ಅಫ್ಘಾನಿಸ್ಥಾನದಲ್ಲಿ 12 ವರ್ಷದ ಬಾಲಕಿಯರು ಸಾರ್ವಜನಿಕವಾಗಿ ಹಾಡುವಂತಿಲ್ಲ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ

| Updated By: Skanda

Updated on: Mar 13, 2021 | 12:10 PM

Afghanistan: ಲಿಂಗ ತಾರತಮ್ಯತೆಯ ಪ್ರಮಾಣ ಅಫ್ಘಾನಿಸ್ಥಾನದಲ್ಲಿ ಇನ್ನೂ ಅತ್ಯಂತ ಆಳವಾಗಿದ್ದು, ಹೆಣ್ಣು ಮಕ್ಕಳಿಗೆ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಳ್ಳುವ ಅವಕಾಶಗಳು ಕಡಿಮೆ ಪ್ರಮಾಣದಲ್ಲಿವೆ.

ಅಫ್ಘಾನಿಸ್ಥಾನದಲ್ಲಿ 12 ವರ್ಷದ ಬಾಲಕಿಯರು ಸಾರ್ವಜನಿಕವಾಗಿ ಹಾಡುವಂತಿಲ್ಲ; ಶಿಕ್ಷಣ ಇಲಾಖೆಯಿಂದ ಸುತ್ತೋಲೆ
ಅಫ್ಘಾನಿಸ್ಥಾನದಲ್ಲಿ ಹೊಸ ನೀತಿ ಜಾರಿಗೊಳಿಸಿದ ಶಿಕ್ಷಣ ಇಲಾಖೆ..
Follow us on

ಕಾಬೂಲ್: ಮೊನ್ನೆ ಮೊನ್ನೆಯಷ್ಟೇ ವಿಜೃಂಭಣೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗಿದೆ. ಈ ಸಂಭ್ರಮ ಮನಸ್ಸಿನಿಂದ ಮರೆಯಾಗುವ ಮುನ್ನವೇ ಅಫ್ಘಾನಿಸ್ಥಾನದ ಶಿಕ್ಷಣ ಇಲಾಖೆ 12 ವರ್ಷ ಮತ್ತು ಅದಕ್ಕೂ ಹೆಚ್ಚಿನ ವರ್ಷದ ಬಾಲಕಿಯರು ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ನಿಷೇಧಿಸಿ ನೋಟಿಸ್ ಜಾರಿಗೊಳಿಸಿದೆ. ಇದು ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳ ಕಣ್ಣನ್ನು ಕೆಂಪಗಾಗಿಸಿದೆ. ಈ ನೋಟಿಸ್​ಗೆ ವಿರುದ್ಧವಾಗಿ #IAmMySong ಎಂಬ ಹ್ಯಾಷ್​ಟ್ಯಾಗ್ ಟ್ವಿಟರ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸಾರ್ವಜನಿಕವಾಗಿ ಹಾಡು ಹೇಳುವುದನ್ನೂ ಕಸಿದುಕೊಳ್ಳುವಂತಹ ನಿಯಮ ಜಾರಿಗೊಳಿಸಿರುವ ಅಫ್ಘಾನಿಸ್ಥಾನದ ಶಿಕ್ಷಣ ಇಲಾಖೆಯ ನೋಟಿಸ್​ಗೆ ವಿಶ್ವದಾದ್ಯಂತ ಪ್ರತಿರೋಧವಾಗಿ ಈ ಹ್ಯಾಷ್​ಟ್ಯಾಗ್ ಟ್ರೆಂಡ್ ಆಗುತ್ತಿದೆ. #IAmMySong ಎಂಬ ಹ್ಯಾಷ್​ಟ್ಯಾಗ್ ಮೂಲಕ ನೀವು ನಿಮ್ಮ ಹಾಡನ್ನು ಹಂಚಿಕೊಳ್ಳಿ ಎಂದು ಸಂದೇಶ ನೀಡುವ ಮೆಸೇಜ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಲಿಂಗ ತಾರತಮ್ಯತೆಯ ಪ್ರಮಾಣ ಅಫ್ಘಾನಿಸ್ಥಾನದಲ್ಲಿ ಇನ್ನೂ ಅತ್ಯಂತ ಆಳವಾಗಿದ್ದು, ಹೆಣ್ಣು ಮಕ್ಕಳಿಗೆ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಳ್ಳುವ ಅವಕಾಶಗಳು ಕಡಿಮೆ ಪ್ರಮಾಣದಲ್ಲಿವೆ. ಅಲ್ಲದೇ, ಅಂತರಾಷ್ಟ್ರಿಯ ಮಹಿಳಾ ದಿನ ಆಚರಿಸಿದ ಕೆಲ ದಿನಗಳಲ್ಲೇ ಅಫ್ಘಾನಿಸ್ಥಾನದ ಶಿಕ್ಷಣ ಇಲಾಖೆ 12 ವರ್ಷ ಮತ್ತು ಅದಕ್ಕೂ ಹೆಚ್ಚಿನ ವರ್ಷದ ಬಾಲಕಿಯರು ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ಮೊಟಕುಗೊಳಿಸುವಂತಹ ನೋಟಿಸ್ ನೀಡಿರುವುದು ಮಾನವ ಹಕ್ಕುಗಳ ದಮನವಾಗಿದೆ ಎಂದು ಹಲವು ದೇಶಗಳ ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ. ಅಲ್ಲದೆ, ಈ ಸುತ್ತೋಲೆಯ ವಿರುದ್ಧ ನಿಮ್ಮದೇ ಹಾಡಿನ ಮೂಲಕ ಪ್ರತಿಭಟಿಸುವಂತೆ ಕರೆ ನೀಡಿರುವುದು ಟ್ರೆಂಡ್ ಆಗುತ್ತಿದೆ.

ಇತ್ತೀಚಿಗಷ್ಟೇ ಉತ್ತರ ಪ್ರದೇಶದ ಪಂಚಾಯತ್  ಒಂದರ ಮುಖಂಡರು ಹುಡುಗಿಯರು ಜೀನ್ಸ್ ಮತ್ತು ಸ್ಕರ್ಟ್ ಧರಿಸಿದರೆ ಬಷಿಷ್ಕಾರ ಹಾಕುವುದಾಗಿ ಘೋಷಿಸಿದ್ದರು ಎಂಬುವುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ.. ಹೆಣ್ಣು ಮಕ್ಕಳ ಭವಿಷ್ಯಕ್ಕೆ ವರದಾನ