ಲಂಡನ್: ಪೋಲಿಂಗ್ ಡಾಟಾವನ್ನು (polling data) ಆಧರಿಸಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ಬ್ರಿಟನ್ನಿನ ಪ್ರಧಾನ ಮಂತ್ರಿ ರಿಷಿ ಸುನಕ್ (Rishi Sunak) ಮತ್ತು ಅವರ ಸಚಿವ ಸಂಪುಟದ 15 ಸಚಿವರು 2024 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಲ್ಲಿ ಪರಾಭವಗೊಳ್ಳಲಿದ್ದಾರೆ. ಟೋರಿಯ ಪ್ರಮುಖ ನಾಯಕರಾಗಿರುವ ಪ್ರಧಾನ ಮಂತ್ರಿ ಸುನಕ್, ಉಪ ಪ್ರಧಾನಿ ಡೊಮಿನಿಕ್ ರಾಬ್ (Dominic Robb) ಮತ್ತು ಆರೋಗ್ಯ ಸಚಿವ ಸ್ಟೀವ್ ಬಾರ್ಕ್ಲೇ ಸೇರಿದಂತೆ ಇನ್ನೂ ಕೆಲ ನಾಯಕರು 2024ರ ಜನರಲ್ ಎಲೆಕ್ಷನ್ ನಲ್ಲಿ ಸೋಲಲಿದ್ದಾರೆ ಎಂದು ಸ್ವತಂತ್ರ ಮಾಧ್ಯಮಗಳಿಗೆ ಲಭ್ಯವಾಗಿರುವ ಪೋಲಿಂಗ್ ಡಾಟಾ ತಿಳಿಸುತ್ತದೆ.
ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲೀ, ರಕ್ಷಣಾ ಸಚಿವ ಬೆನ್ ವ್ಯಾಲೇಸ್, ಉದ್ದಿಮೆ ಸಚಿವೆ ಗ್ರ್ಯಾಂಟ್ ಶಾಪ್ಸ್, ಲೀಡರ್ ಆಫ್ ಕಾಮನ್ಸ್ ಪೆನ್ನಿ ಮೊರ್ಡೌಂಟ್ ಮತ್ತು ಪರಿಸರ ಖಾತೆ ಸಚಿವೆ ಥೆರೆಸಿ ಕೊಫೀ ಸಹ ಸೋಲಹುದಾದ ನಾಯಕರು ಎಂದು ಹೇಳಲಾಗಿದೆ. ಕ್ಯಾಬಿನೆಟ್ ದರ್ಜೆಯ ಕೇವಲ ಐವರು ಸಚಿವರು-ಜೆರ್ಮಿ ಹಂಟ್, ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್‌ಮನ್, ಮೈಕೆಲ್ ಗೊವ್, ನಾಧಿಮ್ ಜವಾವಿ ಮತ್ತು ಕೆಮಿ ಬಡೆನೋಚ್- 2024 ರ ಚುನಾವಣೆಯಲ್ಲಿ ಗೆಲ್ಲಬಹುದೆಂದು ವರದಿಯಲ್ಲಿ ಉಲ್ಲೇಖವಾಗಿದೆ.
ದಿ ಇಂಡಿಪೆಂಡೆಂಟ್ ಮಾಧ್ಯಮದಲ್ಲಿ ಶೇರ್ ಅಗಿರುವ ಮಾಹಿತಿಯ ಪ್ರಕಾಖ ಪ್ರತಿಬಾರಿ ಅಧಿಕಾರಕ್ಕೆ ಬರುವ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ 10 ನಿರ್ಣಾಯಕ ‘ಬೆಲ್ ವೆದರ್’ ಸೀಟುಗಳು 2024 ರಲ್ಲಿ ಲೇಬರ್ ಪಕ್ಷದ ಅಬ್ಯರ್ಥಿಗಳನ್ನು ಗೆಲ್ಲಿಸಲಿವೆಯಂತೆ.
‘ಸುನಾಕ್ ಅವರ ಸಂಪುಟ ಧೂಳಿಪಟವಾಗೋದು ಹೆಚ್ಚುಕಡಿಮೆ ಖಾತ್ರಿಯಾಗಿದೆ,’ ಎಂದು ಅಂತರರಾಷ್ಟ್ರೀಯ ಮೌಲ್ಯಗಳು ಮತ್ತು ಯುರೋಪಿಯನ್ ಯೂನಿಯನ್ ಜೊತೆ ನಿಕಟ ಬಾಂಧವ್ಯಕ್ಕಾಗಿ ಶ್ರಮಿಸುತ್ತಿರುವ ಬೆಸ್ಟ್ ಆಫ್ ಬ್ರಿಟನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ನವೋಮಿ ಸ್ಮಿತ್ ಹೇಳಿದ್ದಾರೆ.
ಹೆಚ್ಚಿನ ಪ್ರಮಾಣದ ಅನಿಶ್ಚಿತಿತ ಮತದಾರರು ಟೋರಿಗಳಿಗೆ ಚುನಾವಣೆಯನ್ನು ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಸ್ಮಿತ್ ಹೇಳಿದ್ದಾರೆ. ಸುನಕ್ ಅವರ ಪಕ್ಷಕ್ಕೆ ಕಡಿಮೆ ಪ್ರಮಾಣದ ಮತದಾನದ ಹೊರತಾಗಿಯೂ, ಬೆಸ್ಟ್ ಫಾರ್ ಬ್ರಿಟನ್‌ನ ವಿಶ್ಲೇಷಣೆಯು ಟೋರಿಗಳ ಮೇಲೆ ಲೇಬರ್ ಪಕ್ಷದ ಭಾರಿ ಮುನ್ನಡೆಯು ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ದುರ್ಬಲವಾಗಿರಬಹುದಾದ ಸಾಧ್ಯತೆಯಿದೆ ಎನ್ನುವುದನ್ನು ಬಹಿರಂಗಪಡಿಸಿದೆ.
ಇತ್ತೀಚಿನ ಸಮೀಕ್ಷೆಗಳು ಲೇಬರ್‌ಗೆ ಸುಮಾರು 20 ಪಾಯಿಂಟ್ ಗಳ ಮುನ್ನಡೆ ನೀಡಿರುವುದರಿಂದ 42-ವರ್ಷ ವಯಸ್ಸಿನ ಸುನಕ್, 2023 ರ ಆರಂಭದಲ್ಲೇ ಟೋರಿಯ ಅದೃಷ್ಟವನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿದ್ದಾರೆ. ಲಿಜ್ ಟ್ರಸ್ ರಿಂದ ಸುನಕ್ ಅಧಿಕಾರ ವಹಿಸಿಕೊಂಡ ನಂತರ ಅಲ್ಪ ಪ್ರಮಾಣದದ ಮತದಾನ ಟೋರಿಗಳ ಪರ ವಾಲಿದ್ದು ನಿಜವಾದರೂ ಈಗ ಅದು ‘ಫ್ಲಾಟ್‌ಲೈನ್‘ ಆಗಿದೆ ಎಂದು ಮತದಾನ ತಜ್ಞರು ಹೇಳಿರುವುದು ವರದಿ ತಿಳಿಸಿದೆ.
ಈ ವಾರದ ಆರಂಭದಲ್ಲಿ ಸುನಕ್ ಬ್ರಿಟನ್ನಿನ ಆರ್ಥಿಕ ಸ್ಥಿತಿಯನ್ನು ಪುನರುಜ್ಜೀವಗೊಳಿಸುವ ಐದು ಭರವಸೆಗಳನ್ನು ನೀಡುವ ಮೂಲಕತಮ್ಮ ನಾಯಕತ್ವ ಪುನರ್ ಸ್ಥಾಪಿಸಲು ಪ್ರಯತ್ನಿಸಿದರು.
ಇದನ್ನೂ ಓದಿ: ಡಾ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ 3ನೇ ಭಾರತ ರತ್ನ; ದೇಶಕ್ಕೆ ಮೋದಿ, ರಾಜ್ಯಕ್ಕೆ ಸುಧಾಕರ್ -ಸಚಿವ ಮುನಿರತ್ನ ಬಣ್ಣನೆ
ಆದರೆ ಇತ್ತೀಚಿನ ಎಮ್ ಆರ್ ಪಿ ಚುನಾವಣಾ ಸಮೀಕ್ಷೆಗಳು ಸುನಕ್ ಅವರ ನಾಯಕತ್ವದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದು ಅವರ ಮೊದಲ ಅಗ್ನಿಪರೀಕ್ಷೆ ಮೇ ನಲ್ಲಿ ಜರುಗಲಿರುವ ಸ್ಥಳೀಯ ಚುನಾವಣೆಗಳಲ್ಲಿ ನಡೆಯಲಿದೆ. ಪಕ್ಷದ ಕಳಾಹೀನ ಪ್ರದರ್ಶನ ಹಿಂದಿನ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಅವರನ್ನು ಮತ್ತೆ ಮುನ್ನೆಲೆಗೆ ತರಬಹುದು ಎಂದು ಟೋರಿಯ ಪಕ್ಷದ ಕೆಲ ಸದಸ್ಯರು ಹೇಳುತ್ತಿದ್ದಾರೆ.
ಜಾನ್ಸನ್ ಅವರ ಬೆಂಬಲಿಗರನ್ನೊಳಗೊಂಡ ಟೋರಿ ಮೂಲ ಸದಸ್ಯರ ಗುಂಪು ಒಂದು ‘ಮೊಮೆಂಟಮ್-ಶೈಲಿ’ ಅಭಿಯಾನ ಆರಂಭಿಲು ಅಣಿಯಾಗಿದ್ದು ಅವರ ಅಭಿಯಾನದ ಮೂಲ ಉದ್ದೇಶ ಅಭ್ಯರ್ಥಿಗಳ ಆಯ್ಕೆಯ ಸಂಪೂರ್ಣ ಅಧಿಕಾರವನ್ನು ಸದಸ್ಯರಿಗೆ ನೀಡಬೇಕೆನ್ನುವುದಾಗಿದೆ.
ಕಳೆದ ಜುಲೈನಲ್ಲಿ ಸುನಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಲೇ ಸರ್ಕಾರದ ಅವನತಿ ಶುರುವಾಯಿತು ಎಂದು ಜಾನ್ಸನ್ ಬೆಂಬಲಿಗರು ಹೇಳುತ್ತಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ