Russia-Ukraine War: ರಷ್ಯಾದ ದಾಳಿಯ ನಡುವೆ ಶೆಲ್ಟರ್​​ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ

ಉಕ್ರೇನಿಯನ್ ಪೊಲೀಸ್ ಅಧಿಕಾರಿಗಳೇ ಹೆರಿಗೆ ಮಾಡಿ, ಮಿಯಾಳನ್ನು ಆಕೆಯ ಅಮ್ಮನ ಕೈಗೆ ಇಟ್ಟಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

Russia-Ukraine War: ರಷ್ಯಾದ ದಾಳಿಯ ನಡುವೆ ಶೆಲ್ಟರ್​​ನಲ್ಲೇ ಮಗುವಿಗೆ ಜನ್ಮ ನೀಡಿದ ಉಕ್ರೇನ್ ಮಹಿಳೆ
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಉಕ್ರೇನ್​ನಲ್ಲಿ ಜನಿಸಿದ ಮಗು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 26, 2022 | 6:25 PM

ಕೈವ್: ಉಕ್ರೇನ್‌ನ (Ukraine) ಮೇಲಿನ ರಷ್ಯಾದ ಯುದ್ಧದ ಭೀಕರತೆಯ ನಡುವೆ ಕೈವ್‌ನಲ್ಲಿ ಏರ್ ರೇಡ್ ಶೆಲ್ಟರ್​​ನಲ್ಲಿ ಆಶ್ರಯ ಪಡೆದಿದ್ದ ಕುಟುಂಬವೊಂದರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೆಡೆ ನೂರಾರು ಜನರು ಯುದ್ಧದಲ್ಲಿ ಸಾವನ್ನಪ್ಪಿರುವ ನಡುವೆ ಇನ್ನೊಂದೆಡೆ ಹೊಸ ಜೀವವೊಂದು ಭೂಮಿಗೆ ಕಾಲಿಟ್ಟಿದೆ. ಈ ಮೂಲಕ ಪ್ರಾಣಭೀತಿಯ ನಡುವೆಯೂ ಆ ಕುಟುಂಬ ಸಂತಸದಿಂದ ಮಗುವನ್ನು ಸ್ವಾಗತಿಸಿದೆ.

ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ. “ಕೈವ್​ನ ಶೆಲ್ಟರ್​​ನಲ್ಲಿ ಮೊದಲ ಮಗುವೊಂದು ಜನಿಸಿದೆ. ಸುತ್ತಲೂ ಉರಿಯುತ್ತಿರುವ ಕಟ್ಟಡಗಳು ಮತ್ತು ರಷ್ಯಾದ ಟ್ಯಾಂಕ್‌ಗಳ ಪಕ್ಕದಲ್ಲಿ ನಾವು ಆ ಮಗುವನ್ನು ಸ್ವಾತಂತ್ರ್ಯ ಎಂದು ಕರೆಯಬಹುದು!” ಎಂದು ಟ್ವೀಟ್ ಮಾಡಲಾಗಿದೆ.

ಮಗು ಮುದ್ದಾಗಿ ಮಲಗಿರುವ ಫೋಟೋವೊಂದನ್ನು ಟ್ವೀಟ್‌ ಜೊತೆಗೆ ಅಪ್​ಲೋಡ್ ಮಾಡಲಾಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಹೆಣ್ಣು ಮಗುವಿಗೆ ಮಿಯಾ ಎಂದು ಹೆಸರಿಡಲಾಗಿದೆ. ಭೂಗತ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದ 23 ವರ್ಷದ ಮಹಿಳೆಗೆ ಈ ಮಗು ಜನಿಸಿದೆ.

ಉಕ್ರೇನಿಯನ್ ಪೊಲೀಸ್ ಅಧಿಕಾರಿಗಳೇ ಹೆರಿಗೆ ಮಾಡಿ, ಮಿಯಾಳನ್ನು ಆಕೆಯ ಅಮ್ಮನ ಕೈಗೆ ಇಟ್ಟಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: Russia Ukraine War: ರಷ್ಯಾದ 90 ಕ್ಕೂ ಹೆಚ್ಚು ಹೆಲಿಕಾಪ್ಟರ್​ಗಳು ಉಕ್ರೇನ್​ನ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿವೆ; ಇಲ್ಲಿವೆ ಉಪಗ್ರಹ ಚಿತ್ರಗಳು

Russia-Ukraine War: ಕೈವ್ ಬಳಿ 14 ಜನರಿದ್ದ ಉಕ್ರೇನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ರಷ್ಯಾ ಸೇನೆ

Published On - 6:24 pm, Sat, 26 February 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ