AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ukraine Plane Hijacked ಉಕ್ರೇನ್ ವಿಮಾನ ಕಾಬೂಲ್​​ನಿಂದ ಹೈಜಾಕ್?

ಕಾಬೂಲ್​​ನಿಂದ ಪ್ರಯಾಣಿಕರೊಂದಿಗೆ ಹಾರುತ್ತಿದ್ದ ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಕರೆದೊಯ್ಯಲಾಗಿದೆ ಎಂದು ಪತ್ರಕರ್ತ ವಜಾಹತ್ ಕಾಜ್ಮಿ ಟ್ವೀಟ್ ಮಾಡಿದ್ದಾರೆ.

Ukraine Plane Hijacked ಉಕ್ರೇನ್ ವಿಮಾನ ಕಾಬೂಲ್​​ನಿಂದ ಹೈಜಾಕ್?
ಸಾಂದರ್ಭಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 24, 2021 | 2:13 PM

Share

ಕಾಬೂಲ್: ಅಫ್ಘಾನಿಸ್ತಾನದಿಂದ ಭಾನುವಾರ ಜನರನ್ನು  ಸ್ಥಳಾಂತರಿಸುತ್ತಿದ್ದ ಉಕ್ರೇನಿಯನ್ ವಿಮಾನವನ್ನು ಸಶಸ್ತ್ರ ಅಪಹರಣಕಾರರು ಅಪಹರಿಸಿದ್ದಾರೆ. ಇದನ್ನು ಇರಾನ್‌ಗೆ ಹಾರಾಟ ನಡೆಸಿದ್ದಾರೆ ಎಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಮಂಗಳವಾರ ರಷ್ಯಾದ ಟಿಎಎಸ್ಎಸ್ (TASS)  ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.

ಕಾಬೂಲ್​​ನಿಂದ ಪ್ರಯಾಣಿಕರೊಂದಿಗೆ ಹಾರುತ್ತಿದ್ದ ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಕರೆದೊಯ್ಯಲಾಗಿದೆ ಎಂದು ಪತ್ರಕರ್ತ ವಜಾಹತ್ ಕಾಜ್ಮಿ ಟ್ವೀಟ್ ಮಾಡಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಭಾನುವಾರ, ನಮ್ಮ ವಿಮಾನವನ್ನು ಇತರ ಜನರು ಅಪಹರಿಸಿದರು. ಮಂಗಳವಾರ, ವಿಮಾನವು ಪ್ರಾಯೋಗಿಕವಾಗಿ ನಮ್ಮಿಂದ ಕದಿಯಲ್ಪಟ್ಟಿತು. ಇದು ಉಕ್ರೇನಿಯನ್ನರನ್ನು ಏರ್ ಲಿಫ್ಟಿಂಗ್ ಮಾಡುವ ಬದಲು ಅಪರಿಚಿತ ಪ್ರಯಾಣಿಕರ ಗುಂಪಿನೊಂದಿಗೆ ಇರಾನ್‌ಗೆ ಹಾರಿತು. ನಮ್ಮ ಮುಂದಿನ ಮೂರು ಸ್ಥಳಾಂತರಿಸುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಏಕೆಂದರೆ ನಮ್ಮ ಜನರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು

ಯೆವ್ಗೆನಿ ಯೆನಿನ್ ಪ್ರಕಾರ ಅಪಹರಣಕಾರರು ಶಸ್ತ್ರಸಜ್ಜಿತರಾಗಿದ್ದರು. ಆದಾಗ್ಯೂ, ಸಚಿವರು  ವಿಮಾನಕ್ಕೆ ಏನಾಯಿತು ಅಥವಾ ಉಕ್ರೇನ್ ಅದನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆಯೇ  ಅಥವಾ ಉಕ್ರೇನಿಯನ್ ನಾಗರಿಕರು ಕಾಬೂಲ್‌ನಿಂದ ಹೇಗೆ ಮರಳಿದರು ಎಂಬುದನ್ನು ಹೇಳಿಲ್ಲ. ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ನೇತೃತ್ವದ ಇಡೀ ರಾಜತಾಂತ್ರಿಕ ಸೇವೆಯು ಇಡೀ ವಾರ “ಕ್ರ್ಯಾಶ್ ಟೆಸ್ಟ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ಯೆನಿನ್ ಒತ್ತಿ ಹೇಳಿದರು.

ಭಾನುವಾರ, 31 ಉಕ್ರೇನಿಯನ್ನರು ಸೇರಿದಂತೆ 83 ಜನರೊಂದಿಗೆ ಮಿಲಿಟರಿ ಸಾರಿಗೆ ವಿಮಾನವು ಅಫ್ಘಾನಿಸ್ತಾನದಿಂದ ಕೀವ್‌ಗೆ ಬಂದಿತು. 12 ಉಕ್ರೇನಿಯನ್ ಸೇನಾ ಸಿಬ್ಬಂದಿ ಮನೆಗೆ ಮರಳಿದ್ದಾರೆ ಎಂದು ಅಧ್ಯಕ್ಷೀಯ ಕಚೇರಿ ವರದಿ ಮಾಡಿದೆ. ಆದರೆ ವಿದೇಶಿ ವರದಿಗಾರರು ಮತ್ತು ಸಹಾಯ ಕೋರಿದ ಸಾರ್ವಜನಿಕ ವ್ಯಕ್ತಿಗಳನ್ನು ಸಹ ಸ್ಥಳಾಂತರಿಸಲಾಗಿದೆ. ಸುಮಾರು 100 ಉಕ್ರೇನಿಯನ್ನರು ಇನ್ನೂ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಎಂದು ಕಚೇರಿಯು ತಿಳಿಸಿದೆ.

ಇದನ್ನೂ ಓದಿ: Panjshir: ತಾಲಿಬಾನಿಗಳಿರಲಿ, ವಿದೇಶಿಗರೇ ಬರಲಿ, ಪಂಜ್‌ಶೀರ್ ಪತರಗುಟ್ಟಿಲ್ಲ; ರಷ್ಯಾ ದಾಳಿಗೂ ತಲೆಬಾಗಿಲ್ಲ- ಆದರೆ ಮುಂದೆ ಹೇಳೋಕೆ ಆಗಲ್ಲ!

(Ukrainian airplane flying from Kabul with passengers hijacked All flight operations at Kabul airport suspended)

Published On - 1:50 pm, Tue, 24 August 21