ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಪ್ರಾಣಬಿಟ್ಟಿದ್ದಾರೆ. ಅಫ್ಘಾನಿಸ್ತಾನ ಹೆರಾತ್‌ನ ಗುಜರಗಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯಲ್ಲಿ ಮಸೀದಿಯ ಇಮಾಮ್ ಸೇರಿದಂತೆ 21 ಜನರು ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯಾ ದಾಳಿ ಎಂದು ಹೆರಾತ್‌ನ ರಾಜ್ಯಪಾಲರ ವಕ್ತಾರರು ತಿಳಿಸಿದ್ದಾರೆ.
ಆದರೆ, ಈವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಟ್ವಿಟರ್‌ನಲ್ಲಿ ಅನ್ಸಾರಿ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ವರದಿಗಳ ಪ್ರಕಾರ, “ದಾಳಿಯಲ್ಲಿ ಸಾವನ್ನಪ್ಪಿದ ಇಮಾಮ್ ತಾಲಿಬಾನ್ ಬೆಂಬಲಿಗ ಎಂದು ಹೇಳಲಾಗಿದೆ ಮತ್ತು ಅವರ ಹೇಳಿಕೆಯನ್ನು ಕೇಳಲು ಹೆಚ್ಚಿನ ಜನರು ಸೇರಿದ್ದರು.
ಎಂದಿನಂತೆ ಈ ಬಾರಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜುಮಾದಲ್ಲಿ ಮಸೀದಿ ಮುಜೀಬ್ ರೆಹಮಾನ್ ಅನ್ಸಾರಿ ಅವರು ಜೂನ್ ಅಂತ್ಯದಲ್ಲಿ ಸಾವಿರಾರು ವಿದ್ವಾಂಸರು ಮತ್ತು ಹಿರಿಯರ ದೊಡ್ಡ ಸಭೆಯಲ್ಲಿ ತಾಲಿಬಾನ್ ರಕ್ಷಣೆಗಾಗಿ ಹಲವಾರು ಹೇಳಿಕೆಗಳನ್ನು ನೀಡಿದ್ದರು.
ಮುಜೀಬ್ ರೆಹಮಾನ್ ಪ್ರಮುಖ ಧರ್ಮಗುರುಗಳಲ್ಲಿ ಒಬ್ಬರು. ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರಗಳ ಟೀಕೆಗಾಗಿ ಇಮಾಮ್ ಮುಜ್ಬಿರ್ ರೆಹಮಾನ್ ಅಫ್ಘಾನಿಸ್ತಾನದಾದ್ಯಂತ ಹೆಸರುವಾಸಿಯಾಗಿದ್ದರು.
Published On - 4:31 pm, Fri, 2 September 22