ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಿದ್ದೇಬಂದಿದ್ದು, ಅಲ್ಲಿಂದ ಪರಾರಿಯಾಗಲು ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ತಾಲಿಬಾನ್ ಉಗ್ರರು ಜನರಿಗೆ ಭರವಸೆ ನೀಡುತ್ತಿದ್ದಾರೆ..ಯಾರೂ ದೇಶಬಿಟ್ಟು ಹೋಗಬೇಡಿ. ಇಸ್ಲಾಮಿಕ್ ಆಡಳಿತಕ್ಕೆ ಹೆದರಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಮತ್ತೆಮತ್ತೆ ಭಯಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಇದೀಗ ತಾಲಿಬಾನಿಗಳು, ಸುದ್ದಿ ವಾಹಿನಿಯೊಂದರ ಕಚೇರಿಗೆ ನುಗ್ಗಿ, ಅಲ್ಲಿ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್ ಹಿಡಿದು ನಿಂತು ಹೆದರಿಸುತ್ತಿರುವ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗಿದೆ. ಆ ನಿರೂಪಕನ ಸುತ್ತ 6-7 ಉಗ್ರರು ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ‘ತಾಲಿಬಾನಿಗಳಿಗೆ ಹೆದರಬೇಡಿ ಎಂದು ನಿಮ್ಮ ಸುದ್ದಿ ವಾಹಿನಿ ಮೂಲಕ ಹೇಳು..ಇಸ್ಲಾಮಿಕ್ ಆಡಳಿತಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳು, ತಾಲಿಬಾನಿಗಳನ್ನು ಹೊಗಳು’ಎಂದು ನಿರೂಪಕನಿಗೆ ಗನ್ ತೋರಿಸಿ, ಬಲವಂತವಾಗಿ ಹೇಳಿಸಿದ್ದಾರೆ.
This is surreal. Taliban militants are posing behind this visibly petrified TV host with guns and making him to say that people of #Afghanistan shouldn’t be scared of the Islamic Emirate. Taliban itself is synonymous with fear in the minds of millions. This is just another proof. pic.twitter.com/3lIAdhWC4Q
— Masih Alinejad ?️ (@AlinejadMasih) August 29, 2021
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅವರು ನಾವು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವು ಮಾಧ್ಯಮಗಳು ತಾಲಿಬಾನಿಗಳ ಆಡಳಿತ ಶುರುವಾಗುತ್ತಿದ್ದಂತೆ ತಮ್ಮಲ್ಲಿರುವ ಮಹಿಳಾ ಉದ್ಯೋಗಿಗಳನ್ನೆಲ್ಲ ಕೆಲಸದಿಂದ ತೆಗೆದುಹಾಕಿದ್ದಾರೆ. ಕೆಲವೇ ದಿನಗಳ ಹಿಂದೆ, ಕಾಬೂಲ್ನಲ್ಲಿ ವರದಿ ಮಾಡುತ್ತಿದ್ದ ಟೋಲೋ ನ್ಯೂಸ್ ವರದಿಗಾರ ಮತ್ತು ಕ್ಯಾಮರಾಮನ್ಗೆ ಉಗ್ರರು ಥಳಿಸಿದ್ದರು. ಕಾಬೂಲ್ನ್ನು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಪತ್ರಕರ್ತರ ಮನೆಗಳನ್ನು ತಾಲಿಬಾನಿಗಳು ಹುಡುಕುತ್ತಿದ್ದಾರೆ. DW ಎಂಬ ನ್ಯೂಸ್ ಚಾನಲ್ನಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರನೊಬ್ಬನನ್ನು ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!
ಅತಿ ಹೆಚ್ಚು ಸರ್ಜರಿಗಳನ್ನು ಯಶಸ್ವಿಯಾಗಿ ನೆರವೇರಿಸಿದ ಕಿಮ್ಸ್; ಕರ್ನಾಟಕದಲ್ಲಿಯೇ ಅಗ್ರಸ್ಥಾನವನ್ನು ಪಡೆಯುವಲ್ಲಿ ಸಫಲ
Published On - 10:06 am, Mon, 30 August 21