ಪಂಜ್‌ಶೀರ್ ಪ್ರಾಂತ್ಯದ ಸಮಸ್ಯೆ ಪರಿಹಾರಕ್ಕೆ ಶಾಂತಿಯುತ ಮಾತುಕತೆಗೆ ಬದ್ಧ: ತಾಲಿಬಾನ್

| Updated By: guruganesh bhat

Updated on: Aug 24, 2021 | 10:09 PM

ಒಂದಾನುವೇಳೆ ಅಫ್ಘಾನಿಸ್ತಾನದಿಂದ ಬಂದವರಿಗೆ ಕೊವಿಡ್ ಸೋಂಕು ದೃಢವಾದರೆ ನಿಗದಿತ ಆಸ್ಪತ್ರೆಗಳಿಗೆ ಸ್ಥಳಾಂತರರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪಂಜ್‌ಶೀರ್ ಪ್ರಾಂತ್ಯದ ಸಮಸ್ಯೆ ಪರಿಹಾರಕ್ಕೆ ಶಾಂತಿಯುತ ಮಾತುಕತೆಗೆ ಬದ್ಧ: ತಾಲಿಬಾನ್
ಜಬೀವುಲ್ಲಾ ಮುಜಾಹಿದ್
Follow us on

ಕಾಬೂಲ್: ತಾಲಿಬಾನಿಗಳು ಮನೆ ಮನೆಗೆ ತೆರಳಿ ಹುಡುಕಾಟ ನಡೆಸುತ್ತಿಲ್ಲ. ಅಫ್ಘಾನಿಸ್ತಾನದ ಪ್ರಜೆಗಳ ಸ್ಥಳಾಂತರಕ್ಕೆ ಅಮೆರಿಕ ಪ್ರೋತ್ಸಾಹಿಸಬಾರದು. ಅಫ್ಘಾನಿಸ್ತಾನದ ಪ್ರಜೆಗಳು ದೇಶದಲ್ಲಿಯೇ ಉಳಿದುಕೊಳ್ಳಬೇಕು. ನಾವು ಪಂಜ್‌ಶೀರ್ ಪ್ರಾಂತ್ಯದ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥ ಮಾಡಿಕೊಳ್ಳುತ್ತೇವೆ. ಈ ಮಾತಿಗೆ ಸಾದಾ ಬದ್ಧವಾಗಿರುತ್ತೇವೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಈಮುನ್ನವೂ ಅಫ್ಘಾನಿಸ್ತಾನದ ಪ್ರಜೆಗಳಿಗೆ ತಾಲಿಬಾನ್ ಹಲವು ಭರವಸೆಗಳನ್ನು ನೀಡಿತ್ತು.

ಇತ್ತ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಾಪಸಾದ 81 ಜನರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ದೆಹಲಿಯ ಐಟಿಬಿಪಿ ಚಾವ್ಲಾ ಕ್ಯಾಂಪ್‌ನಲ್ಲಿ 14 ದಿನ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಆಫ್ಘನ್‌ನಿಂದ ಬಂದವರಿಗೆ ಕ್ಯಾಂಪ್‌ನಲ್ಲಿ ಕೊವಿಡ್ ಟೆಸ್ಟ್ ಮಾಡಿದ ನಂತರವೇ ಸ್ವಂತ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಒಂದಾನುವೇಳೆ ಅಫ್ಘಾನಿಸ್ತಾನದಿಂದ ಬಂದವರಿಗೆ ಕೊವಿಡ್ ಸೋಂಕು ದೃಢವಾದರೆ ನಿಗದಿತ ಆಸ್ಪತ್ರೆಗಳಿಗೆ ಸ್ಥಳಾಂತರರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜೊತೆ ಅಫ್ಘಾನಿಸ್ತಾನದ (Afghanistan) ಕುರಿತಾಗಿ ಮಾತುಕತೆ ನಡೆಸಿದರು. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು (Taliban) ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳು ಇಂದು ಮಾತುಕತೆ ನಡೆಸಿವೆ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಹಾಗೂ ಭಾರತ- ರಷ್ಯಾ ಪರಸ್ಪರ ಸಂಬಂಧಗಳ ಬಗ್ಗೆ ಮಾತನಾಡಿರುವದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಇತ್ತೀಚೆಗಿನ ಬೆಳವಣಿಗೆಗಳ ಬಗ್ಗೆ ಸವಿವರವಾದ ಮತ್ತು ಉಪಯುಕ್ತವಾದ ಯೋಚನೆಗಳನ್ನು ನನ್ನ ಗೆಳೆಯ ಅಧ್ಯಕ್ಷ ಪುಟಿನ್ ಜೊತೆಗೆ ಹಂಚಿಕೊಂಡೆ. ಅಷ್ಟೇ ಅಲ್ಲದೆ, ಕೊರೊನಾ ಪ್ರಕರಣದಲ್ಲಿ ಭಾರತ- ರಷ್ಯಾ ರಾಷ್ಟ್ರದ ನೀತಿ ಬಗ್ಗೆಯೂ ಮಾತನಾಡಿದ್ದೇವೆ. ಪ್ರಮುಖ ವಿಷಯಗಳ ಬಗ್ಗೆ ಆಪ್ತ ಸಂವಹನ ನಡೆಸುವುದಕ್ಕೆ ನಾವು ಒಪ್ಪಿಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಭಾರತವು ತಾಲಿಬಾನ್ ವಶಪಡಿಸಿಕೊಂಡಿರುವ ಅಫ್ಘಾನಿಸ್ತಾನದಿಂದ ತನ್ನ ರಾಯಭಾರಿ ಕಚೇರಿಯನ್ನು ತೆರವುಗೊಳಿಸಿದೆ. ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಆದರೆ, ರಷ್ಯಾ ತನ್ನ ಕಚೇರಿಯನ್ನು ಅಫ್ಘಾನಿಸ್ತಾನದಲ್ಲಿ ಮುಂದುವರಿಸಿದೆ. ಹಾಗೂ ತಾಲಿಬಾನ್​ಗಳ ಜೊತೆ ಸಂವಹನ ಮಾರ್ಗ ತೆರೆದು ಇರಿಸಿಕೊಂಡಿದ್ದಾರೆ.

ಇದನ್ನೂ ಓದಿ:
TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

ಅಫ್ಘಾನಿಸ್ತಾನದಲ್ಲಿ ಹಂಗಾಮಿ ಸರ್ಕಾರ ರಚಿಸಿದ ತಾಲಿಬಾನ್: ಆಹಾರ ಧಾನ್ಯದ ಬೆಲೆ ಏರಿಕೆ

(Taliban leader Zabihullah Mujahid says Commitment to peaceful dialogue on the problem of Panjshir problems)

Published On - 8:34 pm, Tue, 24 August 21