Video: ತಾಲಿಬಾನ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸೋದರ
ಅಫ್ಘಾನಿಸ್ತಾನವನ್ನು ಭಾನುವಾರ ತಾಲಿಬಾನ್ ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಅದಾದ ಮೇಲೆ ಅಶ್ರಫ್ ಘನಿ ಒಂದು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿ ನಂತರ ತಮ್ಮ ಕುಟುಂಬದೊಟ್ಟಿಗೆ ಯುಎಇಗೆ ಹೋಗಿ ಸೇರಿದ್ದಾರೆ.
ಅಫ್ಘಾನಿಸ್ತಾನ (Afghanistan) ತಾಲಿಬಾನ್ ಉಗ್ರ (Taliban Terrorists)ರ ವಶವಾಗುತ್ತಿದ್ದಂತೆ ಯುಎಇಗೆ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಸಹೋದರ ಹಷ್ಮತ್ ಘನಿ ಇದೀಗ ಸುದ್ದಿಯಲ್ಲಿದ್ದಾರೆ. ತಾವು ತಾಲಿಬಾನ್ ಉಗ್ರರಿಗೆ ಬೆಂಬಲ ನೀಡುವುದಾಗಿ ಹಷ್ಮತ್ ಘನಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೂಚಿಗಳ ಮಹಾಮಂಡಳಿ ಮುಖ್ಯಸ್ಥನಾಗಿರುವ ಹಷ್ಮತ್ ಘನಿ ಅಹ್ಮದ್ಜೈ, ತಾವು ತಾಲಿಬಾನ್ ಆಡಳಿತಕ್ಕೆ ಸಂಪೂರ್ಣ ಬೆಂಬಲ, ಸಹಕಾರ ನೀಡುತ್ತೇವೆ ಎಂದು ತಾಲಿಬಾನ್ ನಾಯಕ ಖಲೀಲ್ ಉರ್ ರೆಹ್ಮಾನ್ ಮತ್ತು ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮೂದ್ ಜಾಕಿರ್ ಸಮ್ಮುಖದಲ್ಲಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಹೀಗೊಂದು ವಿಡಿಯೋವನ್ನು ಇಸ್ಲಮಾಬಾದ್ನ ಪತ್ರಕರ್ತರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. (ಕೂಚಿಗಳು -Kuchis-ಎಂದರೆ ಘಿಲ್ಜಿ ಪಶ್ತೂನ್ಸ್ ಅಲೆಮಾರಿ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಇದು ಪಶುಪಾಲನಾ ಜನಾಂಗವಾಗಿದೆ).
ಅಫ್ಘಾನಿಸ್ತಾನವನ್ನು ಭಾನುವಾರ ತಾಲಿಬಾನ್ ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಅದಾದ ಮೇಲೆ ಅಶ್ರಫ್ ಘನಿ ಒಂದು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿ ನಂತರ ತಮ್ಮ ಕುಟುಂಬದೊಟ್ಟಿಗೆ ಯುಎಇಗೆ ಹೋಗಿ ಸೇರಿದ್ದಾರೆ. ಅದಾದ ಬಳಿಕ ಫೇಸ್ಬುಕ್ ವಿಡಿಯೋ ಮಾಡಿ ಹರಿಬಿಟ್ಟ ಅವರು, ನಾನು ಅಫ್ಘಾನಿಸ್ತಾನದಲ್ಲಿ ರಕ್ತಪಾತ ತಪ್ಪಿಸುವ ಸಲುವಾಗಿ ಅಲ್ಲಿಂದ ಹೊರಡುವ ನಿರ್ಧಾರ ಮಾಡಿದೆ. ನನ್ನನ್ನು ಹೊರಹಾಕಲಾಗಿದೆಯೇ ಹೊರತು, ನಾನು ಪರಾರಿಯಾಗಿದ್ದಲ್ಲ ಎಂದು ಹೇಳಿಕೊಂಡಿದ್ದರು.
ಅಶ್ರಫ್ ಘನಿ ಅಫ್ಘಾನಿಸ್ತಾನದಿಂದ ಹೊರಡುವಾಗ ಅಪಾರ ಪ್ರಮಾಣದ ಹಣ ತೆಗೆದುಕೊಂಡುಹೋಗಿದ್ದಾರೆ ಎಂಬ ಆರೋಪವನ್ನು ಅಲ್ಲಗಳೆದಿದ್ದ ಅವರು, ನಾನು ಯಾವುದೇ ಹಣವನ್ನೂ ಹೊತ್ತು ತರಲಿಲ್ಲ. ಅಂಥ ಸುದ್ದಿಗಳಿಗೆ ಆಧಾರವಿಲ್ಲ. ನಾನು ಯುಎಇಗೆ ಬಂದಿದ್ದೇನೆ. ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳ ಬಳಿ ಯಾರೇ ಬೇಕಾದರೂ ಕೇಳಬಹುದು. ಬರುವಾಗ ನನ್ನ ಕೈಯಲ್ಲಿ ಬಟ್ಟೆಗಳ ಒಂದು ಸೂಟ್ಕೇಸ್ ಮಾತ್ರ ಇತ್ತು ಎಂದೂ ಹೇಳಿಕೊಂಡಿದ್ದಾರೆ.
ಸದ್ಯಕ್ಕಂತೂ ತಾಲಿಬಾನ್ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಹಾಗಂತ ಅವರಿನ್ನೂ ಸರ್ಕಾರ ರಚನೆ ಮಾಡಿಲ್ಲ. ಅಮೆರಿಕದೊಂದಿಗೆ ಇರುವ ಒಪ್ಪಂದದ ಅನ್ವಯ, ತಾಲಿಬಾನಿಗಳು ಆಗಸ್ಟ್ 31ರವರೆಗೂ ಹೊಸ ಸರ್ಕಾರ ರಚನೆ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಅಷ್ಟಕ್ಕೂ ತಾಲಿಬಾನ್ ಹೇಗೆ ಸರ್ಕಾರ ರಚನೆ ಮಾಡಲಿದೆ. ಈಗಿನ ಸನ್ನಿವೇಶದಲ್ಲಿ ಅದಕ್ಕೆ ಯಾವುದೇ ದೇಶಗಳೂ ಹಣದ ಸಹಾಯ ಮಾಡಲು ಒಪ್ಪುತ್ತಿಲ್ಲ. ಚೀನಾ, ರಷ್ಯಾ, ಪಾಕಿಸ್ತಾನ, ಟರ್ಕಿ ಹೊರತು ಪಡಿಸಿ ಇನ್ಯಾವುದೇ ದೇಶಗಳೂ ತಾಲಿಬಾನ್ನ್ನು ಒಪ್ಪಿಕೊಂಡಿಲ್ಲ. ಅಂತಾರಾಷ್ಟ್ರೀಯ ಸಮುದಾಯ ಕೂಡ ಅರ್ಥಿಕ ನೆರವು ನೀಡಲು ನಕಾರ ಎತ್ತಿದೆ. ಅಷ್ಟೆಲ್ಲ ಆದರೂ ಅಲ್ಲೊಬ್ಬರು..ಇಲ್ಲೊಬ್ಬರು ತಾಲಿಬಾನ್ನ್ನು ಹೊಗಳುತ್ತಿದ್ದಾರೆ. ಭಾರತದಲ್ಲಿ ತಾಲಿಬಾನ್ ಉಗ್ರರರನ್ನು ಶ್ಲಾಘಿಸಿದ ಸಂಸದನೊಬ್ಬನ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೊಬ್ಬಾತನ ವಿರುದ್ಧ ಸ್ವಧರ್ಮೀಯರೇ ತಿರುಗಿಬಿದ್ದಿದ್ದಾರೆ.
ಅಶ್ರಫ್ ಘನಿ ಸೋದರ ತಾಲಿಬಾನಿಗಳಿಗೆ ಬೆಂಬಲ ಘೋಷಿಸಿದ ವಿಡಿಯೋ ಇಲ್ಲಿದೆ..
طالبان کا کہنا ہے کہ @ashrafghani کے بھائی حشمت غنی احمد زئی نے طالبان کی حمایت کا اعلان کیا ہے۔ طالبان رہنما خلیل الرحمٰن اور دینی عالم مفتی محمود ذاکری اس موقع پر موجود ہیں۔ ویڈیو مفتی ذاکری نے جاری کی ہے۔ pic.twitter.com/MmBIsRqwa4
— Tahir Khan (@taahir_khan) August 21, 2021
ಇದನ್ನೂ ಓದಿ: 5 ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಗಳ್ಳರನ್ನು ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು
Video: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟ; ವಧುವನ್ನು ತಪ್ಪಿಸಲು ಹೋಗಿ ವರನಿಗೆ ಗಾಯ