ಸೇಡು ತೀರಿಸಿಕೊಂಡ ಅಮೆರಿಕಾ; ಐಸಿಎಸ್ ಉಗ್ರರ ಮೇಲೆ ಡ್ರೋನ್​ ಮೂಲಕ ಏರ್​​ಸ್ಟ್ರೈಕ್​ ದಾಳಿ, ಹತರಾದವರ ಸಂಖ್ಯೆ ಅಲಭ್ಯ

| Updated By: Skanda

Updated on: Aug 28, 2021 | 7:40 AM

ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಮೇಲೆ ಏರ್ ಸ್ಟ್ರೈಕ್ ನಡೆಸಿರುವ ಕುರಿತು ಮಾಹಿತಿ ಸಿಕ್ಕಿದ್ದು, ಆತ್ಮಾಹುತಿ ಬಾಂಬ್ ಸ್ಪೋಟ ನಡೆದ 36 ಗಂಟೆಗಳಲ್ಲಿ ಉಗ್ರರ ಮೇಲೆ ಪ್ರತೀಕಾರದ ದಾಳಿಯಾಗಿದೆ. ಮೊನ್ನೆ ಕಾಬೂಲ್ ಏರ್​ಪೋರ್ಟ್ ಮೇಲೆ ದಾಳಿ ನಡೆಸಿದ್ದ ಐಸಿಎಸ್ ಖೋರಾಸನ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಶಪಥ ಮಾಡಿದ್ದ ಅಮೆರಿಕಾ 36 ಗಂಟೆಗಳಲ್ಲಿ ದಾಳಿ ನಡೆಸಿ ಸೇಡು ತೀರಿಸಿಕೊಂಡಂತಾಗಿದೆ.

ಸೇಡು ತೀರಿಸಿಕೊಂಡ ಅಮೆರಿಕಾ; ಐಸಿಎಸ್ ಉಗ್ರರ ಮೇಲೆ ಡ್ರೋನ್​ ಮೂಲಕ ಏರ್​​ಸ್ಟ್ರೈಕ್​ ದಾಳಿ, ಹತರಾದವರ ಸಂಖ್ಯೆ ಅಲಭ್ಯ
ಪ್ರಾತಿನಿಧಿಕ ಚಿತ್ರ
Follow us on

ಅಫ್ಘಾನಿಸ್ತಾನದಲ್ಲಿ ಐಎಸ್ಐಎಸ್- ಖೋರಾಸನಾ ಸಂಘಟನೆ ಮೇಲೆ ಅಮೆರಿಕಾ ಡ್ರೋನ್​ ದಾಳಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೂರ್ವ ಅಫ್ಘಾನಿಸ್ತಾನದಲ್ಲಿ ಐಸಿಎಸ್ ಖೋರಾಸನ ಉಗ್ರರ ಮೇಲೆ ಅಮೆರಿಕಾ ಏರ್ ಸ್ಟ್ರೈಕ್ ನಡೆಸಿದ್ದು, ಅಮೆರಿಕಾದ ಸೆಂಟ್ರಲ್ ಕಮ್ಯಾಂಡ್ ಈ ಬಗ್ಗೆ ಮಾಹಿತಿ ನೀಡಿದೆ. ಸದರಿ ದಾಳಿಯಲ್ಲಿ ಉಗ್ರರನ್ನು ಕೊಂದಿದ್ದೇವೆ ಎಂದು ಅಮೆರಿಕಾ ಹೇಳಿಕೊಂಡಿದ್ದು, ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಮೇಲೆ ಏರ್ ಸ್ಟ್ರೈಕ್ ನಡೆಸಿರುವ ಕುರಿತು ಮಾಹಿತಿ ಸಿಕ್ಕಿದ್ದು, ಆತ್ಮಾಹುತಿ ಬಾಂಬ್ ಸ್ಪೋಟ ನಡೆದ 36 ಗಂಟೆಗಳಲ್ಲಿ ಉಗ್ರರ ಮೇಲೆ ಪ್ರತೀಕಾರದ ದಾಳಿಯಾಗಿದೆ. ಮೊನ್ನೆ ಕಾಬೂಲ್ ಏರ್​ಪೋರ್ಟ್ ಮೇಲೆ ದಾಳಿ ನಡೆಸಿದ್ದ ಐಸಿಎಸ್ ಖೋರಾಸನ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಶಪಥ ಮಾಡಿದ್ದ ಅಮೆರಿಕಾ 36 ಗಂಟೆಗಳಲ್ಲಿ ದಾಳಿ ನಡೆಸಿ ಸೇಡು ತೀರಿಸಿಕೊಂಡಂತಾಗಿದೆ.

ಇನ್ನೊಂದೆಡೆ, ಕಾಬೂಲ್ ಏರ್​ಪೋರ್ಟ್ ಬಳಿ ಬಿಗಿಭದ್ರತೆ ವಹಿಸಲಾಗಿದ್ದು, ವಿಮಾನ ನಿಲ್ದಾಣದ ಬಳಿ ಹೋಗಲು ಅವಕಾಶ ನೀಡಲಾಗುತ್ತಿಲ್ಲ. ಅಫ್ಘಾನಿಸ್ತಾನದ ಪಾಸ್​ಪೋರ್ಟ್ ಹೊಂದಿದವರಿಗೂ ಏರ್​ಪೋರ್ಟ್ ಬಳಿ ಬಿಡುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ. ಏರ್​ಪೋರ್ಟ್ ಸಮೀಪ ಹೋಗದಂತೆ ತಾಲಿಬಾನ್ ತಡೆಯೊಡ್ಡಿದ್ದು, ಕಾಬೂಲ್ ಏರ್​ಪೋರ್ಟ್ ಗೇಟ್ ಬಳಿ ಹೋಗದಂತೆ ಆಮೆರಿಕಾದ ನಾಗರಿಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಬೇರೆ ಬೇರೆ ದೇಶಗಳ ಗುಪ್ತಚರ ಇಲಾಖೆಗಳು ಏರ್​ಪೋರ್ಟ್ ಬಳಿ ದೊಡ್ಡ ಸ್ಪೋಟ ನಡೆಸಲು ಐಸಿಎಸ್ ಸಂಚು ಹೂಡಿದೆ ಎಂಬ ಮಾಹಿತಿ ನೀಡಿರುವ ಕಾರಣ ಈ ತೆರನಾದ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬೇರೆ ಬೇರೆ ದೇಶಗಳಿಗೆ ಸಂಭವನೀಯ ಸ್ಪೋಟದ ಬಗ್ಗೆ ಇಂಟಲಿಜೆನ್ಸ್ ಮಾಹಿತಿ ಲಭ್ಯವಾಗಿದ್ದು, ಮುಂದೆಯೂ ಐಸಿಎಸ್ ಸ್ಪೋಟ ನಡೆಸುವ ಬಗ್ಗೆ ಇಂಟಲಿಜೆನ್ಸ್ ವಿಭಾಗ ಎಚ್ಚರಿಕೆ ನೀಡಿದೆ.

ಸ್ಫೊಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ನಿನ್ನೆಯಷ್ಟೇ ಖಡಕ್​ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಅಮೆರಿಕ ವಿರುದ್ಧ ದಾಳಿ ಮಾಡಿದವರು ಎಚ್ಚರಿಕೆಯಿಂದ ಇರಿ. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ ಎಂದು ಹೇಳಿದ್ದರು.

ಉಗ್ರರ ಇಂತಹ ದಾಳಿಗಳಿಂದ ಅಮೆರಿಕ ಕಂಗೆಡುವುದಿಲ್ಲ. ಜನರನ್ನು ಸ್ಥಳಾಂತರ ಮಾಡುವುದನ್ನೂ ನಿಲ್ಲಿಸುವುದಿಲ್ಲ. ನೀವು ಏನೇ ಮಾಡಿದರೂ ನಾವು ಜನರನ್ನು ಸ್ಥಳಾಂತರ ಮಾಡಿಯೇ ತೀರುತ್ತೇವೆ. ಈಗಾಗಲೇ ಐಸಿಸ್-ಕೆ ವಿರುದ್ಧ ಕಾರ್ಯಾಚರಣೆಗೆ ಯೋಜನೆ ರೂಪಿಸಲು ಸೂಚಿಸಲಾಗಿದೆ. ನಾವು ಎಲ್ಲಿ ಹೊಡೆಯಬೇಕು, ಹೇಗೆ ಹೊಡೆಯಬೇಕು, ಎಷ್ಟೊತ್ತಿಗೆ ಹೊಡೆಯಬೇಕೋ ಅಷ್ಟೊತ್ತಿಗೆ ಹೊಡೆಯುತ್ತೇವೆ. ನಮ್ಮ ವಿರುದ್ಧ ಐಸಿಸ್​ ಉಗ್ರರು ಗೆಲುವು ಸಾಧಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:
ನೀವು ಎಲ್ಲೇ ಅವಿತಿದ್ದರೂ ಹೆಕ್ಕಿ ಹೆಕ್ಕಿ ಕೊಲ್ಲುತ್ತೇವೆ; ಅಮೆರಿಕ ಯೋಧರನ್ನು ಕೊಂದ ಉಗ್ರರಿಗೆ ಎಚ್ಚರಿಕೆ ನೀಡಿದ ಜೋ ಬೈಡನ್​ 

Taliban vs ISIS-K: ತಾಲಿಬಾನ್​​ನಿಂದ ಹೊರ ಬಂದವರೇ ಐಸಿಸ್​-ಕೆ ಸ್ಥಾಪಕ ಸದಸ್ಯರು; ಉಗ್ರರಿಗೆ ಉಗ್ರರೇ ಶತ್ರು

Published On - 7:33 am, Sat, 28 August 21