ಹಮಾಸ್ ಮುಖ್ಯಸ್ಥನ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆ ಮೇಲೆ ಡ್ರೋನ್ ದಾಳಿ

|

Updated on: Oct 19, 2024 | 4:40 PM

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಮೇಲೆ ದಾಳಿ ನಡೆಸಿದ್ದ ಇಸ್ರೇಲ್ ಮಿಲಿಟರಿ ಪಡೆ ಆತನನ್ನು ಹತ್ಯೆ ಮಾಡಿತ್ತು. ಅದರ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆ ಮೇಲೆ ಡ್ರೋನ್ ದಾಳಿ ನಡೆದಿದೆ. ಹಮಾಸ್ ಮುಖ್ಯಸ್ಥನ ಹತ್ಯೆಯಾದ ಕೆಲವು ದಿನಗಳಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಮನೆಯ ಮೇಲೆ ಡ್ರೋನ್ ದಾಳಿಯಾಗಿದೆ.

ಹಮಾಸ್ ಮುಖ್ಯಸ್ಥನ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆ ಮೇಲೆ ಡ್ರೋನ್ ದಾಳಿ
ಬೆಂಜಮಿನ್ ನೆತನ್ಯಾಹು
Follow us on

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೇಲ್ ಸರ್ಕಾರಿ ಅಧಿಕಾರಿಗಳು ಇಂದು (ಅಕ್ಟೋಬರ್ 19) ಸಿಸೇರಿಯಾದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಕಡೆಗೆ ಡ್ರೋನ್ ಅನ್ನು ಉಡಾಯಿಸಿರುವುದನ್ನು ದೃಢಪಡಿಸಿದ್ದಾರೆ. ಇಸ್ರೇಲ್‌ನ ಉನ್ನತ ಮಟ್ಟದ ವಾಯು ಭದ್ರತೆಯನ್ನು ದಾಟಿದ ಡ್ರೋನ್ ಅನ್ನು ಲೆಬನಾನ್‌ನಿಂದ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಕಡೆಗೆ ಡ್ರೋನ್ ಉಡಾವಣೆ ಮಾಡಲಾಗಿದೆ.

ಇಸ್ರೇಲ್​ನ ಮಾಧ್ಯಮಗಳ ವರದಿ ಪ್ರಕಾರ, ಈ ಘಟನೆ ನಡೆದ ಸಮಯದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅವರ ಪತ್ನಿ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಈ ಡ್ರೋನ್ ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್

ಇರಾನ್‌ನಿಂದ ಬೆಂಬಲಿತವಾಗಿರುವ ಹಮಾಸ್ ಮಿತ್ರ ಲೆಬನಾನ್‌ನ ಹೆಜ್ಬೊಲ್ಲಾದೊಂದಿಗಿನ ಯುದ್ಧವು ಇತ್ತೀಚಿನ ವಾರಗಳಲ್ಲಿ ತೀವ್ರಗೊಂಡಿರುವುದರಿಂದ ಇಸ್ರೇಲ್‌ನ ಮೇಲಿನ ದಾಳಿಗಳು ಉಂಟಾಗಿವೆ. ಲೆಬನಾನ್‌ನಿಂದ ಉಡಾವಣೆಯಾದ ಡ್ರೋನ್ ದಕ್ಷಿಣ ಹೈಫಾದ ಸಿಸೇರಿಯಾದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಬಳಿ ಇಂದು ಸ್ಫೋಟಗೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


ಇದನ್ನೂ ಓದಿ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ; ಇಸ್ರೇಲ್ ಘೋಷಣೆ

ಲೆಬನಾನ್‌ನಿಂದ ಹಾರಿಸಲಾದ ಇತರ ಎರಡು ಡ್ರೋನ್‌ಗಳನ್ನು ವಾಯು ರಕ್ಷಣೆಯಿಂದ ಹೊಡೆದುರುಳಿಸಲಾಯಿತು. ಟೆಲ್ ಅವಿವ್ ಪ್ರದೇಶದಲ್ಲಿ ಸೈರನ್‌ಗಳು ಮೊಳಗಿತು. 3ನೇ ಡ್ರೋನ್ ಸಿಸೇರಿಯಾದ ಕಟ್ಟಡಕ್ಕೆ ಅಪ್ಪಳಿಸಿತು. ಇದು ದೊಡ್ಡ ಸ್ಫೋಟಕ್ಕೆ ಕಾರಣವಾಯಿತು. ಡ್ರೋನ್ ದಾಳಿಯಲ್ಲಿ ಕಟ್ಟಡದ ಒಂದು ಭಾಗಕ್ಕೆ ಹಾನಿಯಾಗಿದೆ. ಈ ದಾಳಿಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ