AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wall Street: ಕಾಬೂಲ್ ಸ್ಫೋಟಕ್ಕೆ ಕಂಪಿಸಿದ ಅಮೆರಿಕ ಷೇರುಪೇಟೆ; ಡೊ ಜೋನ್ಸ್ ಕುಸಿತ

ಅಭದ್ರತೆಯ ಭಾವನೆ ಮೂಡಿದಾಗ ಹೂಡಿಕೆದಾರರು ಹೀಗೆ ಪ್ರತಿಕ್ರಿಯಿಸುವುದು ಸಾಮಾನ್ಯ ಎಂದು ಅಮೆರಿಕದ ಷೇರುಪೇಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Wall Street: ಕಾಬೂಲ್ ಸ್ಫೋಟಕ್ಕೆ ಕಂಪಿಸಿದ ಅಮೆರಿಕ ಷೇರುಪೇಟೆ; ಡೊ ಜೋನ್ಸ್ ಕುಸಿತ
ಅಮೆರಿಕದ ವಾಲ್​ಸ್ಟ್ರೀಟ್
TV9 Web
| Edited By: |

Updated on:Aug 26, 2021 | 10:15 PM

Share

ವಾಷಿಂಗ್​ಟನ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಎರಡು ಆತ್ಮಾಹುತಿ ಬಾಂಬ್​ ದಾಳಿಯ ಸದ್ದಿಗೆ ಅಮೆರಿಕದ ಷೇರುಪೇಟೆ ಕಂಪಿಸಿದೆ. ಅಮೆರಿಕದ ಪ್ರಮುಖ ಷೇರುಸಂವೇದಿ ಸೂಚ್ಯಂಕಗಳು ಇಳಿಕೆ ದಾಖಲಿಸಿದವು. ಬಹುತೇಕ ಟ್ರೇಡರ್​ಗಳು ಕಾಬೂಲ್​ ಸ್ಫೋಟದ ನಂತರ ತರಾತುರಿಯಲ್ಲಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು ಕಂಡುಬಂತು.

ಅಮೆರಿಕದ ಕೇಂದ್ರೀಯ ಬ್ಯಾಂಕ್​ನ ವಾರ್ಷಿಕ ಸಭೆ ಸಹ ಶೀಘ್ರದಲ್ಲಿಯೇ ನಡೆಯಲಿದ್ದು, ಹಣಕಾಸು ನಿಯಂತ್ರಣ ವಿಚಾರದಲ್ಲಿ ಇರುವ ಉದಾರ ನೀತಿ ಮುಂದಿನ ದಿನಗಳಲ್ಲಿ ಬಿಗಿಯಾಗಬಹುದು, ಬಾಂಡ್ ಖರೀದಿ ಯೋಜನೆಗೆ ನಿರ್ಬಂಧಗಳು ಜಾರಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಷೇರುಪೇಟೆ ಕಳಾಹೀನವಾಗಲು ಇದೂ ಸಹ ಒಂದು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕ ಕಾಲಮಾನ ಬೆಳಿಗ್ಗೆ 10.48ಕ್ಕೆ ಡೊ ಜೋನ್ಸ್​ ಕೈಗಾರಿಕಾ ಸರಾಸರಿ ವಹಿವಾಟು 58.96 ಅಂಶ (ಶೇ 0.17) ಕುಸಿತ ಕಂಡು, 35,346.54ರಲ್ಲಿ ವಹಿವಾಟು ನಡೆಸುತ್ತಿತ್ತು. ಎಸ್​ಅಂಡ್​ಪಿ 500 17.12 ಅಂಶಗಳಷ್ಟು ಕುಸಿತ ಕಂಡು 4,479.07ರಲ್ಲಿ ವಹಿವಾಟು ನಡೆಸುತ್ತಿತ್ತು. ಪ್ರತಿಷ್ಠಿತ ನಾಸ್​ಡಾಕ್​ ಸಹ 56.33 ಅಂಶಗಳನ್ನು ಕಳೆದುಕೊಂಡು 14,985.53ರಲ್ಲಿ ವಹಿವಾಟು ನಡೆಸುತ್ತಿತ್ತು.

ಅಮೆರಿಕ ಮೂರೂ ಪ್ರಮುಖ ಸೂಚ್ಯಂಕಗಳು ಮುಂಜಾನೆ ಫ್ಲಾಟ್ ಆಗಿಯೇ ವಹಿವಾಟು ಆರಂಭಿಸಿದವು. ಕಾಬೂಲ್ ಸ್ಫೋಟದ ಸುದ್ದಿ ಅಪ್ಪಳಿಸುತ್ತಿದ್ದಂತೆಯೇ ಸೂಚ್ಯಂಕಗಳು ಇಳಿಕೆ ದಾಖಲಿಸಲು ಶುರು ಮಾಡಿದವು. ‘ಜಿಯೊ ಪಾಲಿಟಿಕ್ಸ್​ ವಿದ್ಯಮಾನಗಳು ಸಾಮಾನ್ಯವಾಗಿ ಷೇರುಪೇಟೆಯಲ್ಲಿ ತೀವ್ರವಾಗಿ ಪ್ರಭಾವಿಸುವುದಿಲ್ಲ. ಆದರೆ ಅಭದ್ರತೆಯ ಭಾವನೆ ಮೂಡಿದಾಗ ಹೂಡಿಕೆದಾರರು ಹೀಗೆ ಪ್ರತಿಕ್ರಿಯಿಸುವುದು ಸಾಮಾನ್ಯ’ ಎಂದು ಅಮೆರಿಕದ ಫೈನಾನ್ಷಿಯಲ್ ರಿಸರ್ಚ್​ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಂಡಿ ಫ್ರೆಡರಿಕ್ ವಿಶ್ಲೇಷಿಸಿದ್ದಾರೆ.

ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಅಮೆರಿಕ ಫೆಡರಿಲ್ ರಿಸರ್ವ್ ಬಾಂಡ್ ಖರೀದಿ ಮಿತಿಯನ್ನು ತಿಂಗಳಿಗೆ 120 ಶತಕೋಟಿ ಡಾಲರ್​ಗೆ ಸೀಮಿತಗೊಳಿಸಲು ಚಿಂತನೆ ನಡೆಸಿದೆ. ಈ ಸುದ್ದಿಯೂ ಅಮೆರಿಕ ಪೇಟೆಯ ವಹಿವಾಟನ್ನು ಪ್ರಭಾವಿಸಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಎರಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 13 ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ.

(Impact of Kabul blast wall street of America hits session low traders panic)

ಇದನ್ನೂ ಓದಿ: Kabul Blast: 2 ಆತ್ಮಾಹುತಿ ದಾಳಿಯಲ್ಲಿ 13 ಸಾವು, 15 ಮಂದಿಗೆ ಗಾಯಗೊಂಡಿದ್ದಾರೆ ಎಂದ ರಷ್ಯಾ

ಇದನ್ನೂ ಓದಿ: Kabul Blast: ಕಾಬೂಲ್​​ನಲ್ಲಿ ಮೊಬೈಲ್​​, ಇಂಟರ್​ನೆಟ್​ ಸ್ಥಗಿತ; ಸರಣಿ ಸ್ಫೋಟದಿಂದ ಕಳವಳಗೊಂಡು ತುರ್ತು ಸಭೆ ಕರೆದ ಅಮೆರಿಕ, ಬ್ರಿಟನ್

Published On - 10:13 pm, Thu, 26 August 21

Follow Us
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ