ಈ ಜಮಾನಾದಲ್ಲಿ ಒಳ್ಳೆಯತನಕ್ಕೆ ನಿಜಕ್ಕೂ ಬೆಲೆಯಿಲ್ಲ ಮಾರಾಯ್ರೇ. ಅಮೆರಿಕದ ರೆಸ್ಟುರಾಂಟ್ ಒಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುವ ಯುವತಿಯೊಬ್ಬಳು ಹದಿಹರೆಯದ ವಿಕಲಚೇತನನಿಗೆ ಸಹಾಯ ಮಾಡಿದ್ದಕ್ಕೆ ಹಲ್ಲೆಗೊಳಗಾಗಿ ಒಂದ ಕಣ್ಣನ್ನೇ ಕಳೆದುಕೊಂಡಿರುವರೆಂದು ಫಾಕ್ಸ್-ಕೆಟಿವಿಯು ವರದಿ ಮಾಡಿದೆ. ಕ್ಯಾಲಿಪೋರ್ನಿರ್ಯಾದ ಆ್ಯಂಟಿಯೋಕ್ ನಲ್ಲಿರುವ ದಿ ಹ್ಯಾಬಿಟ್ ಬರ್ಗರ್ ಗ್ರಿಲ್ ನಲ್ಲಿ ವಿಕಲಚೇತನ ಹುಡುಗನೊಬ್ಬನಿಗೆ ನೆರವಾಗಲು ಧಾವಿಸಿ ಕಣ್ಣು ಕಳೆದುಕೊಂಡ 19-ವರ್ಷ-ವಯಸ್ಸಿನ ವ್ಯವಸ್ಥಾಪಕಿಯ ಹೆಸರು ಬಿಯಾಂಕಾ ಪ್ಲೊಮೆರಾ (Bianca Plomera). ಘಟನೆ ಶನಿವಾರ ನಡೆದಿದ್ದು, ರೆಸ್ಟುರಾಂಟ್ ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಕಲಚೇತನ ಯುವಕನಿಗೆ ಒಂದಷ್ಟು ಜನರ ಗುಂಪು ಕಿರುಕುಳ ನೀಡುತ್ತಿರುವುದನ್ನು ಗಮನಿಸುವ ಪ್ಲೊಮೆರಾ ಅವನ ನೆರವಿಗೆ ಧಾವಿಸಿದಾಗ ಒಬ್ಬ ದುರುಳ ಆಕೆಯ ಮೇಲೆ ನಡೆಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸ್ಥಳೀಯ ಪತ್ರಿಕೆಯೊಂದರ ಪ್ರಕಾರ ವಿಕಲಚೇತನ ಹುಡುಗ ಪ್ಲೋಮೆರಾಳ ಸಹೋದ್ಯೋಗಿಯೊಬ್ಬರ ಸಂಬಂಧಿ.
@raulbrindis Un hombre golpeó repetidamente a Bianca Palomera, 19, asistente. gerente de @habitburger en Mahogany en Antioch después de que ella le dijo que se fuera porque estaba acosando a un adolescente con necesidades especiales. @CaraTurky @DrZpitapita . pic.twitter.com/XTA7Pzym59
— Bunburyfan (@Bunburyfan8) November 17, 2022
‘ಹುಡುಗನಿಗೆ ಅವರು ಬಯ್ಯುತ್ತಿರುವುದನ್ನು ನಾನು ಕೇಳಿಸಿಕೊಂಡು ಅಲ್ಲಿಗೆ ಹೋದೆ. ಅವನನ್ನು ಸತಾಯಿಸುತ್ತಿದ್ದ ಒಬ್ಬ ವ್ಯಕ್ತಿಗೆ ನೀನು ಮಾಡುತ್ತಿರುವುದು ತಪ್ಪು, ಆ ಹುಡುಗ ಅಂಗವೈಕಲ್ಯ ಹೊಂದಿದ್ದಾನೆ. ಅಂಥವನನ್ನು ಪೀಡಿಸುವುದು ಸರಿಯಲ್ಲ. ತಾನೇನು ಮಾಡುತ್ತಿದ್ದೇನೆ ಅಂತ ಅವನಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದೆ,’ ಎಂದು ಪ್ಲೊಮೆರಾ ಪತ್ರಿಕೆಗೆ ತಿಳಿಸಿದ್ದಾಳೆ.
ಅದಾದ ಮೇಲೆ ಆ ವ್ಯಕ್ತಿ ಯಾವುದೇ ಎಚ್ಚರಿಕೆ ನೀಡದೆ ಪ್ಲೊಮೆರಾ ಮುಖಕ್ಕೆ ಗುದ್ದಿದ್ದಾನೆ ಮತ್ತು ಜೋರಾಗಿ ಬೈದಾಡಿದ್ದಾನೆ. ನಂತರ ಅವನು ಎರಡನೇ ಬಾರಿ ಅವಳ ಮುಖಕ್ಕೆ ಪಂಚ್ ಮಾಡಿದ್ದಾನೆ. ಅವಳು ಹೇಳುವ ಪ್ರಕಾರ ಎರಡನೇ ಹೊಡೆತವೇ ಅವಳ ಕಣ್ಣನ್ನು ಹಾಳು ಮಾಡಿದೆ.
‘ಅವನು ನನ್ನ ಮೇಲೆ ಹಲ್ಲೆ ನಡೆಸಬಹುದೆಂದು ಭಾವಿಸಿರಲಿಲ್ಲ,’ ಎಂದು ಪ್ಲೊಮೆರಾ ಫಾಕ್ಸ್-ಕೆಟಿವಿಯು ಗೆ ಹೇಳಿದ್ದಾಳೆ.
ಅವಳ ಬಲಗಣ್ಣಿನಿಂದ ರಕ್ತ ಸುರಿಯುತ್ತಿದ್ದುದನ್ನು ನೋಡಿದ ಕೂಡಲೇ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ. ವೈದ್ಯರು ತಡಮಾಡದೆ ಶಸ್ತ್ರಚಿಕಿತ್ಸೆ ನಡೆಸಿದರಾದರರೂ ಅವಳ ಕಣ್ಣನ್ನು ಉಳಿಸುವುದು ಸಾಧ್ಯವಾಗಿಲ್ಲ.
ಅವಳ ಕಣ್ಣಿನ ಭಾಗವನ್ನು ಬ್ಯಾಂಡೇಜ್ ಮಾಡಲಾಗಿದೆ. ಅಷ್ಟು ಭೀಕರವಾದ ಹಲ್ಲೆಗೊಳಗಾದರೂ ಪ್ಲೊಮೆರಾ ಮಾತ್ರ ಧೃತಿಗೆಡದೆ, ತಾನ ಮಾಡಿದ್ದರಲ್ಲಿ ತಪ್ಪಿಲ್ಲ, ಎಂದಿದ್ದಾಳೆ.
‘ಅದೊಂದು ದುಸ್ವಪ್ನ ಅಂದುಕೊಂಡು ಕಣ್ಣು ತೆರೆಯಲು ಪ್ರಯತ್ನಿಸುತ್ತೇನೆ ಆದರೆ ಬರೀ ಕತ್ತಲು ಮಾತ್ರ ಗೋಚರವಾಗುತ್ತದೆ. ಕಣ್ಣು ಹೋಗಿದ್ದಕ್ಕೆ ವಿಷಾದವಿದೆ, ಆದರೆ ನಾನು ಮಾಡಿದ್ದರಲ್ಲಿ ತಪ್ಪೇನೂ ಇರಲಿಲ್ಲ,’ ಎಂದು ಪ್ಲೊಮೆರಾ ಹೇಳಿದ್ದಾಳೆ.
ಆ್ಯಂಟಿಯೋಕ್ ಪೊಲೀಸರು ತನಿಖೆಯನ್ನು ಅರಂಭಿಸಿದ್ದು, ತನ್ನೊಂದಿಗಿದ್ದ ಜನರ ಜೊತೆ ಬಿಎಮ್ ಡಬ್ಲ್ಯೂ ಕಾರಲ್ಲಿ ಹೋದ ಹಲ್ಲೆಕೋರನ ಪತ್ತೆಗೆ ಜಾಲ ಬೀಸಿದ್ದಾರೆ. ಪ್ಲೊಮೆರಾ ಆರ್ಥಿಕ ನೆರವು ಕೋರಿ ಅವಳ ಕುಟುಂಬವು GoFundMe page ಆರಂಭಿಸಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Fri, 18 November 22