IPL 2025: ಇದುವರೆಗೆ 111 ಕ್ಯಾಚ್ ಡ್ರಾಪ್; ಕ್ಯಾಚ್ ಕೈಚೆಲ್ಲುವುದರಲ್ಲಿ ಯಾವ ತಂಡಕ್ಕೆ ಯಾವ ಸ್ಥಾನ?
IPL 2025 Catch Drop Analysis: ಐಪಿಎಲ್ 2025ರಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದು ಹೆಚ್ಚಾಗಿದೆ. 40 ಪಂದ್ಯಗಳಲ್ಲಿ 111 ಕ್ಯಾಚ್‌ಗಳು ಕೈಚೆಲ್ಲಲ್ಪಟ್ಟಿವೆ. ಚೆನ್ನೈ ಸೂಪರ್ ಕಿಂಗ್ಸ್ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡವಾಗಿದೆ, ಕೇವಲ 64.3% ಕ್ಯಾಚ್‌ಗಳನ್ನು ಮಾತ್ರ ಹಿಡಿದಿದೆ. ದೆಹಲಿ ಮತ್ತು ಗುಜರಾತ್ ತಂಡಗಳು ಕೂಡ ಕಳಪೆ ಕ್ಯಾಚಿಂಗ್ ದರವನ್ನು ಹೊಂದಿವೆ.

ಕ್ರಿಕೆಟ್‌ಲ್ಲಿ ಪಂದ್ಯವೊಂದರಲ್ಲಿ ಕ್ಯಾಚ್ ಕೈಚೆಲ್ಲುವುದು ಪಂದ್ಯವನ್ನು ಕಳೆದುಕೊಳ್ಳುವುದಕ್ಕೆ ಸಮ. ಕ್ಯಾಚ್ ಡ್ರಾಪ್ನಿಂದ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡಿರುವ ಅದೇಷ್ಟೋ ಆಟಗಾರರು ಪಂದ್ಯದ ಫಲಿತಾಂಶವನ್ನೇ ಬದಲಿಸಿದ್ದಾರೆ. ಈ ರೀತಿಯ ಕ್ಯಾಚ್ ಡ್ರಾಪ್ಗಳು ಈ ಬಾರಿಯ ಐಪಿಎಲ್ನಲ್ಲಿ (IPL 2025) ಹೆಚ್ಚಾಗಿ ಕಂಡುಬರುತ್ತಿವೆ. ಐಪಿಎಲ್ 2025 ರಲ್ಲಿ, ಎಲ್ಲಾ ತಂಡಗಳು ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟಿವೆ. ಐಪಿಎಲ್ 2025 ರಲ್ಲಿ ಇದುವರೆಗೆ ನಡೆದಿರುವ 40 ಪಂದ್ಯಗಳಲ್ಲಿ ಎಷ್ಟು ಕ್ಯಾಚ್‌ಗಳನ್ನು ಬಿಡಲಾಗಿದೆ ಮತ್ತು ಕ್ಯಾಚ್‌ಗಳನ್ನು ಬಿಡುವುದರಲ್ಲಿ ಯಾವ ತಂಡ ನಂಬರ್ 1 ಆಗಿದೆ ಎಂಬುದು ನೋಡೋಣ.
ಕ್ಯಾಚ್‌ಗಳನ್ನು ಬಿಡುವುದು ಫ್ಯಾಷನ್ ಆಗಿದೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಸೀಸನ್‌ನಲ್ಲಿ ಕ್ಯಾಚ್‌ಗಳನ್ನು ಬಿಡುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇಲ್ಲಿ ಎಲ್ಲಾ 10 ತಂಡಗಳು ಒಟ್ಟಾಗಿ ಇಲ್ಲಿಯವರೆಗೆ 111 ಕ್ಯಾಚ್‌ಗಳನ್ನು ಕೈಬಿಟ್ಟಿವೆ. ಇದು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ಅಂಕಿ ಅಂಶವಾಗಿದೆ. ಈ ಸೀಸನ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಂಬರ್ 1 ಸ್ಥಾನದಲ್ಲಿದೆ. ಕುತೂಹಲಕಾರಿ ವಿಷಯವೆಂದರೆ ದೆಹಲಿ ಮತ್ತು ಗುಜರಾತ್‌ಗಳ ಸ್ಥಿತಿಯೂ ತುಂಬಾ ಕೆಟ್ಟದಾಗಿದೆ.
ಎಲ್ಲಾ ತಂಡಗಳನ್ನು ಹಿಂದಿಕ್ಕಿ ಇತಿಹಾಸ ಸೃಷ್ಟಿಸಿದ ಆರ್‌ಸಿಬಿ
ಅತಿ ಹೆಚ್ಚು ಕ್ಯಾಚ್‌ಗಳನ್ನು ಬಿಟ್ಟ ತಂಡ
ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡ ಚೆನ್ನೈ ಸೂಪರ್ ಕಿಂಗ್ಸ್, ಇದುವರೆಗೆ ಕೇವಲ 64.3% ಕ್ಯಾಚ್‌ಗಳನ್ನು ಮಾತ್ರ ಹಿಡಿದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಚಿಂಗ್ ಸಾಮರ್ಥ್ಯ ಕೇವಲ 70.5% ಮಾತ್ರ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 71.4% ಕ್ಯಾಚಿಂಗ್ ದಕ್ಷತೆಯನ್ನು ಹೊಂದಿದೆ. ಲಕ್ನೋ ತಂಡದ ಕ್ಯಾಚಿಂಗ್ ಸಾಮರ್ಥ್ಯ ಕೂಡ ಶೇ. 73.9 ರಷ್ಟಿದೆ. ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೇವಲ ಶೇ. 77.4 ರಷ್ಟು ಕ್ಯಾಚಿಂಗ್ ದಕ್ಷತೆಯನ್ನು ಹೊಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 23 April 25