America Shootout: ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ
ಅಮೆರಿಕದಲ್ಲಿ ಶೂಟೌಟ್ ಪ್ರಕರಣಗಳು ಮುಂದುವರೆದಿದ್ದು, ಫಿಲಡೆಲ್ಫಿಯಾದಲ್ಲಿ ದರೋಡೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ (America) ಶೂಟೌಟ್ (Shootout) ಪ್ರಕರಣಗಳು ಮುಂದುವರೆದಿದ್ದು, ಫಿಲಡೆಲ್ಫಿಯಾದಲ್ಲಿ (Philadelphia) ದರೋಡೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಜುಡೆ ಚಾಕೋ (21) ಸಾವನ್ನಪ್ಪಿದ್ದಾರೆ. ದರೋಡೆಕೋರರು ವಿದ್ಯಾರ್ಥಿ ಜುಡೆ ಚಾಕೋರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದರು. ಇದಕ್ಕೆ ವಿದ್ಯಾರ್ಥಿ ಜುಡೆ ಚಾಕೋ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರು ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ವಿದ್ಯಾರ್ಥಿ ಜುಡೆ ಚಾಕೋ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ವಿದ್ಯಾರ್ಥಿಯ ಪೋಷಕರು ಕೇರಳದ ಕೊಲ್ಲಂ ಜಿಲ್ಲೆ ನಿವಾಸಿಗಳು ಎಂದು ತಿಳಿದುಬಂದಿದ್ದು, 30 ವರ್ಷಗಳ ಹಿಂದೆ ಕೇರಳದಿಂದ ಅಮೆರಿಕಕ್ಕೆ ಬಂದು ನೆಲೆಸಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: Thomas Lee: ತನ್ನ ಕಚೇರಿಯಲ್ಲಿ ಶೂಟೌಟ್ ಮಾಡಿಕೊಂಡ ಜಗತ್ತಿನ ಬಿಲಿಯನೇರ್ ಥಾಮಸ್ ಲೀ
ಹೈದ್ರಾಬಾದ್ ಮೂಲದ ಮಹಿಳೆ ಸಾವು
ಇದೇ ತಿಂಗಳು ದಿನಾಂಕ 7 ರಂದು ಅಮೆರಿಕಾದ ದಲ್ಲಾಸ್ನಲ್ಲಿ ನಡೆದ ಶೂಟೌಟ್ನಲ್ಲಿ ಹೈದ್ರಾಬಾದ್ ಮೂಲದ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾಗಿದ್ದರು. ದಲ್ಲಾಸ್ನ ಮಾಲ್ವೊಂದರ ಹೊರಗೆ ಬಂದೂಕು ದಾರಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ನಂತರ ಹತ್ಯೆಗೀಡಾದ ಒಂಬತ್ತು ಜನರ ಪೈಕಿ ಭಾರತೀಯ ಮೂಲದ ಇಂಜಿನಿಯರ್ ಐಶ್ವರ್ಯಾ ತಾಟಿಕೊಂಡ ಕೂಡ ಒಬ್ಬರಾಗಿದ್ದಾರೆ ಎಂದು ವರದಿಯಾಗಿತ್ತು.
ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ತಾಟಿಕೊಂಡ ಹೈದರಾಬಾದ್‌ನ ಸರೂರ್‌ನಗರ ನಿವಾಸಿಯಾಗಿದ್ದು, ಭಾರತದಿಂದ ಅಮೆರಿಕಕ್ಕೆ ತೆರಳಿದ್ದರು. 27 ವರ್ಷದ ತಾಟಿಕೊಂಡ ದಲ್ಲಾಸ್ ಹೊರವಲಯ ಅಲ್ಲೆನ್ ಪ್ರೀಮಿಯಂನ ಮಳಿಗೆಯೊಂದರಲ್ಲಿ ಶಾಫಿಂಗ್ ಮಾಡುತ್ತಿದ್ದಾಗ ಬಂದೂಕುದಾರಿ ಗುಂಡಿನ ದಾಳಿ ನಡೆಸಿದ್ದನು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ