ಅಪಘಾತದ ಸುದ್ದಿ ಕೇಳಿ ಬೇಸರವಾಗಿದ್ದ ಸಾಯಿ ಧರಮ್​ತೇಜ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ

Sai Dharam Tej: ನಟ ಸಾಯಿ ಧರಮ್​ತೇಜ್ ಅಭಿನಯದ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದ್ದು, ಸುದ್ದಿ ಕೇಳಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ.

ಅಪಘಾತದ ಸುದ್ದಿ ಕೇಳಿ ಬೇಸರವಾಗಿದ್ದ ಸಾಯಿ ಧರಮ್​ತೇಜ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ
ನಟ ಸಾಯಿ ಧರಮ್ ತೇಜ್
TV9kannada Web Team

| Edited By: shivaprasad.hs

Sep 19, 2021 | 3:54 PM


Tollywood: ತೆಲುಗಿನ ಭರವಸೆಯ ನಟ ಸಾಯಿ ಧರಮ್ ತೇಜ್ ಇತ್ತೀಚೆಗೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಿದ್ದು,ಇತ್ತೀಚೆಗಷ್ಟೇ ವೆಂಟಿಲೇಟರ್ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದರು. ಇದು ಅಭಿಮಾನಿಗಳಿಗೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತ್ತು.ಜೊತೆಗೆ ಕಳೆದ ಹತ್ತು ದಿನಗಳಿಂದ ಕೇವಲ ಸಾಯಿಯವರ ಅಪಗಾತದ ಸುದ್ದಿ ಕೇಳಿದವರಿಗೆ ಇದೀಗ ಹೊಸ ಸುದ್ದಿಯೊಂದು ಸಂತಸ ನೀಡಿದೆ. ತೇಜ್ ಮತ್ತು ದೇವ್ ಕಟ್ಟಾ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ‘ರಿಪಬ್ಲಿಕ್’ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಪೊಲಿಟಿಕಲ್ ಥ್ರಿಲ್ಲರ್ ಮಾದರಿಯ ಈ ಚಿತ್ರದಲ್ಲಿ ತೇಜ್ ಐಎಎಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ನಿರೀಕ್ಷೆ ಹೆಚ್ಚಿಸಿದೆ.

ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕೊರೊನಾದ ಕಾರಣ ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರ ತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲಾಗಿದ್ದು, ಯು/ ಎ ಸರ್ಟಿಫಿಕೇಟ್ ನೀಡಲಾಗಿದೆ. ಗಾಂಧಿ ಜಯಂತಿಯ ಮುನ್ನಾದಿನವಾದ ಅಕ್ಟೋಬರ್ 1ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಹೊಸ ಪೋಸ್ಟರ್​ನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.

ಚಿತ್ರದ ಹೊಸ ಪೋಸ್ಟರ್:

ಜೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಜೆ.ಬಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಜೆ.ಭಗವಾನ್ ಮತ್ತು ಜೆ.ಫುಲ್ಲರಾವ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ತೇಜ್​ಗೆ ಜೋಡಿಯಾಗಿ ಐಶ್ವರ್ಯ ರಾಜೇಶ್ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿ ರಮ್ಯಾ ಕೃಷ್ಣ, ಜಗಪತಿಬಾಬು ಮೊದಲಾದವರು ಬಣ್ಣ ಹಚ್ಚಿದ್ದಾರೆ. ಚಿತ್ರವನ್ನು ದೇವ್​ಕಟ್ಟ ನಿರ್ದೇಶಿಸಿದ್ದಾರೆ. ಈ ಚಿತ್ರವು ಸಾಯಿ ಧರಮ್ ತೇಜ್ ವೃತ್ತಿಜೀವನಕ್ಕೆ ಬಹಳ ಮುಖ್ಯವಾಗಿದ್ದು, ಚಿತ್ರ ಎಂತಹ ಪ್ರತಿಕ್ರಿಯೆ ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:

ಡಾ.ರಾಜ್ ಕುಮಾರ್ ವೃತ್ತಿ ಜೀವನ ಆರಂಭಿಸಿದ ದೇವಸ್ಥಾನ ಇದೆ ನೋಡಿ

‘ಶಿಲ್ಪಾ, ಶಮಿತಾ ನಿಮ್ಮ ಸಹೋದರಿಯರೇ?’ ಎಂದು ತಾಯಿ ಸುನಂದಾ ಶೆಟ್ಟಿಯನ್ನು ಪ್ರಶ್ನಿಸಿದ ಅಭಿಮಾನಿ; ಕಾರಣವೇನು?

(Sai Dharam Tej new movie Republic got UA certificate and will release on October 1st)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada