿಯಲ್ಲಿ ಕಚೇರಿಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾವ ಕಾರಣಕ್ಕೆ ಅರೋಪಿ ಮತ್ತು ಹಲ್ಲೆಗೊಳಗಾದವರ ನಡುವೆ ಜಗಳ ಶುರುವಿಟ್ಟುಕೊಂಡಿತು ಅನ್ನೋದು ಅವರಿಗೆ ಗೊತ್ತಾಗಿಲ್ಲ. ಸಿಬಿಎಸ್ ಮಿನಿಸೋಟ ವರದಿಯ ಪ್ರಕಾರ ಜನ ಮಿಯು ಮತ್ತು ಹಲ್ಲೆಗೊಳಗಾದ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿರುವುದನ್ನು ವಿಡಿಯೋ ಮಾಡಿಕೊಂಡಿದ್ದು ಹಲ್ಲೆಗೊಳಗಾದ ಗುಂಪಿನವರು ಅವನಿಗೆ ತೊಲಗಾಚೆ ಅಂತ ಹೇಳುತ್ತಿರುವುದು ಕೇಳಿಸುತ್ತದೆ.

ವಿಡಿಯೋನಲ್ಲಿ ಮಿಯು ಏನನ್ನೋ ಹುಡುಕುತ್ತಿರುವಂತೆ ಗೋಚರಿಸುತ್ತದೆ. ಆದರೆ ದೂರುದಾರನ ಪ್ರಕಾರ ಮಿಯು ಹಿಂದೆ ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅರೋಪಕ್ಕೊಳಗಾಗಿದ್ದರಿಂದ ಪುಟ್ಟ ಹುಡುಗಿಯರಿಗಾಗಿ ಹುಡುಕಾಡುತ್ತಿದ್ದ ಎಂದಿದ್ದಾರೆ.

ಪೊಲೀಸರಿಗೆ ನೀಡಿರುವ ಸಂದರ್ಶನದಲ್ಲಿ ಮಿಯು ತನಗೆ ಜೀವದ ಬಗ್ಗೆ ಭಯ ಹುಟ್ಟಿಕೊಂಡಿತ್ತು ಮತ್ತು ತನ್ನ ಸೆಲ್ ಫೋನ್ ನೀರಲ್ಲಿ ಬಿದ್ದಿರಬಹುದೆಂದು ಭಾವಿಸಿ ಅದನ್ನೇ ಹುಡುಕುತ್ತಿದ್ದೆ ಅಂತ ಹೇಳಿದ್ದಾನೆ. ಅಪರಾಧ ನಡೆದ ಸ್ಥಳದಲ್ಲಿ ಸಿಕ್ಕ ಚೂರಿ ಗುಂಪಿನಲ್ಲಿದ್ದ ಬೇರೆ ಯಾರಿಗೋ ಸೇರಿದ್ದು ಅಂತ ಹೇಳಿರುವ ಮಿಯು ನಡೆದ ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ.

ಘಟನೆಯಲ್ಲಿ ಕೊಲೆಯಾದ ಯುವಕನನ್ನು ಪೊಲೀಸ್ ಅಧಿಕಾರಿಗಳು ಸ್ಟಿಲ್ ವಾಟರ್ ಹೈಸ್ಕೂಲ್ನ ವಿದ್ಯಾರ್ಥಿಯೆಂದು ಗುರುತಿಸಿದ್ದಾರೆ. ಹಲ್ಲೆಗೊಳಗಾದವರು 20-24ರ ಪ್ರಾಯದವರಾಗಿದ್ದು ಅವರ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ.

ಗಾಯಗೊಂಡವರಲ್ಲಿ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಯುನನ್ನು ಸೆಂಟ್ ಕ್ರಾಯಿಕ್ಸ್ ಕೌಂಟಿ ಜೈಲಲ್ಲಿ ಇರಿಸಲಾಗಿದೆ.