ಸಶಸ್ತ್ರಧಾರಿ ತಾಲಿಬಾನ್ ವ್ಯಕ್ತಿಯ ಮುಂದೆ ಧೈರ್ಯದಿಂದ ನಿಂತ ಅಫ್ಘಾನ್ ಮಹಿಳೆ; ಐಕಾನಿಕ್ ಚಿತ್ರಕ್ಕೆ ಶ್ಲಾಘನೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 08, 2021 | 1:45 PM

ಫೋಟೊ ಕೆಳಗೆ ಕಾಮೆಂಟ್ ಮಾಡಿದ ಹಲವಾರು ನೆಟಿಜನ್‌ಗಳು ಮಹಿಳೆಯ ಧೈರ್ಯಕ್ಕಾಗಿ ಅಭಿನಂದಿಸಿದರು, ಆದರೆ ಮಹಿಳೆಯನ್ನು ಗುರುತಿಸುವ ಯಾವುದೇ ಪ್ರಯತ್ನಗಳು ತಾಲಿಬಾನ್‌ನಿಂದ ಸಂಭಾವ್ಯ ಪ್ರತೀಕಾರಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು

ಸಶಸ್ತ್ರಧಾರಿ ತಾಲಿಬಾನ್ ವ್ಯಕ್ತಿಯ ಮುಂದೆ ಧೈರ್ಯದಿಂದ ನಿಂತ ಅಫ್ಘಾನ್ ಮಹಿಳೆ; ಐಕಾನಿಕ್ ಚಿತ್ರಕ್ಕೆ ಶ್ಲಾಘನೆ
ದಿಟ್ಟತನದಿಂದ ನಿಂತ ಅಫ್ಘಾನ್ ಮಹಿಳೆ ( ರಾಯಿಟರ್ಸ್ ಚಿತ್ರ)
Follow us on

ಕಾಬೂಲ್: ಮಿಂಚಿನ ವೇಗದಲ್ಲಿ ಅಫ್ಘಾನಿಸ್ತಾನವನ್ನು(Afghanistan)  ತಾಲಿಬಾನ್ (Taliban)  ಸ್ವಾಧೀನಪಡಿಸಿದ ನಂತರ ಕಠಿಣ ಪ್ರಭುತ್ವವನ್ನು ವಿರೋಧಿಸುವ ನಾಗರಿಕರ ಪ್ರತಿಭಟನೆಗಳು ಈಗಾಗಲೇ 21 ನೇ ಶತಮಾನದ ಭೌಗೋಳಿಕ ರಾಜಕೀಯದ ನಿರ್ಣಾಯಕ ಕ್ಷಣಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿವೆ. ಅದರಂತೆ, ಕಾಬೂಲ್‌ನಲ್ಲಿ ನಡೆದ ಒಂದು ಪ್ರತಿಭಟನೆಯಿಂದ ಹೊರಹೊಮ್ಮಿದ ಒಂದು ಫೋಟೋ ಪ್ರತಿಭಟನೆಯ ಪ್ರಾಮಾಣಿಕ ಮನೋಭಾವವನ್ನು ಚಿತ್ರಿಸುತ್ತದೆ. ಈ ಚಿತ್ರವನ್ನು ಅನೇಕರು ಇದನ್ನು ‘ಐಕಾನಿಕ್’ ಛಾಯಾಚಿತ್ರ ಎಂದು ಕರೆದಿದ್ದು ಇದು ಇತಿಹಾಸದಲ್ಲಿ ಉಳಿಯುತ್ತದೆ ಎಂದಿದ್ದಾರೆ.

ರಾಯಿಟರ್ಸ್ ಸುದ್ದಿ ಸಂಸ್ಥೆ ಕ್ಲಿಕ್ಕಿಸಿದ ಛಾಯಾಚಿತ್ರವನ್ನು ಅಫ್ಘಾನ್ ಪತ್ರಕರ್ತ ಜಹ್ರಾ ರಹೀಮಿ, ಟೊಲೊ ನ್ಯೂಸ್ ನ ವರದಿಗಾರರುಹಂಚಿಕೊಂಡಿದ್ದಾರೆ. ತನ್ನ ಎದೆಗೆ ಬಂದೂಕನ್ನು ತೋರಿಸಿದ ತಾಲಿಬಾನ್ ಸಶಸ್ತ್ರಧಾರಿಯ ವಿರುದ್ಧ ಮುಖಾಮುಖಿಯಾಗಿ ನಿಂತ ಅಪ್ಘಾನ್ ಮಹಿಳೆಯನ್ನು ಅಭಿನಂದಿಸಿದ ರಹಿಮಿ ಮಂಗಳವಾರ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.


ಫೋಟೊ ಕೆಳಗೆ ಕಾಮೆಂಟ್ ಮಾಡಿದ ಹಲವಾರು ನೆಟಿಜನ್‌ಗಳು ಮಹಿಳೆಯ ಧೈರ್ಯಕ್ಕಾಗಿ ಅಭಿನಂದಿಸಿದರು, ಆದರೆ ಮಹಿಳೆಯನ್ನು ಗುರುತಿಸುವ ಯಾವುದೇ ಪ್ರಯತ್ನಗಳು ತಾಲಿಬಾನ್‌ನಿಂದ ಸಂಭಾವ್ಯ ಪ್ರತೀಕಾರಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ತಾಲಿಬಾನ್ ಯುದ್ಧದ ಪೀಡಿತ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ಮಂಗಳವಾರ ತನ್ನ ಹೊಸ ಆಡಳಿತದ ಸಂವಿಧಾನವನ್ನು ಘೋಷಿಸಿತು. ಹೊಸ ಅಪ್ಘನ್ ಸಮಾಜದಲ್ಲಿ “ಪ್ರಮುಖ ಪಾತ್ರ” ವಹಿಸುವ ಗುಂಪಿನ ಹಿಂದಿನ ಭರವಸೆಗಳ ಹೊರತಾಗಿಯೂ, ಮಹಿಳೆಯರನ್ನು ಅನುಕೂಲಕರವಾಗಿ ಹೊರಗಿಡಲಾಯಿತು. ಮಹಿಳೆಯರಿಗಾಗಿ ಸಚಿವಾಲಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ತಾಲಿಬಾನ್ ವಕ್ತಾರರು ಮಾತ್ರ ಈ ವಿಷಯವು ಹೆಚ್ಚಿನ ಪರಿಗಣನೆಯಲ್ಲಿದೆ ಎಂದು ಹೇಳಿದರು.

ಏತನ್ಮಧ್ಯೆ, ತಾಲಿಬಾನ್ ಉಗ್ರಗಾಮಿ ಬಲದಿಂದ ಆಡಳಿತದ ಅಧಿಕಾರಕ್ಕೆ ಪರಿವರ್ತನೆಯಾಗುತ್ತಿದ್ದಂತೆ ಅವರು ತಮ್ಮ ಆಡಳಿತದ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಅಫ್ಘಾನಿಯನ್ನರು ತಾಲಿಬಾನರ ಹಿಂದಿನ ಕ್ರೂರ ಮತ್ತು ದಬ್ಬಾಳಿಕೆಯ ಆಳ್ವಿಕೆಯ (1996 ರಿಂದ 2001) ಪುನರಾವರ್ತನೆಯ ಭಯದಿಂದ ಮಂಗಳವಾರ ಕಾಬೂಲ್‌ನಲ್ಲಿ ನಡೆದ  ರ್ಯಾಲಿಗಳಲ್ಲಿ ನೂರಾರು ಜನರು ಜಮಾಯಿಸಿದರು. ಅಲ್ಲಿ ತಾಲಿಬಾನ್ ಗಾರ್ಡ್‌ಗಳು ಗುಂಪನ್ನು ಚದುರಿಸಲು ಗುಂಡು ಹಾರಿಸಿದರು.

ಹೆರಾತ್‌ನಲ್ಲಿ ನೂರಾರು ಜನರು ಮೆರವಣಿಗೆ ನಡೆಸಿದರು, ಬ್ಯಾನರ್‌ಗಳನ್ನು ಹಿಡಿದು ಅಫ್ಘಾನ್ ಧ್ವಜವನ್ನು ಬೀಸಿದರು. ನಂತರ, ಪ್ರತಿಭಟನೆಯ ಸ್ಥಳದಿಂದ ಎರಡು ಶವಗಳನ್ನು ನಗರದ ಕೇಂದ್ರ ಆಸ್ಪತ್ರೆಗೆ ತರಲಾಯಿತು ಎಂದು ಹೆಸರು ಹೇಳಲು ಬಯಸದ ಹೆರಾತ್‌ನ ವೈದ್ಯರು ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.
“ಅವರೆಲ್ಲರಿಗೂ ಬುಲೆಟ್ ಗಾಯಗಳಿವೆ” ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಣ್ಣ ನಗರಗಳಲ್ಲಿ ಮೆರವಣಿಗೆ ನಡೆಸಲಾಗಿದೆ. ಅಲ್ಲಿ ಮಹಿಳೆಯರು ಹೊಸ ಸರ್ಕಾರದ ಭಾಗವಾಗಲು ಬೇಡಿಕೆ ಇಟ್ಟಿದ್ದಾರೆ.

ತಾಲಿಬಾನ್ ತನ್ನ ಕಡೆಯಿಂದ ಸಾರ್ವಜನಿಕರಿಗೆ ಬೀದಿಗಿಳಿಯದಂತೆ ಎಚ್ಚರಿಕೆ ನೀಡಿದೆ. ಪತ್ರಕರ್ತರು ಯಾವುದೇ ಪ್ರತಿಭಟನೆಗಳನ್ನು ಮಾಡಬಾರದು ಎಂದು ಹೇಳಿದರು. 1990 ರಲ್ಲಿ ಕ್ರೀಡಾಂಗಣಗಳಲ್ಲಿ ಜನರನ್ನು ಗಲ್ಲಿಗೇರಿಸಿದ ಮತ್ತು ಕಳ್ಳರ ಕೈ ಕತ್ತರಿಸಿದ ಗುಂಪು ತನ್ನ ಆಡಳಿತದ ವಿರುದ್ಧ ಯಾವುದೇ ಪ್ರತಿರೋಧವನ್ನು ಸಹಿಸುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆಗೆ ಅನುಮತಿ ಕಡ್ಡಾಯ, ನಾಯಕರನ್ನು ಬೈಯ್ಯುವಂತಿಲ್ಲ: ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್

ಇದನ್ನೂ ಓದಿ:  ಅಫ್ಘಾನಿಸ್ತಾನದಲ್ಲಿ ನೂತನ ತಾಲಿಬಾನ್ ಸರ್ಕಾರದ ಚುಕ್ಕಾಣಿ ಹಿಡಿಯಲಿರುವ ಪ್ರಮುಖ ನಾಯಕರು ಯಾರೆಲ್ಲ?

Published On - 1:44 pm, Wed, 8 September 21