ಅಸ್ಥಿರತೆ ಸಮಸ್ಯೆಯಿಂದ ಬಳಲಿ ಬೆಂಡಾಗಿರುವ ಅಫ್ಘಾನಿಸ್ತಾನದಲ್ಲಿದೆ ಅಪಾರ ಖನಿಜ ಸಂಪತ್ತು! ಮುಂದೇನಾಗುತ್ತದೆ?
ಅಫ್ಘನಿಸ್ತಾನ ರಾಷ್ಟ್ರ ಪದೇ ಪದೇ ವಿದೇಶಿಯರ ದಾಳಿಗೆ ಒಳಗಾಗುತ್ತಿದೆ. ಸೋವಿಯತ್ ರಷ್ಯಾ, ಆಮೆರಿಕಾದ ದಾಳಿಗೆ ಒಳಗಾಗಿದೆ. ಇದಕ್ಕೂ ಮೊದಲು ಅಲೆಕ್ಸಾಂಡರ್ ಸೇರಿದಂತೆ ಬೇರೆ ಬೇರೆ ವಿದೇಶಿಯರ ದಾಳಿಗೂ ಒಳಗಾಗಿದೆ. ಈಗ ತಾಲಿಬಾನ್ ಉಗ್ರರ ವಶವಾಗಿದೆ. ಈ ದಾಳಿಗಳಿಗೆಲ್ಲಾ ಅಫ್ಘನಿಸ್ತಾನದ ಹೇರಳ ಖನಿಜ ಸಂಪತ್ತು ಕೂಡ ಕಾರಣ. ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟು ಕೂಡ ಕೆಲವರು ದಾಳಿ ನಡೆಸಿದ್ದಾರೆ. ಖನಿಜ ಸಂಪತ್ತಿನ ಕಾರಣಕ್ಕಾಗಿ ಬೇರೆಯವರ ದಾಳಿಗಳಲು ವಿಫಲವಾಗುವಂತೆಯೇ ಕೆಲ ರಾಷ್ಟ್ರಗಳು ಮಾಡಿವೆ. ಅಫ್ಘನಿಸ್ತಾನದ ಖನಿಜ ಸಂಪತ್ತಿನ ವಿವರ ಕೇಳಿದರೇ […]
ಅಫ್ಘನಿಸ್ತಾನ ರಾಷ್ಟ್ರ ಪದೇ ಪದೇ ವಿದೇಶಿಯರ ದಾಳಿಗೆ ಒಳಗಾಗುತ್ತಿದೆ. ಸೋವಿಯತ್ ರಷ್ಯಾ, ಆಮೆರಿಕಾದ ದಾಳಿಗೆ ಒಳಗಾಗಿದೆ. ಇದಕ್ಕೂ ಮೊದಲು ಅಲೆಕ್ಸಾಂಡರ್ ಸೇರಿದಂತೆ ಬೇರೆ ಬೇರೆ ವಿದೇಶಿಯರ ದಾಳಿಗೂ ಒಳಗಾಗಿದೆ. ಈಗ ತಾಲಿಬಾನ್ ಉಗ್ರರ ವಶವಾಗಿದೆ. ಈ ದಾಳಿಗಳಿಗೆಲ್ಲಾ ಅಫ್ಘನಿಸ್ತಾನದ ಹೇರಳ ಖನಿಜ ಸಂಪತ್ತು ಕೂಡ ಕಾರಣ. ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟು ಕೂಡ ಕೆಲವರು ದಾಳಿ ನಡೆಸಿದ್ದಾರೆ. ಖನಿಜ ಸಂಪತ್ತಿನ ಕಾರಣಕ್ಕಾಗಿ ಬೇರೆಯವರ ದಾಳಿಗಳಲು ವಿಫಲವಾಗುವಂತೆಯೇ ಕೆಲ ರಾಷ್ಟ್ರಗಳು ಮಾಡಿವೆ. ಅಫ್ಘನಿಸ್ತಾನದ ಖನಿಜ ಸಂಪತ್ತಿನ ವಿವರ ಕೇಳಿದರೇ ನೀವು ನಿಜಕ್ಕೂ ಬೆಚ್ಚಿಬೀಳುತ್ತೀರಾ.
ಅಫ್ಘನಿಸ್ತಾನದಲ್ಲಿ 1 ರಿಂದ 3 ಟ್ರಿಲಿಯನ್ ಡಾಲರ್ ಖನಿಜ ಸಂಪತ್ತು!
ಅಫ್ಘನಿಸ್ತಾನ ರಾಷ್ಟ್ರ ವಿಶ್ವದ ಬಡ ರಾಷ್ಟ್ರಗಳಲ್ಲಿ ಒಂದು. ವಿಶ್ವದ ಪ್ರಮುಖ ರಾಷ್ಟ್ರಗಳು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಣವನ್ನು ಸಾಲವಾಗಿ ಪಡೆದೇ ದೇಶವನ್ನು ಮುನ್ನೆಡೆಸಲಾಗುತ್ತಿತ್ತು. ಆದರೇ, ವಾಸ್ತವವಾಗಿ ಖನಿಜ ಸಂಪತ್ತಿನಲ್ಲಿ ಅಫ್ಘನಿಸ್ತಾನವು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ಅಫ್ಘನಿಸ್ತಾನದಲ್ಲಿರುವ ಖನಿಜ ಸಂಪತ್ತಿನ ಬಗ್ಗೆ ಆಮೆರಿಕಾದ ಜಿಯೋಲಾಜಿಕಲ್ ಸರ್ವೇ ಇಲಾಖೆಯು 2007ರಲ್ಲಿ ಸರ್ವೇ ನಡೆಸಿ ವರದಿ ನೀಡಿದೆ.
ಅಫ್ಘನಿಸ್ತಾನದಲ್ಲಿ 1 ರಿಂದ 3 ಟ್ರಿಲಿಯನ್ ಡಾಲರ್ ಖನಿಜ ಸಂಪತ್ತು ಇದೆ ಎಂದು ವರದಿ ನೀಡಿದೆ. 1ಟ್ರಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, ಈಗ 74 ಲಕ್ಷ ಕೋಟಿ ರೂಪಾಯಿ. ಅಫ್ಘನಿಸ್ತಾನದ ಗಣಿ ಇಲಾಖೆಯು ಕೂಡ ಆಗ್ಗಾಗ್ಗೆ ಅಫ್ಘನಿಸ್ತಾನದ ಖನಿಜ ಸಂಪತ್ತಿನ ಬಗ್ಗೆ ಸರ್ವೇ ನಡೆಸಿದೆ. ಹಾಗಾದರೇ, ಅಫ್ಘನಿಸ್ತಾನದಲ್ಲಿ ಯಾವ್ಯಾವ ಖನಿಜ ಸಂಪತ್ತು ಇದೆ, ಅವುಗಳ ಬೆಲೆ ಎಷ್ಟು ಎನ್ನುವುದನ್ನು ಈಗ ವಿವರ ಇಲ್ಲಿದೆ. ಅಫ್ಘನಿಸ್ತಾನದಲ್ಲಿ 420 ಬಿಲಿಯನ್ ಡಾಲರ್ ಮೌಲ್ಯದ ಆಯಸ್ಕಾಂತ ಇದೆ. 1 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, ಈಗಿನ ಮೌಲ್ಯದಲ್ಲಿ 7,400 ಕೋಟಿ ರೂಪಾಯಿ.
ಅಫ್ಘನಿಸ್ತಾನದಲ್ಲಿ 2,600 ಕೆಜಿ ಚಿನ್ನದ ಸಂಪತ್ತು ಇದೆ. ಇದರ ಮೌಲ್ಯವೇ 170 ಮಿಲಿಯನ್ ಡಾಲರ್ ಆಗಬಹುದು. 50 ಬಿಲಿಯನ್ ಡಾಲರ್ ಮೌಲ್ಯದ ಕೋಬಾಲ್ಟ್ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಕೋಬಾಲ್ಟ್ ಮೌಲ್ಯವೇ 3.7 ಲಕ್ಷ ಕೋಟಿ ರೂಪಾಯಿ . ಇನ್ನೂ ಅಫ್ಘನಿಸ್ತಾನದಲ್ಲಿ 60 ಮಿಲಿಯನ್ ಟನ್ ತಾಮ್ರ ಇದೆ. 350 ಬಿಲಿಯನ್ ಡಾಲರ್ ಮೌಲ್ಯದ 2.2 ಬಿಲಿಯನ್ ಟನ್ ಕಬ್ಬಿಣದ ಅದಿರು ಇದೆ. ಇದರಿಂದ ಕಬ್ಬಿಣ, ಸ್ಟೀಲ್ ತಯಾರಿಕೆ ಮಾಡಲಾಗುತ್ತೆ. 180 ಕೋಟಿ ಬ್ಯಾರೆಲ್ ಕಚ್ಚಾ ತೈಲ ಕೂಡ ಇದೆ. ಇದರ ಬೆಲೆಯೇ 107 ಬಿಲಿಯನ್ ಡಾಲರ್. ಇನ್ನು 16 ಟ್ರಿಲಿಯನ್ ಕ್ಯೂಬಿಕ್ ಫೀಟ್ ನ್ಯಾಚುರಲ್ ಗ್ಯಾಸ್ ಇದೆ. 500 ಬಿಲಿಯನ್ ಬ್ಯಾರೆಲ್ ನ್ಯಾಚುರಲ್ ಗ್ಯಾಸ್ ಲಿಕ್ವಿಡ್ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅಪಾರ ಪ್ರಮಾಣದ ಲಿಥಿಯಂ ಖನಿಜ ಇದೆ.
ಅಫ್ಘನಿಸ್ತಾನವನ್ನು ಲಿಥಿಯಂನ ಸೌದಿ ಅರೇಬಿಯಾ ಎಂದು ಕರೆಯುತ್ತಾರೆ. ಸೌದಿ ಅರೇಬಿಯಾದಲ್ಲಿ ಕಚ್ಚಾ ತೈಲ ಇರುವಷ್ಟು ಅಫ್ಘನಿಸ್ತಾನದಲ್ಲಿ ಲಿಥಿಯಂ ಇದೆ. ಲಿಥಿಯಂ ಅನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಬಳಕೆ ಮಾಡಲಾಗುತ್ತೆ. ಲಿಥಿಯಂ ಸಂಪನ್ಮೂಲವೇ 1 ಟ್ರಿಲಿಯನ್ ಡಾಲರ್ ಆಗುವ ಅಂದಾಜಿದೆ. 1 ಟ್ರಿಲಿಯನ್ ಡಾಲರ್ ಅಂದರೇ, ಈಗಿನ ಭಾರತದ ರೂಪಾಯಿ ಲೆಕ್ಕದಲ್ಲಿ 74 ಲಕ್ಷ ಕೋಟಿ ರೂಪಾಯಿ. ಅಫ್ಘನಿಸ್ತಾನದ ಖನಿಜ ಸಂಪತ್ತಿನ ಮೇಲೆ ಈಗ ಚೀನಾ, ಪಾಕಿಸ್ತಾನದ ಕಣ್ಣು ಬಿದ್ದಿದೆ. ಭಾರತಕ್ಕೂ ಲಿಥಿಯಂ ಖನಿಜ ಬೇಕು. ಭಾರತಕ್ಕೆ ಲಿಥಿಯಂ ಸಂಪನ್ಮೂಲ ಸಿಕ್ಕರೇ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಸ್ಪಲ್ಪ ಕಡಿಮೆಯಾಗಬಹುದು. ಲಿಥಿಯಂ ಸಂಪನ್ಮೂಲದ ಕೊರತೆಯಿಂದ ಈಗ ಎಲೆಕ್ಟ್ರಿಕ್ ವಾಹನಗಳ ಬೆಲೆ ಏರಿಕೆಯಾಗಿದೆ.
ಚೀನಾ, ಆಮೆರಿಕಾದಂಥ ದೇಶಗಳಿಗೂ ಲಿಥಿಯಂ ಸಂಪನ್ಮೂಲ ಬೇಕು. ಈಗ ತಮ್ಮ ವಶವಾಗಿರುವ ಈ ಎಲ್ಲ ಖನಿಜ ಸಂಪನ್ಮೂಲವನ್ನು ತಾಲಿಬಾನ್ ಹೇಗೆ ಬಳಸಿಕೊಳ್ಳುತ್ತೆ ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಚೀನಾ, ಪಾಕಿಸ್ತಾನ ತಾಲಿಬಾನ್ ಉಗ್ರರಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಈ ಎರಡೂ ದೇಶಗಳು ಅಫ್ಘನಿಸ್ತಾನದ ಖನಿಜ ಸಂಪತ್ತುನ್ನು ದೋಚುವ ಸಾಧ್ಯತೆಯೂ ಇದೆ. ಅಫ್ಘನಿಸ್ತಾನದ ಬೆಟ್ಟಗುಡ್ಡಗಳೇ ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುವ ಖನಿಜ ಸಂಪತ್ತುನ್ನು ತಮ್ಮ ಒಡಲಲ್ಲಿ ಹುದುಗಿಸಿಟ್ಟುಕೊಂಡಿವೆ.
ಆದರೆ, ಈ ಅಪಾರ ಪ್ರಮಾಣದ ಖನಿಜ ಸಂಪತ್ತುನ್ನು ಹೊರತೆಗೆದು ಇದುವರೆಗೂ ಬಳಸಲು ಅಫ್ಘನಿಸ್ತಾನಕ್ಕೆ ಸಾಧ್ಯವಾಗಿಲ್ಲ. ಬೇರೆ ದೇಶಗಳ ದಾಳಿ, ತಾಲಿಬಾನ್ ಆಳ್ವಿಕೆ, ಪ್ರಜಾಪ್ರಭುತ್ವ ಆಳ್ವಿಕೆಯಲ್ಲೂ ಭದ್ರತೆ, ಸ್ಥಿರತೆಯ ಸಮಸ್ಯೆಯಿಂದ ಖನಿಜ ಸಂಪತ್ತುನ್ನು ಭೂಮಿಯಿಂದ ಹೊರತೆಗೆಯಲು ಸಾಧ್ಯವಾಗಿಲ್ಲ. ಈಗ ಈ ಅಪಾರ ಪ್ರಮಾಣದ ಖನಿಜ ಸಂಪತ್ತು ನಿಜಕ್ಕೂ ಅಫ್ಘನಿಸ್ತಾನದ ಅಭಿವೃದ್ದಿ, ಜನರ ಏಳಿಗೆಗೆ ಬಳಕೆಯಾಗುತ್ತೋ ಇಲ್ಲವೇ ಚೀನಾ, ಪಾಕಿಸ್ತಾನದಂಥ ರಾಷ್ಟ್ರಗಳು ಈ ಖನಿಜ ಸಂಪತ್ತುನ್ನು ದೋಚುತ್ತವೋ ಗೊತ್ತಿಲ್ಲ.
ಅಫ್ಘಾನಿಸ್ತಾನಕ್ಕೆ ದುಡ್ಡು ಕೊಡಲು ಐಎಂಎಫ್ ನಕಾರ, ರಿಸರ್ವ್ ಬ್ಯಾಂಕ್ ಹಣ ಅಮೆರಿಕಾ ಪಾಲು; ತಾಲಿಬಾನಿಗಳ ಆದಾಯ ಏನು? (afghanistan has 2 trillion dollar minerals what next)
Published On - 11:25 am, Mon, 23 August 21