ಜೆರುಸಲೆಂ: ಗಾಜಾದಲ್ಲಿ ಪ್ಯಾಲೆಸ್ತೀನಿಯರು ಬೆಂಕಿ ಹಚ್ಚುವ ಆಕಾಶಬುಟ್ಟಿಗಳನ್ನು ಹಾರಿಸಿದ ಬಳಿಕ ಇಸ್ರೇಲ್ ವಾಯುಪಡೆ ಬುಧವಾರ ಗಾಜಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ. ಮೇ 21ರಂದು ನಡೆದ ಕದಮ ವಿರಾಮದ ಒಪ್ಪಂದದ ಬಳಿಕ ಮೊದಲ ದಾಳಿ ಇದಾಗಿದೆ. ಕಳೆದ ಮೇ ತಿಂಗಳಿನಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ ಕಾಲ ಸಮರ ನಡೆದಿತ್ತು. ಕಾಳಗದಲ್ಲಿ ಇಸ್ರೇಲ್ನ 13 ಮಂದಿ ಹಾಗೂ ಪ್ಯಾಲೆಸ್ತೀನಿಯರು 260 ಮಂದಿ ಸಾವಿಗೀಡಾಗಿದ್ದರು.
ಇಂದು ನಡೆದ ಕಾಳಗದಲ್ಲಿ ಇಸ್ರೇನ್ನ ವಾಯುಪಡೆ ಗಾಜಾ ನಗರವಾದ ಖಾನ್ ಯೂನೆಸ್ನ ಪೂರ್ವ ಭಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ದಾಳಿಯಲ್ಲಿ, 66 ಮಕ್ಕಳು ಸೇರಿದಂತೆ 253 ಜನ ಪ್ಯಾಲೆಸ್ತೀನಿಯರು ಹಾಗೂ 5 ವರ್ಷದ ಬಾಲಕ ಮತ್ತು ಸೈನಿಕರು ಸೇರಿದಂತೆ 13 ಜನ ಇಸ್ರೇಲಿಯನ್ನರು ಸಾವಿಗೀಡಾಗಿದ್ದಾರೆ.
ಖಾನ್ ಯೂನೆಸ್ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳನ್ನು ಒದಗಿಸುವ ಜತೆಗೆ ಸಭೆಗಳು ನಡೆಯುತ್ತಿದ್ದ ಸ್ಥಳವನ್ನು ಗುರುಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ 12 ವರ್ಷಗಳ ಬೆಂಜಮಿನ್ ನೆತನ್ಯಾಹು ಅವರ ಅಧಿಕಾರ ಕೊನೆಗೊಂಡಿತು. ಇಸ್ರೇಲ್ನಲ್ಲಿ ನೆತನ್ಯಾಹು ಸರಕಾರದ ಬಳಿಕ ಹೊಸ ಸರ್ಕಾರ ಬಂದ ಕೂಡಲೇ ಈ ದಾಳಿ ನಡೆದಿದೆ.
#UPDATE | The Israeli air force launched air strikes on the Gaza Strip early Wednesday after militants in the Palestinian territory sent incendiary balloons into southern Israel, security sources and witnesses said: AFP news agency
— ANI (@ANI) June 15, 2021
ಇದನ್ನೂ ಓದಿ:
ಇಸ್ರೇಲ್: ರಾಜಕೀಯದ ಗೊಂದಲಕ್ಕೆ ಮೈತ್ರಿಯ ಮುಲಾಮು, ಸರ್ಕಾರದ ಭಾಗವಾದ ಅರಬ್ ಪಕ್ಷ
Published On - 10:38 am, Wed, 16 June 21