’ದೀರ್ಘ ಸಮಯದಿಂದ ತಾಲಿಬಾನಿಗಳ ಬೇಕು..ಬೇಡ ನೋಡಿಕೊಳ್ಳುತ್ತಿದ್ದೇವೆ’-ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಸಚಿವ

| Updated By: Lakshmi Hegde

Updated on: Sep 02, 2021 | 11:36 AM

ಆಗಸ್ಟ್​ 28ರಂದು ಮಾತನಾಡಿದ್ದ ಪಾಕ್​ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್ ಖುರೇಷಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ರಚಿಸಲು ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

’ದೀರ್ಘ ಸಮಯದಿಂದ ತಾಲಿಬಾನಿಗಳ ಬೇಕು..ಬೇಡ ನೋಡಿಕೊಳ್ಳುತ್ತಿದ್ದೇವೆ’-ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಸಚಿವ
ಶೇಖ್​ ರಶೀದ್​ ಅಹ್ಮದ್​
Follow us on

ಇಸ್ಲಮಾಬಾದ್​: ಬಹಳ ಹಿಂದಿನಿಂದಲೂ ತಾಲಿಬಾನಿಗಳ ಉಸ್ತುವಾರಿಯನ್ನು ತಾಲಿಬಾನ್​ ನೋಡಿಕೊಳ್ಳುತ್ತಿದೆ. ಅವರಿಗೆ ಆಶ್ರಯವನ್ನೂ ನೀಡಿದೆ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್​ ರಶೀದ್ (Sheikh Rashid​) ಒಪ್ಪಿಕೊಂಡಿದ್ದಾರೆ. 20ವರ್ಷಗಳ ನಂತರ ಮತ್ತೆ ತಾಲಿಬಾನಿಗಳು ಆಡಳಿತ ಹಿಡಿದ ಬಳಿಕ ಅತ್ಯಂತ ಸಂತೋಷ ಪಟ್ಟಿದ್ದು ಪಾಕಿಸ್ತಾನವೇ ಎಂಬುದರಲ್ಲಿ ಎರಡು ಮಾತಿಲ್ಲ. ತಾಲಿಬಾನಿ (Taliban)ಗಳು ಕಾಶ್ಮೀರ (Jammu-Kashmir)ವನ್ನು ಗೆದ್ದು ನಮಗೆ ಕೊಡುತ್ತಾರೆ ಎಂಬಲ್ಲವರಿಗೆ ಆ ದೇಶ ಯೋಚನೆ ಮಾಡಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವಾಗ ಪಾಕ್​ನಿಂದ 10-15ಸಾವಿರ ಉಗ್ರರು ಅಲ್ಲಿಗೆ ಹೋಗಿದ್ದರು ಎಂಬ ವಿಚಾರವನ್ನು ಅಂದಿನ ಅಧ್ಯಕ್ಷ ಅಶ್ರಫ್​ ಘನಿಯೇ ಹೇಳಿದ್ದಾರೆ.

ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೇಖ್​ ರಶೀದ್​, ನಾವು ತಾಲಿಬಾನಿಗಳ ಉಸ್ತುವಾರಿಯನ್ನು ಕಳೆದ ಅನೇಕ ದಿನಗಳಿಂದಲೂ ಹೊತ್ತಿದ್ದೇವೆ. ದೀರ್ಘಕಾಲದಿಂದಲೂ ಅವರನ್ನು ನೋಡಿಕೊಳ್ಳುತ್ತಿದ್ದೇವೆ. ತಾಲಿಬಾನಿಗಳಿಗೆ ಪಾಕಿಸ್ತಾನದಲ್ಲಿ ಶಿಕ್ಷಣ, ಆಶ್ರಯ ನೀಡಲಾಗಿದೆ. ಅವರಲ್ಲಿ ಅನೇಕರಿಗೆ ಇಲ್ಲಿ ಮನೆ ಕೂಡ ಇದೆ. ಅವರಿಗಾಗಿ ನಾವು ಏನೆಲ್ಲ ಸಾಧ್ಯವೋ ಅಷ್ಟನ್ನೂ ಮಾಡಿದ್ದೇವೆ ಎಂದು ಹೇಳಿದರು.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣವಾಗಿ ಹೊರಟುಹೋದ ಮೇಲೆ ತಾಲಿಬಾನ್​ ಉಗ್ರರು ತುಂಬ ಸಂಭ್ರಮಸಿದ್ದರು. ಅದಕ್ಕೂ ಮೊದಲು ಆಗಸ್ಟ್​ 28ರಂದು ಮಾತನಾಡಿದ್ದ ಪಾಕ್​ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್ ಖುರೇಷಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ರಚನೆ ಮಾಡಲು ಬೇಕಾಗಿರುವ ಎಲ್ಲ ರೀತಿಯ ಬೆಂಬಲವನ್ನೂ ಇಸ್ಲಮಾಬಾದ್​ ನೀಡಲಿದೆ ಎಂದು ಹೇಳಿದ್ದರು.

ತಾಲಿಬಾನ್​ ಮುಖಂಡನೊಂದಿಗೆ ಮಾತುಕತೆ
ಇನ್ನು ಮೊನ್ನೆ ಕತಾರ್​ನ ರಾಜಧಾನಿ ದೋಹಾದಲ್ಲಿ ಭಾರತೀಯ ರಾಯಭಾರಿ ದೀಪಕ್​ ಮಿತ್ತಲ್​ ಮತ್ತು ತಾಲಿಬಾನ್​ ಮುಖಂಡ ಮೊಹಮ್ಮದ್​ ಅಬ್ಬಾಸ್​ ಸ್ಟಾನೆಕ್​ಝೈ ನಡುವೆ ರಾಜತಾಂತ್ರಿಕ ಮಾತುಕತೆ ನಡೆದಿದೆ. ಈ ವೇಳೆ ಅಫ್ಘಾನ್​ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಸುರಕ್ಷತೆ, ಭದ್ರತೆ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Meeting Point : ‘ನಮ್ಮೂರಿಗೆ ನ್ಯಾಷನಲ್ ಹೈವೇ ಬಂದಷ್ಟು ಸುಲಭವಾಗಿರಲಿಲ್ಲ ಹುಡುಗರನ್ನು ಮಾತಾಡಿಸುವುದು’

Vikrant Rona: ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥಮ್’ ರಿಲೀಸ್; ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ