IPL 2025: ಬ್ಯಾಟ್ಗೂ ತಾಗಲಿಲ್ಲ, ಅಂಪೈರೂ ಔಟ್ ಕೊಡಲಿಲ್ಲ; ಔಟೆಂದು ತಾನೇ ಪೆವಿಲಿಯನ್ ಸೇರಿಕೊಂಡ ಕಿಶನ್
Ishan Kishan's Honest Mistake: ಐಪಿಎಲ್ 2025ರ 41ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಇಶಾನ್ ಕಿಶನ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ವೈಡ್ ಎಂದು ಘೋಷಿಸಲಾದ ಚೆಂಡಿನಲ್ಲಿ ಸ್ವಯಂ ಔಟ್ ಎಂದು ಘೋಷಿಸಿಕೊಂಡು ಕಿಶನ್ ಪೆವಿಲಿಯನ್ ಸೇರಿದರು. ಆದರೆ ರಿವ್ಯೂವ್ನಲ್ಲಿ ಅವರು ನಾಟೌಟ್ ಎಂಬುದು ಸ್ಪಷ್ಟವಾಗಿ ಗೋಚರಿಸಿತು. ಇದು ಇಡೀ ಕ್ರೀಡಾಂಗಣವನ್ನು ಆಶ್ಚರ್ಯಗೊಳಿಸಿತು.

ಐಪಿಎಲ್ 2025 (IPL 2025) ರ 41ನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ (SRH vs MI) ನಡುವೆ ನಡೆಯುತ್ತಿದ್ದು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇಶಾನ್ ಕಿಶನ್ ಮರೆಯಲಾಗದ ಮರ್ಮಾಘಾತ ನೀಡಿದ್ದಾರೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಸನ್ರೈಸರ್ಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಹೆಡ್ ಸೊನ್ನೆಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಬೇಗನೇ ಬ್ಯಾಟಿಂಗ್ಗೆ ಬಂದ ಇಶಾನ್ ಕಿಶನ್ (Ishan Kishan) ಕೂಡ ಯಾವುದೇ ಪರಿಣಾಮ ಬೀರದೆ ಮೂರನೇ ಓವರ್‌ನಲ್ಲಿ 1 ರನ್ ಬಾರಿಸಿ ಔಟಾದರು. ಆದರೆ ಅವರು ಔಟ್ ಆದ ರೀತಿ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಏಕೆಂದರೆ ಅಂಪೈರ್ ವೈಡ್ ನೀಡಲು ಹೋದ ಎಸೆತದಲ್ಲಿ ಔಟಾಗಿದ್ದೇನೆ ಎಂದು ಸ್ವತಃ ಇಶಾನ್ ಕಿಶನ್ ಅವರೇ ಪೆವಿಲಿಯನ್ ಸೇರಿಕೊಂಡರು. ಆದರೆ ಆ ಬಳಿಕ ರಿವ್ಯೂವ್ನಲ್ಲಿ ಕಂಡುಬಂದ ದೃಶ್ಯ ಇಡೀ ಕ್ರೀಡಾಂಗಣವನ್ನೇ ಬೆಚ್ಚಿ ಬೀಳಿಸಿತು.
ಅಚ್ಚರಿ ತಂದ ಕಿಶನ್ ನಿರ್ಧಾರ
ಮೇಲೆ ಹೇಳಿದಂತೆ ಹೈದರಾಬಾದ್ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಸ್ಫೋಟಕ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಟ್ರೆಂಟ್ ಬೌಲ್ಟ್ ಪೆವಿಲಿಯನ್‌ಗೆ ಕಳುಹಿಸಿದರು. ಹೀಗಾಗಿ ಸೀಸನ್ನ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ, ಆದರೆ ಆ ಬಳಿಕ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ತನ್ನ ಹಳೆಯ ಫ್ರಾಂಚೈಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದ ಕಿಶನ್ ಅವರಿಂದ ಈ ಬಾರಿ ಭಾರಿ ನಿರೀಕ್ಷೆಗಳಿದ್ದವು. ಆದರೆ ಈ ಬಾರಿ ಇಶಾನ್ ಕಿಶನ್ ಮಾಡಿದ ಎಡವಟ್ಟು ಇಡೀ ಮೈದಾನವನ್ನೇ ಅಚ್ಚರಿಗೊಳ್ಳುವಂತೆ ಮಾಡಿತು.
Vintage Mumbai Indians is back + Umpires 😭😭#SRHvsMI | Ishan Kishan |pic.twitter.com/pgRCvyliRs
— Sudarshan. (@Imsudarshan__) April 23, 2025
ದುಬಾರಿಯಾಯ್ತು ಕಿಶನ್ ಪ್ರಾಮಣಿಕತೆ
ಮೂರನೇ ಓವರ್ ಆರಂಭದಲ್ಲಿ, ಇಶಾನ್ ಸ್ಟ್ರೈಕ್‌ನಲ್ಲಿದ್ದರೆ, ವೇಗಿ ದೀಪಕ್ ಚಹಾರ್ ಬೌಲಿಂಗ್ ಮಾಡಲಾರಂಭಿಸಿದರು. ಮೊದಲ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಇತ್ತು, ಅದನ್ನು ಇಶಾನ್ ಆಡಲು ಪ್ರಯತ್ನಿಸಿದರು. ಅಂಪೈರ್ ಅದನ್ನು ವೈಡ್ ಎಂದು ಘೋಷಿಸಲು ಮುಂದಾದರು. ಆದರೆ ಇಲ್ಲಿ ತನ್ನ ಪ್ರಾಮಾಣಿಕತೆಯನ್ನು ಪ್ರದರ್ಶಿಸಲು ಮುಂದಾದ ಕಿಶನ್ ನಡೆ ಒಂದು ಕ್ಷಣ ಅಂಪೈರ್ ಅನ್ನು ಗೊಂದಲಕ್ಕೀಡು ಮಾಡಿತು. ಹೀಗಾಗಿ ವೈಡ್ ನೀಡಲು ಎರಡು ಕೈಗಳನ್ನು ಅಗಲಿಸಿದ್ದ ಅಂಪೈರ್, ಆ ಬಳಿಕ ಔಟೆಂದು ಬಲಗೈನ ತೋರು ಬೆರಳನ್ನು ಮೇಲಕ್ಕೆ ಎತ್ತಬೇಕಾಯಿತು . ಇದನ್ನು ನೋಡಿದ ಬೌಲರ್ ಚಹಾರ್, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್‌ನ ಇತರ ಎಲ್ಲಾ ಆಟಗಾರರು ಒಂದು ಕ್ಷಣ ಆಶ್ಚರ್ಯಕ್ಕೊಳಗಾದರು.
Fairplay or brain fade? 👀
Ishan Kishan walked but UltraEdge showed he didn’t nick it! 🤯
Watch the LIVE action ➡ https://t.co/sDBWQG6BrT #IPLonJioStar 👉 #SRHvMI | LIVE NOW on Star Sports 1, Star Sports 1 Hindi & JioHotstar! pic.twitter.com/wGPK0ZbsVR
— Star Sports (@StarSportsIndia) April 23, 2025
ಡಿಆರ್ಎಸ್ ತೆಗೆದುಕೊಳ್ಳದ ಕಿಶನ್
ವಾಸ್ತವವಾಗಿ ಅಂಪೈರ್ ಆ ಚೆಂಡನ್ನು ವೈಡ್ ಎಂದು ಘೋಷಿಸಿದ್ದರು, ಇದಕ್ಕೆ ಮುಂಬೈ ಆಟಗಾರರ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೆ ತಕ್ಷಣ ಇಶಾನ್ ಸ್ವತಃ ಕ್ರೀಸ್ ತೊರೆದು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಅಂತಹ ಪರಿಸ್ಥಿತಿಯಲ್ಲಿ ಅಂಪೈರ್ ಕೂಡ ಅವರನ್ನು ಔಟ್ ಎಂದು ಘೋಷಿಸಬೇಕಾಯಿತು. ಇಶಾನ್ ಕಿಶನ್ ಅವರ ಪ್ರಾಮಾಣಿಕತೆ ನೋಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅವರ ಬೆನ್ನು ತಟ್ಟಿದರು. ಆದರೆ ಸ್ವಲ್ಪ ಸಮಯದ ನಂತರ ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ ಮರುಪಂದ್ಯವನ್ನು ತೋರಿಸಿದಾಗ, ಎಲ್ಲರೂ ಆಘಾತಕ್ಕೊಳಗಾದರು. ಏಕೆಂದರೆ ಸರಿಯಾದ ನಿರ್ಧಾರವು ಅಂಪೈರ್ ಮೊದಲು ನೀಡಿದ್ದಂತೆಯೇ ಇತ್ತು. ಮರುಪಂದ್ಯ ಮತ್ತು ಸ್ನಿಕೋಮೀಟರ್‌ನಲ್ಲಿ ಚೆಂಡು ಇಶಾನ್ ಕಿಶನ್ ಅವರ ಜೆರ್ಸಿ ಅಥವಾ ಪ್ಯಾಡ್ ಅನ್ನು ತಾಗಿಯೇ ಇರಲಿಲ್ಲ. ಆದಾರೂ ಇಶಾನ್ ಕಿಶನ್ ಡಿಆರ್ಎಸ್ ಕೂಡ ತೆಗೆದುಕೊಳ್ಳದೆ ಏತಕ್ಕೆ ಪೆವಿಲಿಯನ್ ಸೇರಿಕೊಂಡರು ಎಂಬುದು ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆಯಾಗಿದೆ.
IPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ; ಬಿಸಿಸಿಐ ನೀಡಿದ ಸ್ಪಷ್ಟನೆ ಏನು?
ನಾನು ಔಟಾಗಿಲ್ಲ ಎಂಬುದು ಗೊತ್ತಾದ ಬಳಿಕ ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿದ್ದ ಇಶಾನ್ ಕಿಶನ್ ತನ್ನ ಮೇಲೆಯೇ ತುಂಬಾ ಕೋಪಗೊಂಡಂತೆ ಕಾಣುತ್ತಿದ್ದರು ಮತ್ತು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿರುವುದು ಕಂಡುಬಂದಿತು. ಇಶಾನ್ ಮಾಡಿದ ತಪ್ಪಿಗೆ ತಂಡವು ಬೆಲೆ ತೆರಬೇಕಾಯಿತು ಏಕೆಂದರೆ ಆ ನಂತರ ಒಂದರ ಹಿಂದೆ ಒಂದರಂತೆ ವಿಕೆಟ್ ಪತನವಾದ್ದರಿಂದ 9 ನೇ ಓವರ್‌ನ ವೇಳೆಗೆ ತಂಡದ 5 ವಿಕೆಟ್‌ಗಳು ಪತನಗೊಂಡವು. ಈ ಹಂತದಲ್ಲಿ ತಂಡದ ಸ್ಕೋರ್ ಕೇವಲ 35 ರನ್‌ಗಳಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Wed, 23 April 25