Russian Plane Crash: ರಷ್ಯಾದಲ್ಲಿ 23 ಪ್ರಯಾಣಿಕರಿದ್ದ ವಿಮಾನ ಅಪಘಾತ; 16 ಮಂದಿ ಸಾವು, 7 ಜನರ ರಕ್ಷಣೆ

ಈ ವಿಮಾನ ರಷ್ಯಾದ ಸೇನೆ, ನಾಗರಿಕ ಯಾನ ಮತ್ತು ನೌಕಾಪಡೆಗೆ ಸಹಾಯ ಮಾಡಲು ಇರುವ ಒಂದು ಸ್ವಯಂಸೇವಕ ಸಂಸ್ಥೆಗೆ ಸೇರಿದ್ದಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. 

Russian Plane Crash: ರಷ್ಯಾದಲ್ಲಿ 23 ಪ್ರಯಾಣಿಕರಿದ್ದ ವಿಮಾನ ಅಪಘಾತ; 16 ಮಂದಿ ಸಾವು, 7 ಜನರ ರಕ್ಷಣೆ
ರಷ್ಯಾ ವಿಮಾನ ಪತನ (ಫೋಟೋ: ರಾಯಿಟರ್ಸ್​)
Edited By:

Updated on: Oct 10, 2021 | 2:54 PM

ರಷ್ಯಾದ ಮೆನ್ಜೆಲಿನ್ಸ್ಕ್ ನಗರದ ಟಾಟರ್ಸ್ತಾನ್​ ಎಂಬಲ್ಲಿ ಲೆಟ್​ ಎಲ್​​-410 ಟರ್ಬೋಲೆಟ್​ ವಿಮಾನ ಪತನಗೊಂಡು ಸುಮಾರು 16 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 23 ಪ್ರಯಾಣಿಕರಿದ್ದ ಈ ವಿಮಾನ ಇಂದು ಮುಂಜಾನೆ 9.11 (ಮಾಸ್ಕೋ ಸಮಯ)ಕ್ಕೆ ಪತನಗೊಂಡಿದೆ. ವಿಮಾನದಲ್ಲಿದ್ದ 23 ಮಂದಿಯಲ್ಲಿ 21 ಜನರು ಪ್ಯಾರಾಚೂಟ್​ ಡೈವರ್​ಗಳಾಗಿದ್ದಾರೆ. ಈ ವಿಮಾನ ದುರಂತದಲ್ಲಿ ಸದ್ಯ 7 ಮಂದಿ ಬದುಕುಳಿದಿದ್ದಾರೆ. 

ರಷ್ಯಾದ ತುರ್ತು ಪರಿಸ್ಥಿತಿ ಸಚಿವಾಲಯ ಪತನಗೊಂಡ ವಿಮಾನದ ಫೋಟೋಗಳನ್ನು ಬಿಡುಗಡೆ ಮಾಡಿದೆ.  ಕೆಳಗೆ ಬಿದ್ದ ವಿಮಾನ ಸಂಪೂರ್ಣ ಜಖಂಗೊಂಡಿದೆ. ಇನ್ನು ಬದುಕುಳಿದ ಏಳು ಜನರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲೂ ಒಬ್ಬರ ಪರಿಸ್ಥಿತಿ ತುಂಬ ಗಂಭೀರವಾಗಿದೆ ಎಂದು ರಷ್ಯಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ವಿಮಾನ ರಷ್ಯಾದ ಸೇನೆ, ನಾಗರಿಕ ಯಾನ ಮತ್ತು ನೌಕಾಪಡೆಗೆ ಸಹಾಯ ಮಾಡಲು ಇರುವ ಒಂದು ಸ್ವಯಂಸೇವಕ ಸಂಸ್ಥೆಗೆ ಸೇರಿದ್ದಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.  ಅದೊಂದು ಕ್ರೀಡಾ ಮತ್ತು ರಕ್ಷಣಾ ಸಂಸ್ಥೆಯಾಗಿದೆ ಎಂದೂ ಹೇಳಲಾಗಿದೆ. ಈ ವರ್ಷದ ಆರಂಭದಲ್ಲಿಯೂ ಕೂಡ ರಷ್ಯಾದಲ್ಲಿ ಎರಡು ಎಲ್ -410 ವಿಮಾನಗಳು ಅಪಘಾತಕ್ಕೀಡಾಗಿವೆ.

ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ವೀಕ್ ಆಗಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

ಚುನಾವಣೆಗೆ ನಿಂತ ಪ್ರಕಾಶ್​ ರಾಜ್​; ಮತಗಟ್ಟೆಗೆ ಬಂದು ವೋಟ್​ ಮಾಡಿದ ಪವನ್​ ಕಲ್ಯಾಣ್​, ಚಿರಂಜೀವಿ

 

Published On - 2:53 pm, Sun, 10 October 21