ದೇಶ ಬಿಟ್ಟು ಓಡಿಹೋದ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಅಫ್ಘಾನಿಸ್ತಾನಕ್ಕೆ ಬಂದು ತಾಲಿಬಾನ್​ ಸರ್ಕಾರವನ್ನು ಸೇರುವ ಸಾಧ್ಯತೆ: ಮೂಲಗಳು

Ashraf Ghani: ಈಗ ಅಫ್ಘಾನಿಸ್ತಾನದ ಬಹುತೇಕ ಭಾಗ ತಾಲಿಬಾನ್​ ಹಿಡಿತದಲ್ಲಿದ್ದು, ಅವರೇ ಸರ್ಕಾರ ರಚಿಸಲು ಸಿದ್ಧವಾಗಿದ್ದಾರೆ. ಈ ಸರ್ಕಾರದ ಭಾಗವಾಗಿ ಅಶ್ರಫ್​ ಘನಿ ಇರಲಿದ್ದಾರೆ ಎಂಬ ಸುದ್ದಿಯೇ ಈಗ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ.

ದೇಶ ಬಿಟ್ಟು ಓಡಿಹೋದ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಅಫ್ಘಾನಿಸ್ತಾನಕ್ಕೆ ಬಂದು ತಾಲಿಬಾನ್​ ಸರ್ಕಾರವನ್ನು ಸೇರುವ ಸಾಧ್ಯತೆ: ಮೂಲಗಳು
ಅಶ್ರಫ್​ ಘನಿ
Follow us
TV9 Web
| Updated By: Skanda

Updated on: Aug 29, 2021 | 2:47 PM

Ashraf Ghani Returning to Afghanistan: ತಾಲಿಬಾನ್ ಭೀತಿಗೆ ಸಿಲುಕಿ ಅಫ್ಘಾನಿಸ್ತಾನ ದೇಶದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಶೀಘ್ರದಲ್ಲೇ ಅಫ್ಘಾನಿಸ್ತಾನಕ್ಕೆ ಮರಳಿ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ರಚನೆಯಾಗಲಿರುವ ಹೊಸ ತಾಲಿಬಾನ್ ಸರ್ಕಾರಕ್ಕೆ ಅವರು ಸೇರಬಹುದು ಎಂದು ಹೇಳಲಾಗಿದೆ. ಆಗಸ್ಟ್ 15 ರಂದು ರಾಜಧಾನಿ ಕಾಬೂಲ್ ಪ್ರವೇಶಿಸುವ ಮೂಲಕ ತಾಲಿಬಾನ್ ಇಡೀ ಆಫ್ಘನ್​ ಮೇಲೆ ಹಿಡಿತ ಸಾಧಿಸಿದ್ದು, ಅದರ ಬೆನ್ನಲ್ಲೇ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರ ಪತನವಾಗಿತ್ತು. ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಹಿರಿಯ ಅಧಿಕಾರಿಗಳು ಶಾಂತಿಯುತವಾಗಿ ಅಧಿಕಾರವನ್ನು ವರ್ಗಾಯಿಸಲು ಒಪ್ಪಿದ್ದರು. ಹೀಗಾಗಿ ಈಗ ಅಫ್ಘಾನಿಸ್ತಾನದ ಬಹುತೇಕ ಭಾಗ ತಾಲಿಬಾನ್​ ಹಿಡಿತದಲ್ಲಿದ್ದು, ಅವರೇ ಸರ್ಕಾರ ರಚಿಸಲು ಸಿದ್ಧವಾಗಿದ್ದಾರೆ. ಈ ಸರ್ಕಾರದ ಭಾಗವಾಗಿ ಅಶ್ರಫ್​ ಘನಿ ಇರಲಿದ್ದಾರೆ ಎಂಬ ಸುದ್ದಿಯೇ ಈಗ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ.

ಅತ್ತ ತಾಲಿಬಾನ್​ ದೇಶದ ಮೇಲೆ ಪ್ರಾಬಲ್ಯ ಸಾಧಿಸುತ್ತಿದ್ದಂತೆಯೇ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಅಧ್ಯಕ್ಷ ಸ್ಥಾನದಲ್ಲಿದ್ದ ಅಶ್ರಫ್ ಘನಿ ದೇಶವನ್ನು ತೊರೆದ ಸುದ್ದಿ ಹೊರಬಿದ್ದಿತ್ತು. ಖಾಸಗಿ ವಿಮಾನವನ್ನೇರಿ ತಜಕಿಸ್ತಾನಕ್ಕೆ ಹೋದ ಅವರಿಗೆ ಅಲ್ಲಿ ವಿಮಾನ ಇಳಿಯಲು ಅವಕಾಶ ಸಿಗದ ಕಾರಣ ಒಮಾನ್‌ಗೆ ಹೋಗಿದ್ದರು. ನಂತರ ಅಲ್ಲಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ ಅವರಿಗೆ ಯುಎಇ ವಾಸ್ತವ್ಯಕ್ಕೆ ಅವಕಾಶ ನೀಡಿತು. ವಿಷಮ ಪರಿಸ್ಥಿತಿಯಲ್ಲಿ ದೇಶವನ್ನೇ ತೊರೆದು ಹೋದ ಅಧ್ಯಕ್ಷ ಘನಿ ಮೇಲೆ ಸಹಜವಾಗಿ ಅನೇಕ ರಾಜಕಾರಣಿಗಳು ಮತ್ತು ಸಾಮಾನ್ಯ ಜನರು ಕೋಪಗೊಂಡಿದ್ದಾರೆ. ಕಷ್ಟದ ಸಮಯದಲ್ಲಿ ದೇಶವನ್ನು ಬೆಂಬಲಿಸುವ ಬದಲು ಅವರು ಇಲ್ಲಿಂದ ಓಡಿಹೋದರೆಂದು ಟೀಕಿಸಿದ್ದಾರೆ. ಆದರೆ ಅಶ್ರಫ್ ಘನಿ ಈ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅಶ್ರಫ್ ಘನಿ ನೀಡಿದ ಕಾರಣವೇನು? ಮಾಜಿ ಅಫ್ಘಾನ್ ಅಧ್ಯಕ್ಷರು ದೇಶವನ್ನು ತೊರೆದ ನಂತರ ಆಗಸ್ಟ್ 18 ರಂದು ಮೊದಲ ಬಾರಿಗೆ ಪ್ರಪಂಚದ ಮುಂದೆ ಕಾಣಿಸಿಕೊಂಡರು. ರಕ್ತಪಾತವನ್ನು ನಿಲ್ಲಿಸಲು ಹೀಗೆ ಮಾಡಬೇಕಾಯಿತು ಎಂದು ಸಮಜಾಯಿಷಿ ನೀಡಿದ್ದರು. ಹಣದೊಂದಿಗೆ ಓಡಿಹೋದ ಆರೋಪವನ್ನು ತಿರಸ್ಕರಿಸಿ ಸ್ಪಷ್ಟೀಕರಣ ನೀಡಿದ ಘನಿ, ಅಂತಹ ಆರೋಪಗಳು ಆಧಾರ ರಹಿತವಾಗಿವೆ ಎಂದು ಹೇಳಿದ್ದರು. ಯಾವುದರಿಂದಲೂ ಓಡಿಹೋಗಲಿಲ್ಲ. ಶಾಂತಿಯುತವಾಗಿ ಅಧಿಕಾರವನ್ನು ಹಸ್ತಾಂತರಿಸಲು ಬಯಸಿದ ಕಾರಣ ರಕ್ತಸಿಕ್ತ ಯುದ್ಧದಿಂದ ಸಾಮಾನ್ಯ ಜನರನ್ನು ರಕ್ಷಿಸಲು ದೇಶವನ್ನು ತೊರೆಯಬೇಕಾಯಿತು ಮತ್ತು ಭದ್ರತಾ ಕಾರಣಗಳಿಂದ ದೇಶದಿಂದ ದೂರವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಸಹೋದರ ತಾಲಿಬಾನ್ ಜೊತೆ ಕೈ ಜೋಡಿಸಿದ ಅಶ್ರಫ್ ಘನಿಯ ಸಹೋದರ ಹಷ್ಮತ್ ಘನಿ ತಾಲಿಬಾನ್ ಜೊತೆ ಕೈ ಜೋಡಿಸಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಹಷ್ಮತ್ ಘನಿ, ತಾಲಿಬಾನ್ ಸಂಘಟನೆಯನ್ನು ಸ್ವೀಕರಿಸಬೇಕು ಎಂದು ಜಗತ್ತಿಗೆ ಸಲಹೆ ನೀಡಿದ್ದಾರೆ. ನಾನು ತಾಲಿಬಾನ್ ಅನ್ನು ಒಪ್ಪಿಕೊಂಡಿದ್ದೇನೆ ಆದರೆ, ಅದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನುವುದು ಗಮನಾರ್ಹ. ಅಂತೆಯೇ, ಸಂದರ್ಶನವೊಂದರಲ್ಲಿ ಮಾತನಾಡುವಾಗ, ತಾಲಿಬಾನ್ ಜತೆ ರಾಜಕೀಯ ಸಂಬಂಧವನ್ನು ಬೆಳೆಸುವುದು ಬಿಟ್ಟು ಭಾರತಕ್ಕೆ ಬೇರೆ ದಾರಿಯಿಲ್ಲ ಎಂದು ಹಷ್ಮತ್ ಘನಿ ಅಭಿಪ್ರಾಯಪಟ್ಟಿದ್ದಾರೆ.

ಜತೆಗೆ, ಅದೇ ಸಂದರ್ಭದಲ್ಲಿ ತನ್ನನ್ನು ತಾನು  ಕಾರ್ಯನಿರತ ಅಧ್ಯಕ್ಷನೆಂದು ಘೋಷಿಸಿಕೊಂಡ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರನ್ನು ಈಡಿಯಟ್ ಎಂದು ಸಂಭೋದಿಸಿರುವ ಅವರು, ಪ್ರಸ್ತುತ ಪಂಜಶೀರ್‌ನಲ್ಲಿ ತಾಲಿಬಾನಿಗಳನ್ನು ವಿರೋಧಿಸುವ ಒಕ್ಕೂಟಕ್ಕೆ ಅಮರುಲ್ಲಾ ಸಲೇಹ್ ಬೆಂಬಲ ನೀಡಿರುವುದು ಸರಿಯಲ್ಲ ಎಂದಿದ್ದಾರೆ. ಈಗ ಈ ಎಲ್ಲಾ ಬೆಳವಣಿಗೆಗಳ ನಂತರ ಅಶ್ರಫ್​ ಘನಿ ಅಫ್ಘಾನಿಸ್ತಾನಕ್ಕೆ ಮರಳಲಿದ್ದಾರೆ ಹಾಗೂ ತಾಲಿಬಾನ್​ ಸರ್ಕಾರದಲ್ಲಿ ಕೈಜೋಡಿಸಲಿದ್ದಾರೆ ಎಂಬ ಗುಸುಗುಸು ಹರಿದಾಡಲಾರಂಭಿಸಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ 

Video: ತಾಲಿಬಾನ್​ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಮಾಜಿ ಅಧ್ಯಕ್ಷ ಅಶ್ರಫ್​ ಘನಿ ಸೋದರ

(Former president Ashraf Ghani may join Taliban government returning to Afghanistan sources)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ