ಬ್ರಿಟನ್​ನಲ್ಲಿ ಮನೆ ನವೀಕರಣ ಕಾರ್ಯದಲ್ಲಿ ತೊಡಗಿದ ದಂಪತಿಗೆ ಸಿಕ್ಕಿದ್ದು ರೂ. 2.30 ಕೋಟಿ ಮೌಲ್ಯದ ಚಿನ್ನದ ನಾಣ್ಯಗಳು: ವರದಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2022 | 8:05 AM

ಅಸಲಿಗೆ ಅವರಿಗೆ ನಾಣ್ಯಗಳ ಸಿಕ್ಕಿದ್ದು 2019 ರಲ್ಲಾದರೂ ವಿಷಯವನ್ನು ಅವರು ಈಗ ಬಯಲು ಮಾಡಿದ್ದಾರೆ. ಅಂದಹಾಗೆ, ಚಿನ್ನದ ನಾಣ್ಯಗಳು ಸುಮಾರು 400 ವರ್ಷಗಳಷ್ಟು ಹಿಂದಿನವು ಅಂತ ಹೇಳಲಾಗಿದೆ.

ಬ್ರಿಟನ್​ನಲ್ಲಿ ಮನೆ ನವೀಕರಣ ಕಾರ್ಯದಲ್ಲಿ ತೊಡಗಿದ ದಂಪತಿಗೆ ಸಿಕ್ಕಿದ್ದು ರೂ. 2.30 ಕೋಟಿ ಮೌಲ್ಯದ ಚಿನ್ನದ ನಾಣ್ಯಗಳು: ವರದಿ
ಸಾಂದರ್ಭಿಕ ಚಿತ್ರ
Follow us on

ಹಿಂದಿಯಲ್ಲಿ ಒಂದು ಹಾಡಿದೆ, ‘ದೇನೆವಾಲಾ ಜಬ್ ಭೀ ದೇತಾ ದೇತಾ ಛಪ್ಪಡ್ ಫಾಡ್ಕೆ’ ಅಂತ. ಯುನೈಟೆಡ್ ಕಿಂಗ್ಡಮ್ (United Kiddom) ಒಂದು ದಂಪತಿಯ ಬದುಕಿನಲ್ಲಿ ಇದು ಅಕ್ಷರಶಃ ನಿಜವಾಗಿದೆ ಮಾರಾಯ್ರೇ! ಯುಕೆ ಮೂಲದ ದಿ ಟೈಮ್ಸ್ ಪತ್ರಿಕೆಯ ವರದಿಯೊಂದರ ಪ್ರಕಾರ ತಮ್ಮ ಮನೆಯ ನವೀಕರಣ ಕೆಲಸ ಕೈಗೆತ್ತಿಕೊಂಡಿದ್ದ ದಂಪತಿಗೆ ಅಡುಗೆ ಮನೆಯನ್ನು ಅಗೆದಾಗ 264 ಚಿನ್ನದ ನಾಣ್ಯಗಳ (gold coins) ಗಂಟು ಸಿಕ್ಕಿದ್ದು ಇದರ ಮೌಲ್ಯ ಭಾತೀಯ ಕರೆನ್ಸಿ ಪ್ರಕಾರ ರೂ. 2.30 ಕೋಟಿ. ಪ್ರಾಚೀನ ಕಾಲದ ನಾಣ್ಯಗಳ ಸದರಿ ಗಂಟನ್ನು ದಂಪತಿಯು ಹರಾಜಿನ ಮೂಲಕ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಹೆಸರನ್ನು ಹೇಳಿಕೊಳ್ಳಲು ಇಚ್ಛಿಸದ ಉತ್ತರ ಯಾರ್ಕಶೈರ್ ನ (North Yorkshire) ಪತಿ-ಪತ್ನಿ ಆ ಮನೆಯಲ್ಲಿ 10 ವರ್ಷಗಳಿಂದ ವಾಸವಾಗಿದ್ದಾರಂತೆ.

ಅಸಲಿಗೆ ಅವರಿಗೆ ನಾಣ್ಯಗಳ ಸಿಕ್ಕಿದ್ದು 2019 ರಲ್ಲಾದರೂ ವಿಷಯವನ್ನು ಅವರು ಈಗ ಬಯಲು ಮಾಡಿದ್ದಾರೆ. ಅಂದಹಾಗೆ, ಚಿನ್ನದ ನಾಣ್ಯಗಳು ಸುಮಾರು 400 ವರ್ಷಗಳಷ್ಟು ಹಿಂದಿನವು ಅಂತ ಹೇಳಲಾಗಿದೆ.

ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡಲಿರುವ ಸ್ಪಿಂಕ್ ಅಂಡ್ ಸನ್ ಸಂಸ್ಥೆಯ ಗ್ರೆಗರಿ ಎಡ್ಮಂಡ್ ಅವರು, ‘ಸಾರ್ವಜನಿಕ ಮಾರುಕಟ್ಟೆ ಪ್ರದೇಶದಲ್ಲಿ ಇವುಗಳ ಮೌಲ್ಯ ಎಷ್ಟಾಗಬಹುದೆಂಬ ಯೋಚನೆಯೇ ನಮ್ಮನ್ನು ರೋಮಾಂಚನಗೊಳಿಸುತ್ತಿದೆ,’ ಎಂದು ಹೇಳಿದ್ದಾರೆ ಅಂತ ಪತ್ರಿಕೆ ಉಲ್ಲೇಖಿಸಿದೆ. ‘ಇಷ್ಟು ದೊಡ್ಡ ಪ್ರಮಾಣದ ಹರಾಜು ಪ್ರಕ್ರಿಯೆಯನ್ನು ನಾವು ಹಿಂದೆ ಯಾವತ್ತೂ ನಡೆಸಿರಲಿಲ್ಲ,’ ಎಂದು ಎಡ್ಮಂಡ್ ಹೇಳಿದ್ದಾರೆ.

ಎಲ್ಲರ್ಬೈ ಹೆಸರಿನ ಗ್ರಾಮವೊಂದರಲ್ಲಿ 18ನೇ ಶತಮಾನದ ಆಸ್ತಿಯೊಂದು ಭಾಗವಾಗಿ ತಮಗೆ ಸಿಕ್ಕ ಭಾಗದ ಮನೆಯ ಕಿಚನ್ ನೆಲಹಾಸನ್ನು ದಂಪತಿ ಅಗೆಸಿದಾಗ ನಾಣ್ಯಗಳ ಗಂಟು ಸಿಕ್ಕಿದೆ. ನೆಲಹಾಸಿನ ಕಾಂಕ್ರೀಟನ್ನು ಕೇವಲ ಆರು ಇಂಚುಗಳಷ್ಟು ಆಳ ಅಗೆದಾದ ಸಿಕ್ಕ ನಾಣ್ಯಗಳನ್ನು ಲೋಹದ ಪೆಟ್ಟಿಹಗೆಯೊಂದರಲ್ಲಿ ಇಡಲಾಗಿತ್ತಂತೆ.

ಮೊದಲಿಗೆ ಅವರು ಎಲೆಕ್ಟ್ರಿಕ್ ಕೇಬಲ್ ಇರಬಹುದೇನೋ ಅಂದುಕೊಂಡಿದ್ದರಂತೆ. ಆದರೆ ಹಾಸನ್ನು ಎತ್ತಿದಾಗ ಅವರಿಗೆ ಕೋಕ್ ಕ್ಯಾನ್ ಗಾತ್ರದ ಪೆಟ್ಟಿಗೆ ಸಿಕ್ಕಿದೆ, ಎಂದು ದಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಗಂಡ-ಹೆಂಡತಿ ನಾಣ್ಯಗಳನ್ನು ಪರಿಶೀಲಿಸಿದಾಗ ಅವು 1610 ರಿಂದ 1727ರವರೆಗೆ ರಾಜ್ಯಭಾರ ನಡೆಸಿದ್ದ ಜೇಮ್ಸ್ ಮತ್ತು ಚಾರ್ಲ್ಸ್ ಅವರ ಕಾಲದವು ಅನ್ನೋದು ಗೊತ್ತಾಗಿದೆ. ಅವರಿಗೆ ಸಿಕ್ಕ ನಾಣ್ಯಗಳು ಹಲ್ ಹೆಸರಿನ ಪ್ರತಿಷ್ಠಿತ ಮತ್ತು ವ್ಯಾಪಾರಸ್ಥ ಕುಟುಂಬಕ್ಕೆ ಸೇರಿದ ಆಸ್ತಿಯಾಗಿದ್ದವು ಎನ್ನಲಾಗಿದೆ, ಅಂತ ಪತ್ರಿಕೆ ವರದಿ ಮಾಡಿದೆ.

ಕಳೆದ ತಿಂಗಳು ಭಾರತದ ಮಧ್ಯ ಪ್ರದೇಶದಲ್ಲೂ ಚಿನ್ನದ ನಾಣ್ಯಗಳ ಗಂಟು ಸಿಕ್ಕ ಘಟನೆ ಬೆಳಕಿಗೆ ಬಂದಿತ್ತು. ಧಾರ್ ಜಿಲ್ಲೆಯಲ್ಲಿ ಹಳೆಯ ಗೋಡೆಯೊಂದನ್ನು ಕೆಡವುವ ವೇಳೆ ಕೂಲಿ ಕಾರ್ಮಿಕರಿಗೆ ರೂ. 60 ಲಕ್ಷ ಬೆಲೆ ಬಾಳುವ 86 ಚಿನ್ನದ ನಾಣ್ಯಗಳು ಸಿಕ್ಕಿದ್ದವು.

ಅವುಗಳನ್ನು ಮಾರುವ ಯತ್ನ ಮಾಡಿದ್ದ ಕಾರ್ಮಿಕರನ್ನು ಬಂಧಿಸಲಾಗಿತ್ತು.