ಅಫ್ಘಾನ್ನಲ್ಲಿ ತಾಲಿಬಾನಿಗಳನ್ನು ಗುರಿಯಾಗಿಸಿ ಬಾಂಬ್ ದಾಳಿ; ಮೂವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಕಾಬೂಲ್ನಿಂದ ಸುಮಾರು 80 ಮೈಲುಗಳಷ್ಟು ದೂರ ಇರುವ ಜಲಾಲಾಬಾದ್ ಅಫ್ಘಾನಿಸ್ತಾನದಲ್ಲಿ 5ನೇ ದೊಡ್ಡ ನಗರ. ಆಗಸ್ಟ್ 15ರಂದು ಅಫ್ಘಾನ್ನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಇಡೀ ಜಗತ್ತಿನ ಗಮನವೀಗ ಆ ದೇಶದ ಮೇಲೆ ಇದೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಶನಿವಾರ ಸಂಜೆ ಹೊತ್ತಿಗೆ ಅಫ್ಘಾನಿಸ್ತಾನದ ಜಲಾಲಾಬಾದ್ (Jalalabad)ನಲ್ಲಿ ಸರಣಿ ಸ್ಫೋಟವಾಗಿದ್ದು ಮೂವರು ಮೃತಪಟ್ಟಿದ್ದಾರೆ. ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನಲ್ಲಿ ತಾಲಿಬಾನಿಗಳ ವಾಹನಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿತ್ತು. ರಸ್ತೆ ಬದಿಯಲ್ಲಿ ಈ ಸ್ಫೋಟವಾಗಿದೆ.
ಸ್ಫೋಟದಲ್ಲಿ ಸತ್ತ ಮೂವರಲ್ಲಿ ಇಬ್ಬರು ತಾಲಿಬಾನ್ ಅಧಿಕಾರಿಗಳಾಗಿದ್ದಾರೆ. ಇದರಲ್ಲಿ ಗಾಯಗೊಂಡವರಲ್ಲಿ ಅನೇಕರು ಸಾಮಾನ್ಯ ಜನರೇ ಆಗಿದ್ದಾರೆ. ಜಲಾಲಾಬಾದ್ನಲ್ಲಿ ನಡೆದ ಈ ಬಾಂಬ್ ಸ್ಫೋಟ ಪಕ್ಕಾ ತಾಲಿಬಾನಿಗಳನ್ನು ಗುರಿಯಾಗಿಸಿಕೊಂಡೇ ನಡೆದದ್ದು ಎಂಬುದು ಸ್ಪಷ್ಟವಾಗಿದೆ. ಆದರೆ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.
Local officials in Nangarhar province confirm that a roadside mine hit a Taliban forces vehicle on Saturday in Jalalabad’s PD6. Nangarhar provincial hospital officials said around 20 wounded have been transferred to the hospital, most of whom are civilians.#TOLOnews
— TOLOnews (@TOLOnews) September 18, 2021
ಕಾಬೂಲ್ನಿಂದ ಸುಮಾರು 80 ಮೈಲುಗಳಷ್ಟು ದೂರ ಇರುವ ಜಲಾಲಾಬಾದ್ ಅಫ್ಘಾನಿಸ್ತಾನದಲ್ಲಿ 5ನೇ ದೊಡ್ಡ ನಗರ. ಆಗಸ್ಟ್ 15ರಂದು ಅಫ್ಘಾನ್ನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಇಡೀ ಜಗತ್ತಿನ ಗಮನವೀಗ ಆ ದೇಶದ ಮೇಲೆ ಇದೆ. ತಾಲಿಬಾನಿಗಳಿಗೆ ಅಫ್ಘಾನಿಸ್ತಾನದಲ್ಲೇ ವಿರೋಧಿಗಳು ಇದ್ದಾರೆ. ಅಫ್ಘಾನ್ ಪ್ರತಿರೋಧಕ ಪಡೆ ತಾಲಿಬಾನಿಗಳ ವಿರುದ್ಧ ಸಮರ ಸಾರಿದೆ. ಹಾಗೇ, ಅಮೆರಿಕ ಸೇನೆಯೂ ಸಹ ಒಂದು ಕಣ್ಣಿಟ್ಟಿದೆ. ಯುಎಸ್ ಸೇನೆ ನಾಗರಿಕರ ಸ್ಥಳಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದಾಗ ಕಾಬೂಲ್ ಬಳಿ ಐಸಿಸ್ ಕೆ ದಾಳಿ ನಡೆಸಿತ್ತು ಇದರಲ್ಲಿ ಯುಎಸ್ನ ಸುಮಾರು 10 ಯೋಧರು ಮೃತಪಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಯುಎಸ್ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಮಕ್ಕಳೂ ಸೇರಿ ಮುಗ್ಧ ನಾಗರಿಕರು ಸಾವನ್ನಪ್ಪಿದ್ದರು. ಈ ಮಧ್ಯೆ ತಾಲಿಬಾನಿಗಳಲ್ಲೇ ಎರಡು ಬಣಗಳಾಗಿದ್ದು, ಆಂತರಿಕ ಕಲಹವೂ ಈ ಬಾಂಬ್ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಅಪಘಾತದ ಸುದ್ದಿ ಕೇಳಿ ಬೇಸರವಾಗಿದ್ದ ಸಾಯಿ ಧರಮ್ತೇಜ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ
ಬುರ್ಖಾಧಾರಿ ಮಹಿಳೆ ಜತೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ; ಕಠಿಣ ಕ್ರಮದ ಭರವಸೆ ನೀಡಿದ ಸಿಎಂ
(Series of Bomb explosions in Jalalabad Of Afghanistan)