Lima: ಟೇಕಾಫ್ ವೇಳೆ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದ ವಿಮಾನ, ಇಬ್ಬರು ಸಿಬ್ಬಂದಿಗಳು ಸಾವು
ವಿಮಾನವೊಂದು ಟೇಕಾಫ್ ವೇಳೆ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾವನ್ನಪ್ಪಿರುವ ಘಟನೆ ಲಿಮಾದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ.
ಲಿಮಾ: ವಿಮಾನವೊಂದು ಟೇಕಾಫ್ ವೇಳೆ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಾವನ್ನಪ್ಪಿರುವ ಘಟನೆ ಲಿಮಾದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಟೇಕಾಫ್ ಸಮಯದಲ್ಲಿ ವಿಮಾನವು ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದು ನಂತರ ರನ್‌ವೇಯಲ್ಲಿ ಅಪಘಾತಕ್ಕೀಡಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
102 ಪ್ರಯಾಣಿಕರು ವಿಮಾನದಲ್ಲಿದ್ದರು ಆದರೆ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಸದಸ್ಯರು ಪ್ರಾಣ ಅಪಾಯವಾಗಿಲ್ಲ ಎಂದು ದೇಶೀಯ ವಿಮಾನಯಾನವನ್ನು ನಿರ್ವಹಿಸಿದ ಏರ್ಲೈನ್ LATAM ಹೇಳಿದೆ. ಪೆರುವಿಯನ್ ಟೆಲಿವಿಷನ್ ಚಾನೆಲ್‌ಗಳು ಪ್ರಸಾರ ಮಾಡಿದ ದೃಶ್ಯಾವಳಿಗಳು ವಿಮಾನವನ್ನು ತೋರಿಸಿದೆ. ಏರ್‌ಬಸ್ A320, ಏರ್‌ಕ್ರಾಫ್ಟ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳ ಪ್ರಕಾರ ವಿಮಾನ ಬಹಳ ವೇಗದಲ್ಲಿ ಟೇಕ್ ಆಫ್ ಆಗಿದೆ, ಇದು ಟೇಕ್ ಆಫ್ ಆಗುವ ವೇಳೆ ಅಗ್ನಿಶಾಮಕ ಟ್ರಕ್‌ಗೆ ಹೊಡೆದಿದೆ ಎಂದು ಹೇಳಿದ್ದಾರೆ.
ವಿಮಾನವು ತನ್ನ ಬಲಭಾಗದಲ್ಲಿದ್ದ ವಾಹನಗಳನ್ನು ರನ್‌ವೇ ಉದ್ದಕ್ಕೂ ಎಳೆದುಕೊಂಡು ಹೋಗಿದೆ. ಇದರಿಂದ ದೊಡ್ಡದಾಗಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಹಿಂಭಾಗವು ತೀವ್ರವಾಗಿ ಸುಟ್ಟುಹೋಗಿದೆ. ಜಾರ್ಜ್ ಚಾವೆಜ್ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಲಿಮಾ ಏರ್‌ಪೋರ್ಟ್ ಪಾರ್ಟ್‌ನರ್ಸ್ (LAP) ಅಗ್ನಿಶಾಮಕ ಇಂಜಿನ್ ಮತ್ತು ಲಿಮಾದಿಂದ ಜೂಲಿಯಾಕಾಗೆ ಹಾರಾಟ ನಡೆಸುತ್ತಿರುವ LA2213 ವಿಮಾನದ ನಡುವೆ ಸಂಭವಿಸಿದ ಅಪಘಾತದಲ್ಲಿ LAP ಏರೋನಾಟಿಕಲ್ ಅಗ್ನಿಶಾಮಕ ದಳದ ಇಬ್ಬರು ಸದಸ್ಯರ ಸಾವನ್ನಪ್ಪಿದ್ದಾರೆ.
ಇದನ್ನು ಓದಿ; ಹೊಳಲ್ಕೆರೆ: ಖಾಸಗಿ ಬೈಕ್-ಬಸ್ ಮುಖಾಮುಖಿ, ಸ್ಥಳದಲ್ಲೇ ನಾಲ್ವರು ಸಾವು
ಘಟನೆಯ ಕಾರಣವನ್ನು ಕಂಡುಹಿಡಿಯಲು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ವಿಮಾನ ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 3:25ಕ್ಕೆ (2025 GMT) ಈ ಘಟನೆ ನಡೆದಿದೆ, ಸ್ಥಳಕ್ಕೆ ನಾಲ್ಕು ಆಂಬುಲೆನ್ಸ್‌ಗಳು ಮತ್ತು ರಕ್ಷಣಾ ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಲಿಮಾ ಅಗ್ನಿಶಾಮಕ ದಳ ತಿಳಿಸಿದೆ.
#LATAM #airplanecrash update. Looks like the Lima Airport tower failed to control the traffic on the runway. Fire truck and airplane on runway. pic.twitter.com/FQOVo3mE6T
— Dore (@Sharkpatrol32) November 18, 2022
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಮುಂದಿನ ಸೂಚನೆ ಬರುವವರೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಹಣಾ ಕಂಪನಿ ತಿಳಿಸಿದೆ. ಕಳೆದ ತಿಂಗಳು, 48 ಪ್ರಯಾಣಿಕರಿದ್ದ LATAM ವಿಮಾನವು ತೀವ್ರ ಚಂಡಮಾರುತದಿಂದ ಪರಾಗ್ವೆಯ ಅಸುನ್ಸಿಯಾನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ