ಕಾಬೂಲ್ ವಿಮಾನ ನಿಲ್ದಾಣದಿಂದ 150 ಭಾರತೀಯರು ಕಿಡ್ನ್ಯಾಪ್ ಆಗಿರುವ ಸಾಧ್ಯತೆ: ವಿದೇಶಿ ಮಾಧ್ಯಮಗಳಲ್ಲಿ ಮಾಹಿತಿ
ಆದರೆ, ಭಾರತೀಯರ ಕಿಡ್ನ್ಯಾಪ್ ಆಗಿರುವ ಬಗ್ಗೆ ಈವರೆಗೆ ಭಾರತ ಸರ್ಕಾರ ಖಚಿತಪಡಿಸಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಬಿತ್ತರವಾಗುತ್ತಿದೆ.
ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಿಂದ 150 ಭಾರತೀಯರನ್ನು ಕಿಡ್ನ್ಯಾಪ್ ಮಾಡಿರುವ ಬಗ್ಗೆ ಕಾಬೂಲ್ನ ಭಾರತೀಯ ದೂತಾವಾಸದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ರಾಯಭಾರ ಕಚೇರಿಯ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ದೊರೆತಿದ್ದು, ಈ ಬಗ್ಗೆ ಅಫ್ಘಾನಿಸ್ತಾನದ ಮುಸ್ಲಿಂ ಶಿರಜಾದ್ನಿಂದ ಮಾಡಿರುವ ಟ್ವೀಟ್ ಲಭ್ಯವಾಗಿದೆ. ಆದರೆ, ಭಾರತೀಯರ ಕಿಡ್ನ್ಯಾಪ್ ಆಗಿರುವ ಬಗ್ಗೆ ಈವರೆಗೆ ಭಾರತ ಸರ್ಕಾರ ಖಚಿತಪಡಿಸಿಲ್ಲ. ಜತೆಗೆ, ಭಾರತದ ವಿದೇಶಾಂಗ ಇಲಾಖೆ ಕೂಡಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಬಿತ್ತರವಾಗುತ್ತಿದೆ.
ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಕಾಣೆಯಾಗಿರುವವರು ಭಾರತೀಯರೇ ಎನ್ನಲಾಗಿದ್ದು, ಕಾಬೂಲ್ ವಿಮಾನ ನಿಲ್ದಾಣದ ಹೊರ ಭಾಗದ ಗೇಟ್ ಬಳಿ ಅವರನ್ನೆಲ್ಲಾ ತಾಲಿಬಾನಿಗಳು ವಶಕ್ಕೆ ಪಡೆದಿರುವ ಸಾಧ್ಯತೆ ಇದೆ. ಅದರಲ್ಲಿ ಬೇರೆ ದೇಶಕ್ಕೆ ಸೇರಿದವರೂ ಇದ್ದಾರೋ, ಇಲ್ಲವೋ ಎಂಬುದು ಖಚಿತವಾಗಿಲ್ಲ ಎಂದು ತಿಳಿದುಬಂದಿದೆ.
ಕಾಬೂಲ್ನಿಂದ ಈವರೆಗೆ ಸುಮಾರು 12 ಸಾವಿರ ವಿದೇಶಿಯರ ರಕ್ಷಣೆ ಮಾಡಲಾಗಿದ್ದು, ಅವರನ್ನೆಲ್ಲಾ ಏರ್ಲಿಫ್ಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿಯರನ್ನು ರಕ್ಷಣೆ ಮಾಡುತ್ತಿರುವ ಹೊತ್ತಿನಲ್ಲೇ ಭಾರತೀಯರು ಎನ್ನಲಾದ ಸುಮಾರು 150 ಮಂದಿ ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಅಫ್ಘಾನಿಸ್ತಾನದಲ್ಲಿ ಭಾರತೀಯರು ಸಿಲುಕಿರುವ ಹಿನ್ನೆಲೆ ಒಟ್ಟು 250 ಜನರನ್ನು ಪಟ್ಟಿ ಮಾಡಿರುವ ಅಧಿಕಾರಿಗಳು C17 ವಿಮಾನದಲ್ಲಿ ಭಾರತೀಯರನ್ನು ಏರ್ಲಿಫ್ಟ್ ಮಾಡಲು ಸಜ್ಜಾಗಿದ್ದಾರೆ. ಬೋರ್ಡಿಂಗ್ನಲ್ಲಿ ಹೊರಟು ನಿಂತಿರುವ 250 ರಿಂದ 300 ಮಂದಿ ಭಾರತೀಯರನ್ನು ರಕ್ಷಿಸಲು ಇಂದೇ ತೆರಳುವ ಸಾಧ್ಯತೆ ದಟ್ಟವಾಗಿದೆ. ಆ ಪೈಕಿ ತೀರ್ಥಹಳ್ಳಿಯ ರಾಬರ್ಟ್ ಹಾಗೂ ಮಂಗಳೂರಿನ ಜೆರೋಮ್ ಇದ್ದು, ನೋಡೆಲ್ ಅಧಿಕಾರಿ ಉಮೇಶ್ ಕುಮಾರ್ ಅವರಿಬ್ಬರನ್ನೂ ಈಗಾಗಲೇ ಸಂಪರ್ಕಿಸಿದ್ದಾರೆ. ಅವರ ಜತೆಗೆ ಮತ್ತಷ್ಟು ಮಂದಿ ಇರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಭಾರತೀಯರು ಭಾರತಕ್ಕೆ ಮಾತ್ರ ಹಿಂದಿರುಗುತ್ತಿಲ್ಲ. ಬೇರೆ ಬೇರೆ ದೇಶಗಳತ್ತಲೂ ಮುಖ ಮಾಡುತ್ತಿದ್ದಾರೆ. ಇಂಗ್ಲೆಂಡ್,ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳತ್ತ ಮುಖ ಮಾಡಿದ್ದು, ಮೊದಲು ಅಫ್ಘಾನಿಸ್ತಾನದಿಂದ ಪಾರಾದರೆ ಸಾಕು ಎಂದು ಒದ್ದಾಡುತ್ತಿದ್ದಾರೆ.
(150 people mostly Indians captured by Taliban in Kabul airport says report but not yet confirmed)
ಇದನ್ನೂ ಓದಿ: Afghanistan Photos: ಅಫ್ಘಾನಿಸ್ತಾನದಲ್ಲಿ ಹೆತ್ತವರಿಗೂ ಭಾರವಾದ ಮಕ್ಕಳು; ಬಂದೂಕಿನ ಸದ್ದಿನಲ್ಲಿ ಮಕ್ಕಳ ಆಕ್ರಂದನ ಕೇಳುವವರಾರು?
ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ
Published On - 12:41 pm, Sat, 21 August 21