ಅಫ್ಘಾನ್​​ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯ ಅಂತಿಮ ಹಂತ; ಪಾಕಿಸ್ತಾನ, ಚೀನಾ, ರಷ್ಯಾಕ್ಕೆ ತಾಲಿಬಾನಿಗಳಿಂದ ಆಹ್ವಾನ

| Updated By: Lakshmi Hegde

Updated on: Sep 06, 2021 | 1:33 PM

ಕಾಬೂಲ್​​ನಲ್ಲಿ​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಬಿಹುಲ್ಲಾಹ್​ ಮುಜಾಹಿದ್​, ಇದೀಗ ಎಲ್ಲ ಯುದ್ಧವೂ ಮುಗಿದಿದೆ ಮತ್ತು ಇನ್ನುಮುಂದೆ ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾಗಿರಲಿದೆ ಎಂದಿದ್ದಾರೆ.

ಅಫ್ಘಾನ್​​ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯ ಅಂತಿಮ ಹಂತ; ಪಾಕಿಸ್ತಾನ, ಚೀನಾ, ರಷ್ಯಾಕ್ಕೆ ತಾಲಿಬಾನಿಗಳಿಂದ ಆಹ್ವಾನ
ತಾಲಿಬಾನ್​ ವಕ್ತಾರ ಜಬಿಹುಲ್ಲಾಹ್​ ಮುಜಾಹಿದ್​
Follow us on

ಪಂಜಶಿರ್​ ಪ್ರಾಂತ್ಯ (Panjshir)ವನ್ನು ನಾವು ಇದೀಗ ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದೇವೆ ಎಂದು ಪ್ರತಿಪಾದಿಸಿ, ಅಲ್ಲಿನ ಗವರ್ನರ್​ ಕಚೇರಿ ಮೇಲೆ ಧ್ವಜಾರೋಹಣವನ್ನೂ ಮಾಡಿರುವ ತಾಲಿಬಾನಿ (Taliban Terrorists)ಗಳು ಇದೀಗ ಸಂಪೂರ್ಣ ಅಪ್ಘಾನಿಸ್ತಾನ (Afghanistan) ತಮ್ಮ ವಶವಾದ ಸಂಭ್ರಮದಲ್ಲಿ ಇದ್ದಾರೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆಯ ಪ್ರಕ್ರಿಯೆ ಕೂಡ ಅಂತಿಮ ಹಂತ ತಲುಪಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇನ್ನೊಂದು ಮಹತ್ವದ ವಿಷಯವೆಂದರೆ, ತಾಲಿಬಾನ್​ ಸರ್ಕಾರ (Taliban Government) ರಚನೆ, ನೂತನ ಅಧ್ಯಕ್ಷನ ಪ್ರಮಾಣವಚನ ಸಮಾರಂಭಕ್ಕೆ ಪಾಕಿಸ್ತಾನ, ಟರ್ಕಿ, ಕತಾರ್, ರಷ್ಯಾ, ಚೀನಾ ಮತ್ತು ಇರಾನ್​ಗೆ ಆಹ್ವಾನ ನೀಡಲಾಗಿದೆ ಎಂದೂ ಬಲವಾದ ಮೂಲಗಳಿಂದ ತಿಳಿದುಬಂದಿದೆ.

ಇಂದು ಕಾಬೂಲ್​​ನಲ್ಲಿ​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಬಿಹುಲ್ಲಾಹ್​ ಮುಜಾಹಿದ್​, ಇದೀಗ ಎಲ್ಲ ಯುದ್ಧವೂ ಮುಗಿದಿದೆ ಮತ್ತು ಇನ್ನುಮುಂದೆ ಅಪ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾಗಿರಲಿದೆ ಎಂಬ ಆಶಯ ಹೊಂದಿದ್ದೇವೆ. ಇನ್ಯಾರಾದಾರೂ ಶಸ್ತ್ರಗಳನ್ನು ಕೈಗೆತ್ತಿಕೊಂಡು ಹೋರಾಟ, ಹೊಡೆದಾಟ ಆರಂಭಿಸಿದರೆ ಅಂಥವರನ್ನು ಈ ದೇಶದ, ಜನರ ಶತ್ರುಗಳು ಎಂದೇ ಭಾವಿಸುತ್ತೇವೆ ಎಂದು ಹೇಳಿದ್ದಾರೆ. ಹಾಗೇ, ಈ ದೇಶವನ್ನು ಆಕ್ರಮಣ ಮಾಡಿದ್ದವರು, ಮಾಡುವವರು ಎಂದಿಗೂ ದೇಶ ನಿರ್ಮಾಣ ಕಾರ್ಯ ಮಾಡುವುದಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಹಾಗೂ ಈ ಕೆಲಸಕ್ಕೆ ಸ್ವತಃ ಜನರೇ ಮುಂದಾಗಬೇಕು ಎಂದೂ ತಿಳಿಸಿದ್ದಾರೆ.  ಇನ್ನು ಕಾಬೂಲ್​ ಏರ್​ಪೋರ್ಟ್​​ನಿಂದ ವಿಮಾನ ಹಾರಾಟ ಪ್ರಕ್ರಿಯೆ ಮತ್ತೆ ಶುರು ಮಾಡುವ ಸಂಬಂಧ ಕತಾರ್​, ಟರ್ಕಿಯ ಟೆಕ್ನಿಕಲ್​ ತಂಡ ಮತ್ತು ಯುಎಇಯ ಕಂಪನಿ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಸ ಸರ್ಕಾರ ರಚನೆಗೆ ಸಣ್ಣಪುಟ್ಟ ತೊಡಕುಗಳಿದ್ದರೂ ಅವು ಪರಿಹಾರ ಆಗದೆ ಇರುವಂಥದ್ದಲ್ಲ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳೂ ಇಲ್ಲ ಎಂದು ಹೇಳಿದ ಜಬಿಹುಲ್ಲಾಹ್​, ನಮ್ಮ ಆಡಳಿತದ ವಿರುದ್ಧ ದಂಗೆ ಏಳುವವರಿಗೆ ಬಲವಾಗಿ ಹೊಡೆತ ಕೊಡುತ್ತೇವೆ. ಯಾವುದೇ ದಂಗೆಯಿರಲಿ ನಾವದನ್ನು ಸೂಕ್ಷ್ಮವಾಗಿ ಪರಿಗಣಿಸಿ, ಶತ್ರುಗಳಿಗೆ ತೀವ್ರ ತಿರುಗೇಟು ನೀಡುತ್ತೇವೆ. ಹೊರಗಿನವರನ್ನಾಗಲಿ, ಒಳಗಿನ ಶತ್ರುಗಳನ್ನಾಗಲಿ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

20 ದಿನವಾಯ್ತು..
ತಾಲಿಬಾನಿಗಳು ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡು 20ದಿನಗಳಾದರೂ ಅಲ್ಲಿ ಸರ್ಕಾರ ರಚನೆ ಸಾಧ್ಯವಾಗಿರಲಿಲ್ಲ. ಪದೇಪದೆ ಮುಂದೂಡಲ್ಪಡುತ್ತಿದೆ. ಪಂಜಶಿರ್​ ಹೋರಾಟವೊಂದು ಕಾರಣವಾಗಿದ್ದರೆ, ಇನ್ನೊಂದು ತಾಲಿಬಾನಿಗಳಿಗೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಬೆಂಬಲ ನೀಡಿದ ಪಾಕಿಸ್ತಾನ ಮೂಲದ ಹಕ್ಕಾನಿ ನೆಟ್ವರ್ಕ್​ನೊಂದಿಗೆ ಮೂಲ ತಾಲಿಬಾನಿ ನಾಯಕರ ಮಾತುಕತೆ ವಿಫಲವಾಗಿದ್ದು ಇನ್ನೊಂದು ಕಾರಣ ಎಂದು ವರದಿಯಾಗಿದೆ. ಆದರೆ ಸರ್ಕಾರ ರಚನೆ ಯಾಕೆ ಮುಂದೂಡಲ್ಪಡುತ್ತಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಲ್ಲಿ ಪಾಕಿಸ್ತಾನ ಕೂಡ ಮಧ್ಯಸ್ಥಿಕೆ ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ನಿನ್ನೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫ್ತಾಸ್​ ಅವರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ, ತಾಲಿಬಾನ್​ ನಾಯಕ ಮುಲ್ಲಾ ಅಬ್ದುಲ್​ ಘನಿ ಬಾರದಾರ್​ರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜನರ ನೋವಿಗೆ ಸ್ಪಂದಿಸಿ; ಬೆಂಗಳೂರು ಸುತ್ತಮುತ್ತ ಸಿವಿಲ್​ ವಿಚಾರಕ್ಕೆ ಪೊಲೀಸರು ಕೈ ಹಾಕಬಾರದು- ಸಿ.ಎಂ ಬೊಮ್ಮಾಯಿ

ಕದನ ವಿರಾಮಕ್ಕೆ ಒಪ್ಪದ ತಾಲಿಬಾನಿಗಳು; ಪಂಜಶಿರ್​ ಗವರ್ನರ್​ ಕಚೇರಿ ಮೇಲೆ ಧ್ವಜಾರೋಹಣ

(Taliban Leaders are in the final stages of forming New government in Afghanistan)

Published On - 1:28 pm, Mon, 6 September 21