Morocco: ಮೊರಾಕ್ಕೋದ ಮಾರಕೇಶ್ ನೈಋತ್ಯ ಭಾಗದಲ್ಲಿ ಪ್ರಬಲ ಭೂಕಂಪ, 296 ಜನ ದುರ್ಮರಣ
ಮೊರಾಕ್ಕೋದ ಮರಕೇಶ್ನ ನೈಋತ್ಯ ಭಾಗದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಮರಕೇಶ್ನ ನೈಋತ್ಯಕ್ಕೆ 44 ಮೈಲಿ (71 ಕಿಲೋಮೀಟರ್) ದೂರದಲ್ಲಿ ರಾತ್ರಿ 11:11 ಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಘಟನೆಯಲ್ಲಿ 296 ಜನ ದುರ್ಮರಣ ಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಾಷಿಂಗ್ಟನ್, ಸೆ.9: ಮೊರಾಕ್ಕೋದ (Morocco) ಮರಕೇಶ್ನ ನೈಋತ್ಯ ಭಾಗದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಮರಕೇಶ್ನ ನೈಋತ್ಯಕ್ಕೆ 44 ಮೈಲಿ (71 ಕಿಲೋಮೀಟರ್) ದೂರದಲ್ಲಿ ರಾತ್ರಿ 11:11 ಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ 296 ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜಧಾನಿ ರಬಾತ್‌ನಿಂದ ದಕ್ಷಿಣಕ್ಕೆ 320 ಕಿಲೋಮೀಟರ್ ದೂರದಲ್ಲಿರುವ ಪ್ರವಾಸಿ ನಗರ ಮರ್ರಾಕೆಚ್ ಪ್ರದೇಶದಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣಕ್ಕೆ ಔರ್ಜಾಜೆಟ್ ಪ್ರಾಂತ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಭೂಕಂಪನದ ವೇಳೆ ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಕಿರಿದಾದ ಗಲ್ಲಿಗಳಲ್ಲಿ ವಸ್ತುಗಳು ಹಾರುತ್ತಿರುವುದು ತ್ತು ಕಪಾಟುಗಳಿಂದ ವಸ್ತುಗಳು ನೆಲಕ್ಕೆ ಬೀಳುತ್ತಿರುವುದನ್ನು ತೋರಿಸಿದೆ.
ಭೂಕಂಪಗಳ ಪರಿಣಾಮದ ಬಗ್ಗೆ ಪ್ರಾಥಮಿಕ ಮೌಲ್ಯಮಾಪನಗಳನ್ನು ಒದಗಿಸುವ USGS’s PAGER ವ್ಯವಸ್ಥೆಯು ಆರ್ಥಿಕ ನಷ್ಟಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಅಲ್ಲದೆ, ಗಮನಾರ್ಹ ಹಾನಿಯನ್ನು ಅಂದಾಜು ಮಾಡುವ ಸಾಧ್ಯತೆಯಿದೆ ಮತ್ತು ಕಂಪನ ಸಂಬಂಧಿತ ಸಾವುನೋವುಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
ಇದನ್ನೂ ಓದಿ: ಬೀದರ್: ಭಾಲ್ಕಿ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಲಘು ಭೂಕಂಪ
ಮರಕೇಶ್ನ ನೈಋತ್ಯ ಭಾಗವ ಭೂಕಂಪನಕ್ಕೆ ಹೆಚ್ಚು ಗುರಿಯಾಗುವ ಪ್ರದೇಶವಾಗಿದ್ದು, ಅಗ್ಗಾಗೆ ಭೂಮಿ ಕಂಪಿಸುತ್ತಿರುತ್ತದೆ. ಮೊರಾಕ್ಕೋದ ಉತ್ತರ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳನ್ನು ಸಂಭವಿಸುತ್ತದೆ. 2004 ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೊಸೈಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು. 926 ಮಂದಿ ಗಾಯಗೊಂಡಿದ್ದರು.
1980 ರಲ್ಲಿ, ನೆರೆಯ ಅಲ್ಜೀರಿಯಾದಲ್ಲಿ 7.3 ತೀವ್ರತೆಯ ಎಲ್ ಅಸ್ನಾಮ್ ಭೂಕಂಪವು ಇತ್ತೀಚಿನ ಇತಿಹಾಸದಲ್ಲಿ ಅತಿದೊಡ್ಡ ಮತ್ತು ಅತ್ಯಂತ ವಿನಾಶಕಾರಿ ಭೂಕಂಪಗಳಲ್ಲಿ ಒಂದಾಗಿದೆ. ಇದು 2,500 ಜನರನ್ನು ಬಲಿ ಪಡೆದಿತ್ತು ಮತ್ತು ಕನಿಷ್ಠ 3 ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 am, Sat, 9 September 23