ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧ ಜಾಗತಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ನಡುವೆ, ದೊಡ್ಡಣ್ಣ ಅಮೆರಿಕವು ಉಕ್ರೇನ್ ದೇಶದ ನೆರವಿಗೆ ನಿಂತಿದೆ. ಅಮೆರಿಕವು ಉಕ್ರೇನ್ಗೆ ₹350 ಮಿಲಿಯನ್ ಮಿಲಿಟರಿ ನೆರವು ನೀಡಿದೆ. ರಷ್ಯಾ ವಿರುದ್ಧ ರಕ್ಷಿಸಿಕೊಳ್ಳಲು ಉಕ್ರೇನ್ಗೆ US ನೆರವು ನೀಡಿದೆ. ಈ ಬಗ್ಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಉಕ್ರೇನ್ ಮುಖ್ಯ ರಸ್ತೆಗಳಲ್ಲಿ ರಷ್ಯಾ ಟ್ಯಾಂಕರ್‌ಗಳ ಓಡಾಟ ನಡೆಯುತ್ತಿದೆ. ಕಾರ್‌ಕೀವ್‌ನ ಮುಖ್ಯ ರಸ್ತೆಗಳಲ್ಲಿ ಟ್ಯಾಂಕರ್‌ಗಳ ಆರ್ಭಟ ಕಂಡುಬಂದಿದೆ. ಅಪಾರ್ಟ್ಮೆಂಟ್ ಬಳಿಯೇ ಬಾಂಬ್ ಸ್ಫೋಟಗೊಳ್ಳುತ್ತಿದೆ.
ಇತ್ತ, ಭಾರತದ 219 ವಿದ್ಯಾರ್ಥಿಗಳಿದ್ದ ವಿಮಾನ ಮುಂಬೈ ತಲುಪಿದೆ. ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ವಿಮಾನ ಮೂಲಕ ಕರೆತರಲಾಗಿದೆ. ರೊಮೇನಿಯಾದ ಬುಕಾರೆಸ್ಟ್ನಿಂದ ವಿದ್ಯಾರ್ಥಿಗಳ ಶಿಫ್ಟ್ ಮಾಡಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ವಿದ್ಯಾರ್ಥಿಗಳ ಸ್ಥಳಾಂತರ ಮಾಡಿದ್ದು, ನಾಳೆ ದೆಹಲಿಗೆ ಎರಡನೇ ವಿಮಾನ ಬರಲಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಉಕ್ರೇನ್ ಅಧ್ಯಕ್ಷ ಪ್ರಧಾನಿ ಮೋದಿಗೆ ಕರೆ ಮಾಡಿ ಮಾತನಾಡಿದ್ದಾರೆ. ರಷ್ಯಾ ಉಕ್ರೇನ್ ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮಾಹಿತಿ ನೀಡಿದ್ದಾರೆ. ಒಂದು ಲಕ್ಷ ರಷ್ಯಾ ಸೈನಿಕರು ಉಕ್ರೇನ್ ನೆಲದಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮಾತನಾಡುವಂತೆ ಉಕ್ರೇನ್ ಅಧ್ಯಕ್ಷ ಬೆಂಬಲ ಕೋರಿದ್ದಾರೆ.
ಉಕ್ರೇನ್ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ವಿದೇಶಾಂಗ ಇಲಾಖೆ ಸಚಿವರು ಸಂಪರ್ಕದಲ್ಲಿದ್ದಾರೆ. ಪೂರ್ವ ಭಾಗದಲ್ಲೇ ವಿದ್ಯಾರ್ಥಿಗಳು ಹೆಚ್ಚಿದ್ದಾರೆ ಅವರನ್ನು ಕರೆತರಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Russia-Ukraine War: ಮದುವೆಯಾದ ಮರುದಿನವೇ ಉಕ್ರೇನ್ ಸೇನೆ ಸೇರಿದ ದಂಪತಿ; ಫೋಟೋಗಳು ವೈರಲ್
ಇದನ್ನೂ ಓದಿ: Russia-Ukraine War: ರಷ್ಯಾದ ದಾಳಿಯ ನಡುವೆ ಶೆಲ್ಟರ್ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ
Published On - 8:24 pm, Sat, 26 February 22