IPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ; ಬಿಸಿಸಿಐ ನೀಡಿದ ಸ್ಪಷ್ಟನೆ ಏನು?
Rajasthan Royals: ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2025ರಲ್ಲಿ ಸತತ ಸೋಲುಗಳನ್ನು ಅನುಭವಿಸುತ್ತಿದೆ. ಅದರಲ್ಲೂ ರಾಜಸ್ಥಾನ್ ತಂಡದ ಇತ್ತೀಚೆಗಿನ ಎರಡು ಪಂದ್ಯಗಳ ಸೋಲುಗಳು ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಕಾರಣವಾಗಿವೆ. ಬಿಸಿಸಿಐ ಈ ಆರೋಪಗಳನ್ನು ತಳ್ಳಿಹಾಕಿದ್ದರೂ, ರಾಜಸ್ಥಾನ್ ತಂಡದ ಕಳಪೆ ಪ್ರದರ್ಶನ ಮತ್ತು ಸೋಲುಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹುಟ್ಟುಹಾಕಿವೆ.

2025 ರ ಐಪಿಎಲ್ನಲ್ಲಿ (IPL 2025) ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಇದೀಗ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿದೆ. ಅದರಲ್ಲೂ ರಾಜಸ್ಥಾನ್ ತಂಡದ ಕಳೆದೆರಡು ಪಂದ್ಯಗಳ ಸೋಲು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ವಿಕೆಟ್ಗಳಿದ್ದರಲೂ ಕಡಿಮೆ ಟಾರ್ಗೆಟ್ ಇದ್ದರೂ, ರಾಜಸ್ಥಾನ್ ಸೋತಿರುವುದು ಮ್ಯಾಚ್ ಫಿಕ್ಸಿಂಗ್ (Match-Fixing) ಆರೋಪಕ್ಕೆ ದಾರಿ ಮಾಡಿಕೊಟ್ಟಿದೆ. ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ ಪಂದ್ಯದಲ್ಲಿ ಸೋತಿದ್ದ ರಾಜಸ್ಥಾನ್, ಲಕ್ನೋ ಸೂಪರ್‌ಜೈಂಟ್ಸ್ (LSG) ವಿರುದ್ಧ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು. ಅದರಲ್ಲೂ ಲಕ್ನೋ ವಿರುದ್ಧದ ಸೋಲಿನ ನಂತರ, ರಾಜಸ್ಥಾನ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ವಿರುದ್ಧ 2 ರನ್‌ಗಳಿಂದ ಸೋತ ಪಂದ್ಯ ಫಿಕ್ಸಿಂಗ್ ಆಗಿದೆ ಎಂದು ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ ಅಡ್-ಹಾಕ್ ಕಮಿಟಿ ಸಂಚಾಲಕ ಜೈದೀಪ್ ಬಿಹಾನಿ ಆರೋಪಿಸಿದ್ದಾರೆ.
ಬಿಸಿಸಿಐ ಹೇಳಿದ್ದೇನು?
ಇದೀಗ ಬಿಸಿಸಿಐ ಈ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಮ್ಯಾಚ್ ಫಿಕ್ಸಿಂಗ್ ಆರೋಪಗಳು ಅಸಂಬದ್ಧ ಎಂದಿದೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಮ್ಯಾಚ್ ಫಿಕ್ಸಿಂಗ್ ಎಂಬುದೇ ಇಲ್ಲ. ಆರ್‌ಸಿಎಯಲ್ಲಿ ಶೀಘ್ರದಲ್ಲೇ ಚುನಾವಣೆಗಳು ನಡೆಯಲಿದ್ದು, ಎಲ್ಲರ ಗಮನ ಸೆಳೆಯಲು ಇಂತಹ ನಕಲಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ಪ್ರತಿ ಪಂದ್ಯದ ಮೇಲೆ ನಿರಂತರವಾಗಿ ನಿಗಾ ಇಡುತ್ತದೆ. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದಿದ್ದಾರೆ.
IPL 2025: ಇದುವರೆಗೆ 111 ಕ್ಯಾಚ್ ಡ್ರಾಪ್; ಕ್ಯಾಚ್ ಕೈಚೆಲ್ಲುವುದರಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?
ರಾಜಸ್ಥಾನ್ ರಾಯಲ್ಸ್ ಕಳಪೆ ಪ್ರದರ್ಶನ
ಐಪಿಎಲ್ 2025 ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಒಂದು ದುಃಸ್ವಪ್ನಕ್ಕಿಂತ ಕಡಿಮೆಯೇನಲ್ಲ. ಈ ತಂಡವು ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಅದರಲ್ಲಿ ಎರಡು ಪಂದ್ಯಗಳನ್ನು ಗೆಲುವಿನ ಅಂಚಿನಲ್ಲಿ ಸೋತಿದೆ. ಚೆನ್ನೈ ಮತ್ತು ಪಂಜಾಬ್ ತಂಡಗಳನ್ನು ಸೋಲಿಸುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದ ರಾಜಸ್ಥಾನ್, ಆ ನಂತರ ಸತತ ಮೂರು ಪಂದ್ಯಗಳಲ್ಲಿ ಸೋತಿದೆ. ಮೊದಲು ಆರ್‌ಸಿಬಿ ವಿರುದ್ಧ 9 ವಿಕೆಟ್‌ಗಳಿಂದ ಸೋತಿದ್ದ ರಾಜಸ್ಥಾನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿತ್ತು. ಇದಾದ ನಂತರ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ಕೇವಲ 9 ರನ್ ಬಾರಿಸಲು ಸಾಧ್ಯವಾಗದೆ 2 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ