Kabul Blast: 2 ಆತ್ಮಾಹುತಿ ದಾಳಿಯಲ್ಲಿ 13 ಸಾವು, 15 ಮಂದಿಗೆ ಗಾಯಗೊಂಡಿದ್ದಾರೆ ಎಂದ ರಷ್ಯಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 26, 2021 | 9:33 PM

ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ ಸುಮಾರು 13 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಘಟನೆಯ ಬಗ್ಗೆ ಮಾಹಿತಿ ಇರುವ ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.

Kabul Blast: 2 ಆತ್ಮಾಹುತಿ ದಾಳಿಯಲ್ಲಿ 13 ಸಾವು, 15 ಮಂದಿಗೆ ಗಾಯಗೊಂಡಿದ್ದಾರೆ ಎಂದ ರಷ್ಯಾ
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಬಾಂಬ್ ಸ್ಫೋಟದ ನಂತರ ಎದ್ದಿರುವ ಹೊಗೆ
Follow us on

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಎರಡು ಆತ್ಮಾಹುತಿ ಬಾಂಬ್ ದಾಳಿಗಳಲ್ಲಿ ಸುಮಾರು 13 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಘಟನೆಯ ಬಗ್ಗೆ ಮಾಹಿತಿ ಇರುವ ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.

ಏರ್​ಲಿಫ್ಟ್​ಗಾಗಿ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದಲ್ಲಿ ನೆರೆದಿರುವ ಜನರ ಮೇಲೆ ಬಾಂಬ್ ದಾಳಿ ನಡೆಯಬಹುದು ಎಂದು ಒಂದು ದಿನ ಮೊದಲೇ ನಾಲ್ಕು ದೇಶಗಳ ಗುಪ್ತಚರ ಸಂಸ್ಥೆಗಳು ಎಚ್ಚರಿಸಿದ್ದವು. ಈ ಎಚ್ಚರಿಕೆಗಳ ಬೆನ್ನಲ್ಲೇ ಬಾಂಬ್​ಗಳು ಸ್ಫೋಟಿಸಿರುವುದು ಏರ್​ಲಿಫ್ಟ್​ ಕಾರ್ಯಾಚರಣೆಯ ಮೇಲೆ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ. ವಿಮಾನ ನಿಲ್ದಾಣ ಬಾಂಬ್​ ಸ್ಫೋಟಕ್ಕೆ ಐಸಿಸ್ ಕಾರಣ ಎಂದು ಹಲವು ದೇಶಗಳ ಗುಪ್ತಚರ ಇಲಾಖೆಗಳು ಹೇಳಿವೆ.

ಬಾಂಬ್ ಸ್ಫೋಟದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ವಿದೇಶಾಂಗ ಸಚಿವಾಲಯ, 13 ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕದ ಅಧಿಕಾರಿಗಳು, ಅಮೆರಿಕ ನಾಗರಿಕರೂ ಗಾಯಗೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಮೊದಲು ಒಂದು ಬಾಂಬ್ ಸ್ಫೋಟಿಸಿತು. ನೋಡನೋಡುತ್ತಲೇ ಹಲವರ ದೇಹಗಳು ಛಿದ್ರವಾದವು. ನಂತರ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತು ಎಂದು ವಿಮಾನ ನಿಲ್ದಾಣದಲ್ಲಿದ್ದ ಕಾಬೂಲ್ ನಿವಾಸಿ ಆದಂ ಖಾನ್ ಹೇಳಿಕೆಯನ್ನು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

52 ಮಂದಿಗೆ ಗಾಯ: ತಾಲಿಬಾನ್
ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಒಟ್ಟು 52 ಮಂದಿಗೆ ಗಾಯಗಳಾಗಿವೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ ಹೇಳಿಕೆ ನೀಡಿದ್ದಾರೆ. ಸಾವಿನ‌ ನಿಖರ ಸಂಖ್ಯೆ ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕ ತುರ್ತು ಸಭೆ
ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶ್ವೇತಭವನದಲ್ಲಿ ತುರ್ತು ಸಭೆ ನಡೆಸಿದರು.

ಬಾಂಬ್ ಸ್ಫೋಟದ ವಿಡಿಯೊ ಇಲ್ಲಿದೆ

(Kabul Blast many died wounded says Russian Embassy)

ಇದನ್ನೂ ಓದಿ: ISIS vs Taliban: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸ್ಫೋಟ, ಐಸಿಸ್ ಕೃತ್ಯದ ಶಂಕೆ

ಇದನ್ನೂ ಓದಿ: Kabul Blast: ಕಾಬೂಲ್ ವಿಮಾನ ನಿಲ್ದಾಣದ ಬಳಿ ಪ್ರಬಲ ಬಾಂಬ್​ ಸ್ಫೋಟ

Published On - 9:14 pm, Thu, 26 August 21