ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಬಳಕೆಯಿಂದ ಹಿಂದೆ ಸರಿದ ಕೆಲ ದೇಶಗಳು; ಲಸಿಕೆ ಸೇಫ್ ಅಲ್ವಂತೆ!

ನಾರ್ವೇ, ಐಸ್​ಲ್ಯಾಂಡ್, ಬಲ್ಗೇರಿಯಾ, ಲುಕ್ಸೆಮ್​ಬರ್ಗ್​, ಇಸ್ಟೋನಿಯಾ, ಲಿಥುಯೇನಿಯಾ ಮತ್ತು ಲ್ಯಾಟ್​ವಿಯಾ ಸೇರಿದಂತೆ 7 ದೇಶಗಳು ಸಹ ಆಸ್ಟ್ರಾಜೆನೆಕಾ ಲಸಿಕೆಯನ್ನು ಬಳಸಲು ಹಿಂದೇಟು ಹಾಕಿರುವುದರಿಂದ ಯುರೋಪ್​ ಪ್ರಾಂತ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಹಿನ್ನೆಡೆ ಆಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಬಳಕೆಯಿಂದ ಹಿಂದೆ ಸರಿದ ಕೆಲ ದೇಶಗಳು; ಲಸಿಕೆ ಸೇಫ್ ಅಲ್ವಂತೆ!
ಪ್ರಾತಿನಿಧಿಕ ಚಿತ್ರ
Follow us
Skanda
| Updated By: ganapathi bhat

Updated on:Mar 12, 2021 | 7:09 PM

ಆಸ್ಟ್ರಾಜೆನೆಕಾ – ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕೊರೊನಾ ಲಸಿಕೆ ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಳಕೆಗೆ ಅನುಮತಿ ಗಿಟ್ಟಿಸಿಕೊಂಡಿದೆ. ಭಾರತದಲ್ಲಿಯೂ ಪುಣೆ ಮೂಲದ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಇದೇ ಕೊರೊನಾ ಲಸಿಕೆಯನ್ನು ಕೊವಿಶೀಲ್ಡ್​ ಹೆಸರಲ್ಲಿ ಉತ್ಪಾದಿಸಿ ವಿತರಣೆ ಮಾಡಿದೆ. ಆದರೆ, ಈಗ ನಡೆದಿರುವ ಕೆಲ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಯುರೋಪ್, ಏಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಸದರಿ ಕೊರೊನಾ ಲಸಿಕೆಯ ಬಳಕೆಗೆ ಹಠಾತ್ ಕತ್ತರಿ ಹಾಕಿವೆ. ಆಸ್ಟ್ರಾಜೆನೆಕಾ ಲಸಿಕೆ ಸ್ವೀಕರಿಸಿದ ಒಂದಷ್ಟು ವ್ಯಕ್ತಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳು ತೋರಿಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆಯೆಂದು ರಾಷ್ಟ್ರಗಳು ಸ್ಪಷ್ಟನೆ ನೀಡಿವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕೆಲ ದೇಶಗಳು ತಾವು ಲಸಿಕೆ ಬಳಕೆಯನ್ನು ಮುಂದುವರೆಸುವುದಾಗಿಯೂ, ಅವು ಸುರಕ್ಷಿತ ಎಂಬ ಭರವಸೆ ತಮಗಿರುವುದಾಗಿಯೂ ತಿಳಿಸಿವೆ.

ಥೈಲ್ಯಾಂಡ್ ಆಸ್ಟ್ರಾಜೆನೆಕಾ ಲಸಿಕೆ ಬಳಕೆಗೆ ತಡೆ ನೀಡಿದ ಏಷ್ಯಾ ಪ್ರಾಂತ್ಯದ ಮೊದಲ ದೇಶವೆಂದು ಗುರುತಿಸಿಕೊಂಡಿದೆ. ಅದರ ಬೆನ್ನಲ್ಲೇ ಡೆನ್ಮಾರ್ಕ್​ ಕೂಡ ಲಸಿಕೆಗೆ ಎರಡು ವಾರಗಳ ತಾತ್ಕಾಲಿಕ ತಡೆ ಘೋಷಿಸಿದ್ದು, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಮತ್ತು ಓರ್ವ ವ್ಯಕ್ತಿಯ ಸಾವಿನ ನಂತರ ಈ ನಿಲುವನ್ನು ತಳೆದಿದೆ ಎಂದು ವರದಿಯಾಗಿದೆ.

ನಾರ್ವೇ, ಐಸ್​ಲ್ಯಾಂಡ್, ಬಲ್ಗೇರಿಯಾ, ಲುಕ್ಸೆಮ್​ಬರ್ಗ್​, ಇಸ್ಟೋನಿಯಾ, ಲಿಥುಯೇನಿಯಾ ಮತ್ತು ಲ್ಯಾಟ್​ವಿಯಾ ಸೇರಿದಂತೆ 7 ದೇಶಗಳು ಸಹ ಆಸ್ಟ್ರಾಜೆನೆಕಾ ಲಸಿಕೆಯನ್ನು ಬಳಸಲು ಹಿಂದೇಟು ಹಾಕಿರುವುದರಿಂದ ಯುರೋಪ್​ ಪ್ರಾಂತ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಹಿನ್ನೆಡೆ ಆಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಇನ್ನೊಂದೆಡೆ, ಆಸ್ಟ್ರೇಲಿಯಾ ಹಾಗೂ ಇಟಲಿ ನಿರ್ದಿಷ್ಟ ಬ್ಯಾಚ್​ನ ಕೊರೊನಾ ಲಸಿಕೆಗೆ ತಡೆ ಒಡ್ಡಿರುವುದಾಗಿ ಹೇಳಿಕೊಂಡಿವೆ.

ಇದೆಲ್ಲದರ ನಡುವೆಯೂ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಯುರೋಪ್​ ಔಷಧ ನಿಯಂತ್ರಣಾ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಯಾವುದೇ ಅಧಿಕೃತ ಪುರಾವೆಗಳು ಸಿಕ್ಕಿಲ್ಲ. ಸದ್ಯ ಯುರೋಪಿನ 50 ಲಕ್ಷಕ್ಕೂ ಅಧಿಕ ಮಂದಿ ಈಗಾಗಲೇ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಸ್ವೀಕರಿಸಿದ್ದು, 30 ಪ್ರಕರಣಗಳಲ್ಲಿ ಮಾತ್ರ ರಕ್ತ ಹೆಪ್ಪುಗಟ್ಟುವಿಕೆ ಮಾದರಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದಾಗಿ ವರದಿಯಾಗಿದೆ. ಇನ್ನು ಆಸ್ಟ್ರಾಜೆನೆಕಾ ಸಂಸ್ಥೆ ಸಹ ತನ್ನ ಲಸಿಕೆಯ ಬಗ್ಗೆ ಸಂಪೂಣರ್ ವಿಶ್ವಾಸ ವ್ಯಕ್ತಪಡಿಸಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್​ 

ದೇಶದಲ್ಲಿ ಈವರೆಗೆ 2.60 ಕೋಟಿ​ಗೂ ಅಧಿಕ ಕೊರೊನಾ ಲಸಿಕೆ ವಿತರಣೆ; ಪಂಜಾಬ್​ನಲ್ಲಿ ಮತ್ತೆ ಶುರುವಾಯ್ತು ನೈಟ್​ ಕರ್ಫ್ಯೂ

Published On - 7:08 pm, Fri, 12 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್