ಉಕ್ರೇನ್ನ ಅಜೋವ್ ರೆಜಿಮೆಂಟ್ನ್ನು ಉಗ್ರ ಗುಂಪು ಎಂದು ಘೋಷಿಸಿದ ರಷ್ಯಾದ ಸುಪ್ರೀಂಕೋರ್ಟ್
ಉಕ್ರೇನ್ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ.
ಮಾಸ್ಕೊ: ಉಕ್ರೇನ್ನ (Ukraine) ಅಜೋವ್ ರೆಜಿಮೆಂಟ್ನ್ನು (Azov Regiment) ರಷ್ಯಾದ (Russia) ಸುಪ್ರೀಂಕೋರ್ಟ್ ಉಗ್ರರ ಗುಂಪು ಎಂದು ಘೋಷಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಬಲಪಂಥೀಯ ಮತ್ತು ಅಲ್ಟ್ರಾ ನ್ಯಾಷನಲಿಸ್ಟ್ ಮೂಲದ್ದಾಗಿರುವ ಅಜೋವ್ ರೆಜಿಮೆಂಟ್, ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡುತ್ತಿರುವ ಅತ್ಯಂತ ಪ್ರಮುಖವಾದ ಉಕ್ರೇನಿಯನ್ ಮಿಲಿಟರಿ ರಚನೆಗಳಲ್ಲಿ ಒಂದಾಗಿದೆ. ಉಕ್ರೇನ್ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ. ರಷ್ಯಾದ ರಾಜ್ಯ ಅಜೆಂಡಾವು ಅಜೋವ್ ಹೋರಾಟಗಾರರನ್ನು ಎರಡನೇ ಮಹಾಯುದ್ಧದ ನಾಝಿಗಳಿಗೆ ಹೋಲಿಸಿದೆ.
ಪೂರ್ವ ಉಕ್ರೇನ್ನ ಮಾರಿಯುಪೋಲ್ನಲ್ಲಿ ಈ ಹಿಂದೆ ನಿಯೋಜನೆಯಾಗಿದ್ದ ಅಜೋವ್ ರೆಜಿಮೆಂಟ್ ನ ಸಿಬ್ಬಂದಿಗಳನ್ನು ಮೇ ತಿಂಗಳಲ್ಲಿ ರಷ್ಯಾ ಪಡೆ ವಶಕ್ಕೆ ತೆಗೆದುಕೊಂಡಿತ್ತು. ಮಾರಿಯುಪೋಲ್ ಅನ್ನು ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ರಷ್ಯಾದ ಬೆಂಬಲಿತ ಘಟಕವಾದ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ನ ಅಧಿಕಾರಿಗಳು ಮೇ ತಿಂಗಳಲ್ಲಿ ವಶಪಡಿಸಿಕೊಂಡ ಅಜೋವ್ ರೆಜಿಮೆಂಟ್ ಹೋರಾಟಗಾರರು ಸ್ವಯಂ ಘೋಷಿತ ಗಣರಾಜ್ಯದ ಕಾನೂನುಗಳ ಅಡಿಯಲ್ಲಿ ಮರಣದಂಡನೆಯನ್ನು ಎದುರಿಸಬಹುದು ಎಂದು ಹೇಳಿದ್ದಾರೆ.
Published On - 4:44 pm, Tue, 2 August 22