ಫ್ಲೋರಿಡಾದ ’ಹೌಸ್ ಆಫ್ ಹಾರರ್ಸ್‘ನಲ್ಲಿ ಪತ್ತೆಯಾದ ದೇಹದ ಅವಶೇಷಗಳು 41-ವರ್ಷ ಹಿಂದೆ ಕಾಣೆಯಾಗಿದ್ದ ಹದಿಹರೆಯದ ಹುಡುಗಿಯದ್ದು!
ಮ್ಯಾನ್ಸ್ ಫೀಲ್ಡ್ ಈಗಾಗಲೇ ಅಪಹರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವಾರು ಅಪರಾಧಗಳಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನು ಮೊದಲಿಗೆ ಹಲ್ಲೆ ನಡೆಸಿದ್ದು ಕ್ಯಾಲೊಫೋರ್ನಿಯಾದ ಬಾರೊಂದರಲ್ಲಿ ಡಿಸೆಂಬರ್ 6, 1980 ರಂದು ಭೇಟಿಯಾದ 30-ವರ್ಷ-ವಯಸ್ಸಿನ ರೇನೀ ಸೇಲಿಂಗ್ ಹೆಸರಿನ ಮಹಿಳೆ ವಿರುದ್ಧ, ಎಂದು ತಂಪಾ ಬೇ ಟೈಮ್ಸ್ ವರದಿ ಮಾಡಿದೆ.
ಫ್ಲೋರಿಡಾದ ಡಂಪಿಂಗ್ ಯಾರ್ಡ್ ಒಂದರಲ್ಲಿ 41 ವರ್ಷಗಳ ಹಿಂದೆ ಪತ್ತೆಯಾಗಿದ್ದ ದೇಹದ ಅವಶೇಷಗಳು (remains) ಕಾಣೆಯಾಗಿದ್ದ ಹದಿ ಹರೆಯದ ಹುಡುಗಿಯೊಬ್ಬಳವು ಅಂತ ಪೊಲೀಸರು ಖಚಿತಡಿಸಿದ್ದಾರೆ. ಈಗ ಸೆರೆಮನೆಯೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸರಣಿ ಹಂತಕನಿಗೆ (serial killer) ಬಲಿಯಾದವರಲ್ಲಿ ಸದರಿ ಹುಡುಗಿಯೂ ಒಬ್ಬಳೆಂದು ಕ್ಯಾಲಿಫೋರ್ನಿಯಾ ಶರೀಫ್ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.
ಏಪ್ರಿಲ್ 1981 ರಲ್ಲಿ ಪತ್ತೆಯಾದ ನಾಲ್ಕು ದೇಹಗಳ ಪೈಕಿ ಒಂದು ಥೆರೆಸಾ ಕ್ಯಾರೊಲಿನ್ ಫಿಲ್ಲಿಂಗಿಮ್ ಳದ್ದು (Theresa Carolene Fillingim) ಒಂದು ಎಂದು ಹೆರ್ನಾಂಡೋ ಕೌಂಟಿ ಶೆರೀಫ್ ತನಿಖಾಧಿಕಾರಿಗಳು, ನಾರ್ತ್ ಟೆಕ್ಸಾಸ್ ವಿಶ್ವವಿದ್ಯಾಲಯ ಮತ್ತು ವರ್ಜೀನಿಯಾ ಮೂಲದ ಡಿಎನ್ ಎ ತಂತ್ರಜ್ಞಾನ ಕಂಪನಿ ಪ್ಯಾರಾಬನ್ ನ್ಯಾನೋ ಲ್ಯಾಬ್ಸ್‌ನ ಸಹಾಯದಿಂದ ಪತ್ತೆಮಾಡಿದ್ದಾರೆ. ನಾಲ್ಕು ದೇಹಗಳು ಪತ್ತೆಯಾದ ಆ ಮನೆಯನ್ನು ಅದರ ನೆರೆಹೊರೆಯವರು ಈಗಲೂ ‘ಹೌಸ್ ಆಫ್ ಹಾರರ್ಸ್’ ಎಂದು ಕರೆಯುತ್ತಾರೆ. ಇತರ ಮೂರು ದೇಹಗಳ ಗುರುತು ಅಗಲೇ ಸಿಕ್ಕಿತ್ತು. ಅಂದು ದೊರೆತ ನಾಲ್ಕು ದೇಹಗಳ ಪೈಕಿ ಮೂರನೇಯದ್ದು ಕ್ಯಾರೊಲೀನ್ ಳದ್ದಾಗಿತ್ತು.
ಹಂತಕ ಬಿಲ್ಲಿ ಮ್ಯಾನ್ಸ್ಫೀಲ್ಡ್ ಒಡೆತನದ ಆಸ್ತಿಯಲ್ಲಿದ್ದ ಡಂಪಿಂಗ್ ಯಾರ್ಡ್ನಲ್ಲಿ ಹೂಳಲಾಗಿದ್ದ ದೇಹಗಳನ್ನು ಅಗೆದು ಹೊರತೆಗೆಯಲು ಕಾರ್ಮಿಕರಿಗೆ ವಾರಗಳೇ ತಗುಲಿದ್ದವು. ಹೊರತೆಗೆದ ಎರಡು ಹೆಣ್ಣು ದೇಹಗಳನ್ನು ಮಾತ್ರ ಕೂಡಲೇ ಗುರುತು ಹಿಡಿಯುವುದು ಸಾಧ್ಯವಾಗಿತ್ತು ಎಂದು ಶರೀಫ್ ಕಚೇರಿಯ ಅಧಿಕಾರಿಗಳು ಹೇಳಿದ್ದರು.
ಸುಮಾರು ಒಂದು ವರ್ಷದಷ್ಟು ಮೊದಲೇ ಅಂದರೆ ಮೇ 16, 1980 ರಂದು ಕ್ಯಾರೊಲೀನ್ ಕಾಣೆಯಾದ ಬಗ್ಗೆ ಅವಳ ಸಹೋದರಿ ಟಂಪಾ ದೂರು ಸಲ್ಲಿಸಿದ್ದಳು. ನಾಪತ್ತೆಯಾದ ಹುಡುಗಿ ಒಂದು ವಾರದ ಬಳಿಕ ತನ್ನ 17ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವವಳಿದ್ದಳು.
ಅಗೆದಾಗ ದೊರೆತ ಕೆರೋಲಿನಾ ದೇಹದ ಅವಶೇಷಗಳನ್ನು ಹಲವಾರು ಲ್ಯಾಬ್ಗಳಿಗೆ ಕಳಿಸಲಾಗಿತ್ತಾದರೂ ಅವಳ ಡಿ ಎನ್ ಎ ಪ್ರೊಫೈಲ್ 2020 ರವರೆಗೆ ಡೆವಲಪ್ ಮಾಡುವುದು ಸಾಧ್ಯವಾಗಲಿಲ್ಲ ಎಂದು ಶರೀಫ್ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.
ನ್ಯಾಶನಲ್ ಡಾಟಾಬೇಸ್ ನೊಂದಿಗೆ ಮ್ಯಾಚ್ ಮಾಡಲು ಸ್ಯಾಂಪಲನ್ನು ಯೂನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್ ಕಳಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಅನುವಂಶೀಯತೆ ಹೋಲಿಕೆಗಳನ್ನು ಪತ್ತೆಮಾಡುವ ಗೋಜಿಗೆ ಹೋಗದೆ ಸಂತ್ರಸ್ತೆಯ ಬಗ್ಗೆ ವಿವರಣೆಯನ್ನು ಸೃಷ್ಟಿಸುವ ಪ್ಯಾರಾಬನ್ಸ್ ನ ಸ್ನ್ಯಾಪ್ ಶಾಟ್ ಡಿ ಎನ್ ಎ ಸೇವೆಯನ್ನು ಬಳಿಸಿ ಈ ವರ್ಷ ಮತ್ತೊಮ್ಮೆ ಗುರುತು ಪತ್ತೆಹಚ್ಚುವ ಪ್ರಯತ್ನ ನಡೆಸಲಾಯಿತೆಂದು, ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆಯಲ್ಲಿ ಲಭ್ಯವಾದ ಡಿ ಎನ್ ಎ ಸಾಕ್ಷ್ಯದ ಮೂಲಕ ಸ್ನ್ಯಾಪ್ ಶಾಟ್ ಸಂತ್ರಸ್ತೆಯ ನಡಾವಳಿ, ಮತ್ತು ಇತರ ಗುಣಗಳ ಬಗ್ಗೆ ಮಾಹಿತಿಯನ್ನು ಒದಗಿಸಿತು. ಅದು ನೀಡಿದ ವೈಯಕ್ತಿಕ ಪ್ರಿಡಿಕ್ಷನ್ ಗಳಲ್ಲಿ ಸಂತ್ರಸ್ತೆಯ ಪೂರ್ವಜರು, ಕಣ್ಣಿನ ಬಣ್ಣ, ಚರ್ಮದ ಬಣ್ಣ, ಮುಖದ ಆಕಾರ ಮುಂತಾದವು ಸೇರಿದ್ದವು, ಎಂದು ಪತ್ರಿಕಾ ಪ್ರಕಟನೆ ತಿಳಿಸುತ್ತದೆ.
ಹೀಗೆ ಲಭ್ಯವಾದ ಪ್ರೊಫೈಲ್ ಪೊಲೀಸರಿಗೆ ತಮ್ಮವೇ ಆದ ಲೀಡ್ ಗಳನ್ನು ಸೃಷ್ಟಿಸಿಕೊಳ್ಳುವುದು ಸಾಧ್ಯವಾಯಿತು ಮತ್ತು ಕ್ಯಾರೊಲೀನ್ ಸಹೋದರಿಯ ಡಿ ಎನ್ ಎ ಅವಳ ಗುರುತನ್ನು ಖಚಿತಪಡಿಸಿತು. ಕೊನೆಗೂ ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ನಿರಾಳತೆಯನ್ನು ಒದಗಿಸುವುದು ಸಾಧ್ಯವಾಯಿತು ಎಂದು ಅಧಿಕಾಕರಿಗಳು ಹೇಳಿದ್ದಾರೆ.
‘ಈ ವಿಷಯ ನನ್ನ ಮನಸ್ಸಿಗೆ ಶಾಂತಿ ಒದಗಿಸಿದೆ, ಯಾಕೆಂದರೆ ಅವಳನ್ನು ಕಳೆದುಕೊಂಡಿಲ್ಲವೆಂಬ ಭಾವನೆ ನನ್ನಲ್ಲಿತ್ತು,’ ಎಂದು ಕ್ಯಾರೊಲೀನ್ ಮತ್ತೊಬ್ಬ ಸಹೋದರಿ ಮಾರ್ಗರೆಟ್ ಜಾನ್ಸ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ. ಕ್ಯಾರೊಲೀನ್ ಳ ಅವಶೇಷಗಳ ಶವಸಂಸ್ಕಾರ ಚಿತಾಗಾರವೊಂದರಲ್ಲಿ ನಡೆಸಿ ಚಿತಾಭಸ್ಮ ತನ್ನ ಸಹೋದರನೊಂದಿಗೆ ಹಂಚಿಕೊಳ್ಳುವುದಾಗಿ ಆಕೆ ಹೇಳಿದ್ದಾರೆ.
‘ಅತ್ಯಂತ ವಿಷಾದಕರ ಸಂಗತಿ ಏನೆಂದತರೆ ಅವಳಿಗೆ ಏನಾಯಿತು ಅಂತ ನಮಗೆ ಗೊತ್ತಾಗದೆ ಹೋಗಿದ್ದು. ಅದನ್ನು ತಿಳಿಯದೆ ನಮ್ಮಮ್ಮ ಗತಿಸಿದಳು, ನನ್ನಪ್ಪ ಸತ್ತರು ಮತ್ತು ನನ್ನ ಇನ್ನೊಬ್ಬ ಸಹೋದರಿಯೂ ಮರಣ ಹೊಂದಿದಳು’ ಎಂದು ಜಾನ್ಸ್ ಹೇಳಿದ್ದಾರೆ.
ಮ್ಯಾನ್ಸ್ ಫೀಲ್ಡ್ ಈಗಾಗಲೇ ಅಪಹರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವಾರು ಅಪರಾಧಗಳಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನು ಮೊದಲಿಗೆ ಹಲ್ಲೆ ನಡೆಸಿದ್ದು ಕ್ಯಾಲೊಫೋರ್ನಿಯಾದ ಬಾರೊಂದರಲ್ಲಿ ಡಿಸೆಂಬರ್ 6, 1980 ರಂದು ಭೇಟಿಯಾದ 30-ವರ್ಷ-ವಯಸ್ಸಿನ ರೇನೀ ಸೇಲಿಂಗ್ ಹೆಸರಿನ ಮಹಿಳೆ ವಿರುದ್ಧ, ಎಂದು ತಂಪಾ ಬೇ ಟೈಮ್ಸ್ ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ ಅವಳ ದೇಹ ಮರುದಿನ ಬೆಳಗ್ಗೆ ಚರಂಡಿಯೊಂದರ ಗುಂಡಿಯಲ್ಲಿ ಪತ್ತೆಯಾಗಿತ್ತು. ಕೆಲದಿನಗಳ ನಂತರ ಮ್ಯಾನ್ಸ್ಫೀಲ್ಡ್ ನನ್ನು ಹತ್ಯೆಯ ಆರೋಪದಲ್ಲಿ ಬಂಧಿಸಲಾಗಿತ್ತು. ಒಂದು ಹಳಿ ತಪ್ಪಿದ ವಿಚಾರಣೆ ಮತ್ತು ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಕ್ಕಾಗಿ ಅವನನ್ನು ಶಿಕ್ಷೆಗೊಳಪಡಿಸಲಾಯಿತು.
ಆ ಪ್ರಕರಣಕ್ಕೆ ಸಿಕ್ಕ ಪ್ರಚಾರದಿಂದಾಗಿ ಏಪ್ರಿಲ್ 17, 1980 ರಂದು ಟಾಂಪಾದಿಂದ ಕಾಣೆಯಾದ 21 ವರ್ಷದ ಸಾಂಡ್ರಾ ಗ್ರಹಾಂ ಹೆಸರಿನ ಯುವತಿಗಾಗಿ ಮ್ಯಾನ್ಸ್‌ಫೀಲ್ಡ್‌ನ ಮನೆಯನ್ನು ಹುಡುಕಲು ಹೆರ್ನಾಂಡೋ ಕೌಂಟಿಯ ಅಧಿಕಾರಿಗಳಿಗೆ ಒಬ್ಬ ಅನಾಮಧೇಯ ಮನವಿ ಮಾಡಿದ.
ಮಾರ್ಚ್ 17, 1981 ರಂದು, ಅಧಿಕಾರಿಗಳು ಮೊದಲ ಸಂತ್ರಸ್ತೆಯನ್ನು ಪತ್ತೆಹಚ್ಚಿದರು-20 ರ ಹರೆಯದ ಆ ಮಹಿಳೆಯ ಗುರುತು ಮಾತ್ರ ಸಿಗಲಿಲ್ಲ. ಒಂದು ವಾರದ ನಂತರ ಅವರು 1975 ರಲ್ಲಿ ಹೊಸ ವರ್ಷದ ಮುನ್ನಾದಿನದಂದು ಹತ್ತಿರದ ಕ್ಯಾಂಪ್‌ಗ್ರೌಂಡ್‌ನಿಂದ ಕಣ್ಮರೆಯಾದ ಓಹಿಯೋದ ಪ್ರವಾಸಿ 15 ವರ್ಷದ ಎಲೈನ್ ಝೈಗ್ಲರ್ ಅವರ ಅವಶೇಷಗಳನ್ನು ಹೊರತೆಗೆದರು. ಅದಾದ ಮೇಲೆ ಕ್ಯಾರೊಲೀನ್ ಮತ್ತು ಗ್ರಹಾಂ ಅವರ ದೇಹಗಳನ್ನು ಸಹ ಅಗೆದು ಹೊರತೆಗೆಯಲಾಯಿತು.
ಈಗ 66 ವರ್ಷದವನಾಗಿರುವ ಮ್ಯಾನ್ಸ್ಫೀಲ್ಡ್, ಎಲ್ಲ ನಾಲ್ವರು ಮಹಿಳೆಯರನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡ. ಮತ್ತೊಬ್ಬ ಮಹಿಳೆಯ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರುವುದನ್ನು ಸಹ ಅವನು ಅಂಗೀಕರಿಸಿದ್ದಾನೆ. ಅವನಿಗೆ ಹಲವಾರು ಬಾರಿ ಪೆರೋಲ್ ನಿರಾಕರಿಸಲಾಗಿದೆ.