Taliban vs ISIS-K: ತಾಲಿಬಾನ್ನಿಂದ ಹೊರ ಬಂದವರೇ ಐಸಿಸ್-ಕೆ ಸ್ಥಾಪಕ ಸದಸ್ಯರು; ಉಗ್ರರಿಗೆ ಉಗ್ರರೇ ಶತ್ರು
ಐಸಿಸ್-ಕೆ ಸಂಘಟನೆಯ ಪೂರ್ಣ ಹೆಸರು ಇಸ್ಲಾಮಿಕ್ ಸ್ಟೇಟ್ ಖೋರಾಸನ್. ಇದು 2014 ರಲ್ಲಿ ರಚನೆಯಾಗಿದ್ದು, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಐಸಿಸ್ ಅಂಗಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ಗುಂಪನ್ನು ISIS-K ಅಥವಾ IS-K ಎಂದು ಕರೆಯುತ್ತಾರೆ.
ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲೀಗ ಮತ್ತೊಂದು ಉಗ್ರವಾದಿ ಗುಂಪು ಸಕ್ರಿಯವಾಗಿದ್ದು, ಕಾಬೂಲ್ನಲ್ಲಿ ನಡೆದ ಸರಣಿ ಸ್ಫೋಟದ ಹಿಂದೆ ತನ್ನದೇ ಕೈವಾಡ ಇದೆ ಎಂದು ಐಸಿಸ್-ಕೆ ಹೊಣೆ ಹೊತ್ತುಕೊಂಡಿದೆ. ಐಸಿಸ್-ಕೆ ಹಾಗೂ ತಾಲಿಬಾನ್ ಎರಡರ ನಡುವೆ ವೈರತ್ವವಿದ್ದು, ಅದೀಗ ಅಫ್ಘಾನಿಸ್ತಾನಕ್ಕೆ ಮತ್ತೊಂದು ಕಗ್ಗಂಟಾಗಿದೆ. ಅಸಲಿಗೆ ಐಸಿಸ್-ಕೆ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದೇಕೆ? ಅವೆರೆಡೂ ಗುಂಪುಗಳ ನಡುವಿನ ವ್ಯತ್ಯಾಸವೇನು? ಎಂಬುದರ ಬಗ್ಗೆ ಇಲ್ಲಿ ಸಂಕ್ಷಿಪ್ತ ಮಾಹಿತಿಯನ್ನು ಕಟ್ಟಿಕೊಡಲಾಗಿದೆ.
ಐಸಿಸ್-ಕೆ ಸಂಘಟನೆಯ ಪೂರ್ಣ ಹೆಸರು ಇಸ್ಲಾಮಿಕ್ ಸ್ಟೇಟ್ ಖೋರಾಸನ್. ಇದು 2014 ರಲ್ಲಿ ರಚನೆಯಾಗಿದ್ದು, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಐಸಿಸ್ ಅಂಗಸಂಸ್ಥೆಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಅಂದಹಾಗೆ ಖೋರಾಸನ್ ಎಂಬುದು ಒಂದು ಐತಿಹಾಸಿಕ ಪದವಾಗಿದ್ದು, ಈ ಗುಂಪನ್ನು ISIS-K ಅಥವಾ IS-K ಎಂದು ಕರೆಯುತ್ತಾರೆ. ತಾಲಿಬಾನ್ ತೊರೆದವರೇ ISIS-K ಸ್ಥಾಪಕ ಸದಸ್ಯರಾಗಿದ್ದು, ಅಫ್ಘಾನ್ ತಾಲಿಬಾನ್ ಮತ್ತು ಪಾಕಿಸ್ತಾನದ ತಾಲಿಬಾನ್ನ ಅಸಮಾಧಾನಿತ ಉಗ್ರರಿಂದ ISIS- K ಸ್ಥಾಪನೆಯಾಗಿದೆ.
ಐಸಿಸ್-ಕೆ ಸ್ಥಾಪನೆಗೂ ಮುನ್ನ ಐಸಿಸ್ ತನ್ನ ಪ್ರತಿನಿಧಿಗಳನ್ನು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ಕಳುಹಿಸಿತ್ತು. ಅಲ್ಲಿ ತಾಲಿಬಾನ್ ಬಗ್ಗೆ ಅಸಮಾಧಾನ ಹೊಂದಿರುವವರನ್ನು ಗುರುತಿಸುವ ಕೆಲಸ ನಡೆದಿತ್ತು. ಮೂಲಭೂತವಾಗಿ ಕೆಲವು ಅಸಮಾಧಾನ ಹೊಂದಿದ ತಾಲಿಬಾನಿಗಳ ಗುರುತು ಮಾಡಲಾಗಿತ್ತು. ಪಾಕಿಸ್ತಾನಿ ತಾಲಿಬಾನ್ ಮತ್ತು ಅಫ್ಘಾನ್ ತಾಲಿಬಾನ್ನ ಕೆಲ ಅಸಮಾಧಾನಿತರು ಐಸಿಸ್ ಪ್ರತಿನಿಧಿಗಳ ಸಂಪರ್ಕಕ್ಕೆ ಸಿಕ್ಕ ಬಳಿಕ ಅವರಿಂದಲೇ ಐಸಿಸ್-ಕೆ ಸ್ಥಾಪನೆ ಮಾಡಲಾಯಿತು. ISIS-K ಉಗ್ರರು ತಾಲಿಬಾನ್ ಜತೆಗೂ ಸಂಬಂಧ ಹೊಂದಿದ್ದರೂ ತಾಲಿಬಾನ್ ಮತ್ತು ಐಸಿಸ್- ಕೆ ಗುಂಪುಗಳ ನಡುವೆ ಸೈದ್ದಾಂತಿಕ ವೈರತ್ವ ಇದೆ. ಹೀಗಾಗಿ ಅವರೀಗ ತಾಲಿಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಇನ್ನಿತರ ರೀತಿಯಲ್ಲಿ ಆತಂಕ ಸೃಷ್ಟಿಸಲು ನೋಡುತ್ತಿದ್ದಾರೆ.
(ISIS K and Taliban what is the difference why they are fighting each other here is the interesting points)
ಇದನ್ನೂ ಓದಿ: Kabul Airport Blast: ಅಫ್ಘಾನಿಸ್ತಾನದಲ್ಲಿ ಸರಣಿ ಸ್ಫೋಟ: ದುಷ್ಕೃತ್ಯದ ಹೊಣೆ ಹೊತ್ತ ಐಸಿಸ್-ಕೆ ಸಂಘಟನೆ
Published On - 9:42 am, Fri, 27 August 21