AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಳಿಕೋರ ಇರುವ ಮಾಹಿತಿ ಮೊದಲೇ ಸಿಕ್ಕಿದ್ದರೂ ಟ್ರಂಪ್​ ಮೇಲೆ ಗುಂಡಿನ ದಾಳಿ ನಡೆದಿದ್ದು ಹೇಗೆ?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಗುಂಡಿನ ದಾಳಿ ನಡೆದಿದೆ. ದಾಳಿಗೂ ಮುನ್ನ ದಾಳಿಕೋರನನ್ನು ಅಲ್ಲಿದ್ದವರು ಗುರುತಿಸಿ ಪೊಲೀಸ್​ಗೆ ಮಾಹಿತಿ ನೀಡಿದ್ದರೂ ಕೂಡ ಯಾರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಬಿಬಿಸಿಗೆ ತಿಳಿಸಿದ್ದಾರೆ.

ದಾಳಿಕೋರ ಇರುವ ಮಾಹಿತಿ ಮೊದಲೇ ಸಿಕ್ಕಿದ್ದರೂ ಟ್ರಂಪ್​ ಮೇಲೆ ಗುಂಡಿನ ದಾಳಿ ನಡೆದಿದ್ದು ಹೇಗೆ?
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Jul 15, 2024 | 11:08 AM

Share

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ 20 ವರ್ಷದ ಯುವಕ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್​ ಟ್ರಂಪ್​ಗೆ ಏನು ಆಗಿಲ್ಲ. ಓರ್ವ ನಾಗರಿಕ ಪ್ರಾಣ ಕಳೆದುಕೊಂಡಿದ್ದಾರೆ, ಜತೆಗೆ ದಾಳಿಕೋರ ಕೂಡ ಸಾವನ್ನಪ್ಪಿದ್ದಾನೆ. ದಾಳಿಕೋರ ಟ್ರಂಪ್​ನಿಂದ ಕೇವಲ 130 ಮೀಟರ್​ ದೂರದಲ್ಲಿದ್ದ.

ಬಟ್ಲರ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸ್ಥಳದಿಂದ ಕೇವಲ 130 ಮೀಟರ್ ದೂರದಿಂದ ದಾಳಿಕೋರ ಟ್ರಂಪ್ ಕಡೆಗೆ ಗುಂಡು ಹಾರಿಸಿದ್ದಾನೆ. ಮೊದಲು ಟ್ರಂಪ್ ಕಡೆಗೆ ಮೂರು ಸುತ್ತು ಗುಂಡು ಹಾರಿಸಿದ ಅವರು ನಂತರ ಐದು ಸುತ್ತು ಗುಂಡು ಹಾರಿಸಿದ್ದ.

ಒಟ್ಟಾರೆಯಾಗಿ ಶೂಟರ್ ಟ್ರಂಪ್ ಮೇಲೆ 8 ಸುತ್ತು ಗುಂಡು ಹಾರಿಸಿದ್ದಾನೆ. ದಾಳಿಕೋರರು ಟ್ರಂಪ್ ಮೇಲೆ ದಾಳಿ ಮಾಡಿದ ಸ್ಥಳದಿಂದ 100 ಮೀಟರ್ ದೂರದಲ್ಲಿ ರಹಸ್ಯ ಸೇವಾ ಸ್ನೈಪರ್‌ಗಳು ನಿಂತಿದ್ದರು. ಈಗಿರುವ ಪ್ರಶ್ನೆ ಏನೆಂದರೆ, ದಾಳಿಕೋರ ಟ್ರಂಪ್ ಭಾಷಣಕ್ಕೂ ಮುನ್ನವೇ ಜನರ ಕಣ್ಣಿಗೆ ಕಾಣಿಸಿಕೊಂಡಿದ್ದ ಆತನ ಕೈಯಲ್ಲಿರುವ ರೈಫಲ್​ನ್ನು ಕೂಡ ಅಲ್ಲಿದ್ದವು ಗಮನಿಸಿದ್ದರು.

ಗ್ರೆಗ್ ಎಂಬಾತ ಈ ವಿಚಾರವನ್ನು ಪೊಲೀಸರಿಗೂ ತಿಳಿಸಿದ್ದ ಆದರೆ ಯಾವುದೇ ಪ್ರಯೋಜನವಾಗಲಿಲ್ಲ, ಪೊಲೀಸರು ತನ್ನ ಮಾತಿಗೆ ಕಿವಿಗೊಡಲಿಲ್ಲ ಎಂದು ಆತ ಹೇಳಿದ್ದಾರೆ. ಬಿಬಿಸಿ ವರದಿಯ ಪ್ರಕಾರ, ಟ್ರಂಪ್ ಸ್ಥಳೀಯ ಕಾಲಮಾನ ಸಂಜೆ 5 ಗಂಟೆಗೆ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಭಾಷಣ ಮಾಡಬೇಕಾಗಿತ್ತು, ಆದರೆ ಒಂದು ಗಂಟೆ ತಡವಾಗಿ ಅಲ್ಲಿಗೆ ತಲುಪಿದರು.

ಮತ್ತಷ್ಟು ಓದಿ: ಡೊನಾಲ್ಡ್​ ಟ್ರಂಪ್ ಕಿವಿಗೆ ತಾಗಿದ್ದು ಬುಲೆಟ್​ ಅಲ್ಲ, ಗಾಜಿನ ಚೂರುಗಳು

ಭಾಷಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಮನಬಂದಂತೆ ಗುಂಡು ಹಾರಿಸಲಾಯಿತು. ದಾಳಿಯಲ್ಲಿ ಟ್ರಂಪ್ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದರ ನಂತರ, ರಹಸ್ಯ ಸೇವಾ ಏಜೆಂಟ್ಗಳು ತಕ್ಷಣವೇ ಘಟನಾ ಸ್ಥಳವನ್ನು ಸುತ್ತುವರೆದರು. ಘಟನೆಯ ನಂತರ, ರಹಸ್ಯ ಸೇವೆಯ ಸ್ನೈಪರ್ ದಾಳಿಕೋರನನ್ನು ಕೊಂದರು. ಗ್ರೆಗ್ ಸ್ಮಿತ್ ಎಂಬ ಪ್ರತ್ಯಕ್ಷದರ್ಶಿ ದಾಳಿಕೋರನ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ. ಟ್ರಂಪ್ ಭಾಷಣ ಕೇಳಲು ಗ್ರೆಗ್ ಬಂದಿದ್ದರು. ಟ್ರಂಪ್ ಭಾಷಣ ಪ್ರಾರಂಭವಾದ ಐದು ನಿಮಿಷಗಳ ನಂತರ, ಅವರು ದಾಳಿಕೋರನನ್ನು ನೋಡಿದರು.

ರೈಫಲ್‌ನೊಂದಿಗೆ ಕಟ್ಟಡದ ಕಡೆಗೆ ಚಲಿಸುತ್ತಿದ್ದನೆಂದು ಹೇಳಿದನು ಮತ್ತು ನಂತರ ಆತ ಛಾವಣಿ ಕಡೆಗೆ ಹೋದನು. ನಾವು ಛಾವಣಿಯ ಕಡೆಗೆ ಕೈ ತೋರಿಸಿದೆವು ಮತ್ತು ಕಟ್ಟಡದ ಮೇಲ್ಛಾವಣಿಯ ಮೇಲೆ ವ್ಯಕ್ತಿಯೊಬ್ಬ ರೈಫಲ್ನೊಂದಿಗೆ ಇದ್ದನೆಂದು ಪೊಲೀಸರಿಗೆ ತಿಳಿಸಿದೆವು.

ಆದರೆ ಪೊಲೀಸರು ನನ್ನ ಮಾತಿಗೆ ಗಮನ ಕೊಡಲಿಲ್ಲ, ಛಾವಣಿ ಇಳಿಜಾರಿದ್ದ ಕಾರಣ ದಾಳಿಕೋರನನ್ನು ನೋಡಲಾಗಲಿಲ್ಲ, ಟ್ರಂಪ್​ ಅವರನ್ನು ಇನ್ನೂ ವೇದಿಕೆಯಿಂದ ಯಾಕೆ ಕರೆದೊಯ್ದಿಲ್ಲ ಎಂದು ನಾನು ನೋಡುತ್ತಿದ್ದೆ. ಟ್ರಂಪ್​ ಕಡೆಗೆ ಗುಂಡು ಹಾರಿಸಿದ ಕೂಡಲೇ ಸ್ನೈಪರ್​ಗಳು ಆತನನ್ನು ಹತ್ಯೆ ಮಾಡಿದ್ದಾರೆ. ಗ್ರೆಗ್​ ಇದನ್ನು ಭದ್ರತೆಯ ಕೊರತೆ ಎಂದು ಕರೆದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ