ಐಸಿಸ್​ ಉಗ್ರರ ದಾಳಿ ಬೆದರಿಕೆ ಇರುವುದನ್ನು ಸ್ಪಷ್ಟಪಡಿಸಿದ ಜೋ ಬೈಡನ್​; ಸಾವು-ನೋವಿಲ್ಲದೆ ಸ್ಥಳಾಂತರ ಸಾಧ್ಯವಿಲ್ಲ ಎಂದರೇನು ಅರ್ಥ?

Kabul Airport: ಅಫ್ಘಾನಿಸ್ತಾನದ ಕಾಬೂಲ್​ ಏರ್​ಪೋರ್ಟ್​​ನಲ್ಲಿ ಪ್ರತಿನಿತ್ಯ ಅನೇಕ ಜನ ಸೇರುತ್ತಾರೆ. ಅದೆಷ್ಟೊ ಮಂದಿ ಪ್ರಾಣ ಹಾನಿಯಾಗಿದೆ. ಗಾಯಗೊಂಡವರಿದ್ದಾರೆ

ಐಸಿಸ್​ ಉಗ್ರರ ದಾಳಿ ಬೆದರಿಕೆ ಇರುವುದನ್ನು ಸ್ಪಷ್ಟಪಡಿಸಿದ ಜೋ ಬೈಡನ್​; ಸಾವು-ನೋವಿಲ್ಲದೆ ಸ್ಥಳಾಂತರ ಸಾಧ್ಯವಿಲ್ಲ ಎಂದರೇನು ಅರ್ಥ?
ಜೊ ಬೈಡನ್​
Follow us
TV9 Web
| Updated By: Digi Tech Desk

Updated on:Aug 23, 2021 | 6:22 PM

ವಾಷಿಂಗ್ಟನ್​: ಅಫ್ಘಾನಿಸ್ತಾನದಿಂದ ಅಮೆರಿಕನ್ನರನ್ನು ಸ್ಥಳಾಂತರ ಮಾಡುವ ಕಾರ್ಯ ಆಗಸ್ಟ್​ 31ರೊಳಗೆ ಮುಕ್ತಾಯಗೊಳ್ಳಲಿದೆ ಎಬ ಆಶಯವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ. ನಿನ್ನೆ ವೈಟ್​ಹೌಸ್​​ನಲ್ಲಿ ಮಾತನಾಡಿದ ಅವರು, ಐಎಸ್​ (ಇಸ್ಲಾಮಿಕ್​ ಸ್ಟೇಟ್​)  ಉಗ್ರರ ಬೆದರಿಕೆಯ ಬಗ್ಗೆ ಉಲ್ಲೇಖಿಸಿದ್ದಾರೆ ಹಾಗೂ ಸದ್ಯ ಯುದ್ಧ ಸನ್ನಿವೇಶವಿರುವ ಅಫ್ಘಾನಿಸ್ತಾನದಲ್ಲಿ ಇನ್ನೂ ಹಲವು ರೀತಿಯ ಅಪಾಯಗಳು ಎದುರಾಗಬಹುದು ಎಂದು ಹೇಳಿದ್ದಾರೆ. ಭಯೋತ್ಪಾದಕರು ಈ ಪರಿಸ್ಥಿತಿಯನ್ನು ಬಳಸಿಕೊಂಡು, ಮುಗ್ಧ ಅಫ್ಘಾನರು ಹಾಗೂ ಯುಎಸ್​ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬಹುದು ಎಂಬುದು ನನಗೆ ಗೊತ್ತಿದೆ. ಐಸಿಸ್​ ಉಗ್ರರು ಅಥವಾ ಇನ್ಯಾವುದೇ ಭಯೋತ್ಪಾದಕರ ಬೆದರಿಕೆ ಬಗ್ಗೆ ನಾವು ಸದಾ ಮುನ್ನೆಚ್ಚರಿಕೆ ವಹಿಸಿ, ಜಾಗರೂಕರಾಗಿದ್ದೇವೆ.  ಇದೆಲ್ಲದರ ಮಧ್ಯೆ ಆಗಸ್ಟ್​ 31ರೊಳಗೆ ಅಫ್ಘಾನ್​​ನಲ್ಲಿರುವ ಅಮೆರಿಕನ್ನರ ಸ್ಥಳಾಂತರ ಕಾರ್ಯ ಮುಗಿಯುವ ಭರವಸೆ ಇದೆ ಎಂದು ತಿಳಿಸಿದ್ದಾರೆ.  

ಸಾವು-ನೋವಿನ ಹೊರತಾಗಿ ಸ್ಥಳಾಂತರ ಸಾಧ್ಯವಿಲ್ಲ ಅಫ್ಘಾನಿಸ್ತಾನದ ಕಾಬೂಲ್​ ಏರ್​ಪೋರ್ಟ್​​ನಲ್ಲಿ ಪ್ರತಿನಿತ್ಯ ಅನೇಕ ಜನ ಸೇರುತ್ತಾರೆ. ಅದೆಷ್ಟೊ ಮಂದಿ ಪ್ರಾಣ ಹಾನಿಯಾಗಿದೆ. ಗಾಯಗೊಂಡವರಿದ್ದಾರೆ..ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋ ಬೈಡನ್​ ,  ಪ್ರತಿನಿತ್ಯ ಕಾಬೂಲ್​ ಏರ್​ಪೋರ್ಟ್​ನ ದೃಶ್ಯವನ್ನು ನಾವೆಲ್ಲ ನೋಡುತ್ತಿದ್ದೇವೆ. ಅಲ್ಲಿನ ಸಾವು-ನೋವು, ನೂಕುನುಗ್ಗಲು ನೋಡಿ ಮನಸಿಗೆ ತುಂಬ ನೋವಾಗುತ್ತದೆ. ಆದರೆ ಬೇರೆ ದಾರಿಯಿಲ್ಲ. ಈ ಸಾವು-ನೋವಿಲ್ಲದೆ, ನಾಜೂಕಾಗಿ ಜನರ ಸ್ಥಳಾಂತರ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಎಷ್ಟೇ ಕಷ್ಟವಾದರೂ ಅಲ್ಲಿಂದ ಹೊರಡಬೇಕು ಎಂದೇ ಜನರು ಭಾವಿಸುತ್ತಿದ್ದಾರೆ. ಇವತ್ತು ಹೋಗದಿದ್ದರೆ, ಇನ್ಯಾವತ್ತೂ ಸಾಧ್ಯವಿಲ್ಲ ಎಂಬ ಆತುರದಲ್ಲಿ ಜನರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮುನ್ನುಗ್ಗುತ್ತಿದ್ದಾರೆ ಎಂದು ಹೇಳಿದರು.

ಅಮೆರಿಕವನ್ನು ಟೀಕಿಸಿದ್ದ ತಾಲಿಬಾನ್​ ಪ್ರತಿನಿತ್ಯ ಕಾಬೂಲ್​ ಏರ್​ಪೋರ್ಟ್​​ನಲ್ಲಿ ಪ್ರಯಾಣಿಕರ ನೂಕುನುಗ್ಗಲು, ಪ್ರಾಣಹಾನಿ ಆಗುತ್ತಿರುವ ಬಗ್ಗೆ ತಾಲಿಬಾನಿಗಳು ಅಮೆರಿಕವನ್ನು ಟೀಕಿಸಿದ್ದರು. ಅಮೆರಿಕಕ್ಕೆ ಸೂಪರ್​ ಪವರ್​ ಇದೆ..ಅತ್ಯಾಧುನಿಕವಾದ ವ್ಯವಸ್ಥೆಯೂ ಇದೆ. ಆದರೆ ಕಾಬೂಲ್​ ಏರ್​​ಪೋರ್ಟ್​ನಲ್ಲಿ ಕಾನೂನು ಸುವ್ಯವಸ್ಥೆ ಆದೇಶ ತರಲು ವಿಫಲವಾಗಿದೆ. ಇಡೀ ಅಫ್ಘಾನಿಸ್ತಾನದಲ್ಲಿ ಕಾಬೂಲ್​ ಏರ್​​ಪೋರ್ಟ್​ ಹೊರತುಪಡಿಸಿ, ಉಳಿದೆಲ್ಲ ಪ್ರದೇಶಗಳಲ್ಲೂ ಶಾಂತಿ ಇದೆ  ಎಂದು ತಾಲಿಬಾನ್​ನ ಅಮೀರ್ ಖಾನ್​ ಎಂಬಾತ ಹೇಳಿಕೆ ನೀಡಿದ್ದ.

ಇದನ್ನೂ ಓದಿ: ತ್ರಿಷಾ ನಂತರ ಮತ್ತೋರ್ವ ಹೀರೋಯಿನ್ ಖಾಸಗಿ ವಿಡಿಯೋ ಲೀಕ್​​; ನರಕದಲ್ಲಿ ನಿಮಗೆ ವಿಶೇಷ ವ್ಯವಸ್ಥೆ ಇದೆ ಎಂದ ​ನಟಿ

ಮಕ್ಕಳನ್ನು ಸ್ವಾಗತಿಸಲು ಸಜ್ಜಾದ ಶಾಲೆಗಳು; ಕೊರೊನಾ ಭೀತಿಯ ನಡುವೆಯೂ ಕಲಿಕೆಯ ಸಂಭ್ರಮ ಶುರು

(Afghanistan evacuation will conclude by August 31 says US President Joe Biden)

Published On - 9:44 am, Mon, 23 August 21

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ