Nepal: ರನ್​ ವೇದಲ್ಲಿ ಆಯತಪ್ಪಿದ ವಿಮಾನ; 80 ಪ್ರಯಾಣಿಕರ ಸುರಕ್ಷಿತ ಸ್ಥಳಾಂತರ

| Updated By: Lakshmi Hegde

Updated on: Oct 05, 2021 | 6:35 PM

ವಿಮಾನದಲ್ಲಿ ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ರೆಂಜಿ ಶೇರ್ಪಾ ತಿಳಿಸಿದ್ದಾರೆ.

Nepal:  ರನ್​ ವೇದಲ್ಲಿ ಆಯತಪ್ಪಿದ ವಿಮಾನ; 80 ಪ್ರಯಾಣಿಕರ ಸುರಕ್ಷಿತ ಸ್ಥಳಾಂತರ
ಕಾಟ್ಮಂಡು ವಿಮಾನ ನಿಲ್ದಾಣ
Follow us on

ಕಾಟ್ಮಂಡು: ನೇಪಾಳದ ದೇಶೀಯ ವಿಮಾನ (Nepal’s Domestic Aircraft)  ಅಂದರೆ ದೇಶದೊಳಗೇ ಸಂಚರಿಸುವ ವಿಮಾನವೊಂದು ರನ್​ವೇದಲ್ಲಿ ಆಯತಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ವಿಮಾನದಲ್ಲಿ ಸುಮಾರು 80 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್​ ಯಾರಿಗೂ ಏನೂ ಆಗಲಿಲ್ಲ. ನೇಪಾಳದ ಶ್ರೀ ಏರ್​​ಲೈನ್​​ಗೆ ಸೇರಿದ ವಿಮಾನ, ಇಂದು ಬೆಳಗ್ಗೆ 10.30ರ ಹೊತ್ತಿಗೆ ಕಾಟ್ಮಂಡುವಿನ ತ್ರಿಭುವನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇಪಾಳ್​ಗುಂಜ್​ಗೆ ಹೊರಟಿತ್ತು. ಟೇಕ್​ಆಫ್​ಗೂ ಮುನ್ನ ಟ್ಯಾಕ್ಸಿ ವೇದಲ್ಲಿ ಸಂಚಾರ ಮಾಡುತ್ತಿದ್ದಾಗ ಸ್ಕಿಡ್​ ಆಗಿದೆ ಎಂದು ವರದಿಯಾಗಿದೆ. 

ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ರೆಂಜಿ ಶೇರ್ಪಾ ತಿಳಿಸಿದ್ದಾರೆ.  ಈ ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ತೆಗೆದುಕೊಂಡು ಹೋಗಲಾಗಿದ್ದು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ, ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಅನುಮೋದನೆ ಬಳಿಕವಷ್ಟೇ ಮತ್ತೆ ಹಾರಾಟ ನಡೆಸಲಾಗುವುದು ಎಂದೂ ಹೇಳಿದ್ದಾರೆ. ರನ್​ವೇದಲ್ಲಿ ಹೋಗುತ್ತಿದ್ದಾಗ ವಿಮಾನದ ಎಡಗಾಲಿ ಹುಲ್ಲಿನ ಮೇಲೆ ಹೋಗಿದೆ ಎನ್ನಲಾಗಿದೆ. ಈ ವಿಮಾನ ಆಯತಪ್ಪಿ ಸಣ್ಣಮಟ್ಟದ ಅವಘಡ ಸಂಭವಿಸಿದ್ದರೂ ಏರ್​ಪೋರ್ಟ್​​ನಲ್ಲಿ ಉಳಿದ ವಿಮಾನಗಳ ಕಾರ್ಯಾಚರಣೆ ನಡೆಯುತ್ತಲೇ ಇದೆ.

ಇದನ್ನೂ ಓದಿ: Lakhimpur Kheri violence: ಪ್ರಿಯಾಂಕಾ ಗಾಂಧಿ ಸೇರಿ 11 ಕಾಂಗ್ರೆಸ್​ ನಾಯಕರ ಅಧಿಕೃತ ಬಂಧನ; ನವಜೋತ್​ ಸಿಂಗ್​ ಸಿಧುರಿಂದ ಎಚ್ಚರಿಕೆ

Covaxin: ಕೋವ್ಯಾಕ್ಸಿನ್​ಗೆ ಅನುಮೋದನೆ ನೀಡುವ ಬಗ್ಗೆ WHO ಸಭೆ; ಸದ್ಯದಲ್ಲೇ ಅಂತಿಮ ನಿರ್ಧಾರ ಸಾಧ್ಯತೆ

 

Published On - 6:35 pm, Tue, 5 October 21