AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

North Korea Spy Satellite: ಜೂನ್‌ನಲ್ಲಿ ಮೊದಲ ಮಿಲಿಟರಿ ಪತ್ತೇದಾರಿ ಉಪಗ್ರಹ ಉಡಾವಣೆ ಮಾಡಲಿದೆ ಉತ್ತರ ಕೊರಿಯಾ

ಉತ್ತರ ಕೊರಿಯಾ(North Korea) ತನ್ನ ಮೊದಲ ಮಿಲಿಟರಿ ಬೇಹುಗಾರಿಕಾ ಉಪಗ್ರಹವನ್ನು ಜೂನ್‌ನಲ್ಲಿ ಉಡಾವಣೆ ಮಾಡಲು ಸಿದ್ಧವಾಗಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಸಮಾರಾಭ್ಯಾಸದ ಮೇಲೆ ನಿಗಾ ಇಡಲು ಈ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ.

North Korea Spy Satellite: ಜೂನ್‌ನಲ್ಲಿ ಮೊದಲ ಮಿಲಿಟರಿ ಪತ್ತೇದಾರಿ ಉಪಗ್ರಹ ಉಡಾವಣೆ ಮಾಡಲಿದೆ ಉತ್ತರ ಕೊರಿಯಾ
ಕಿಮ್ ಜಾಂಗ್ ಉನ್
ನಯನಾ ರಾಜೀವ್
|

Updated on: May 30, 2023 | 9:12 AM

Share

ಉತ್ತರ ಕೊರಿಯಾ(North Korea) ತನ್ನ ಮೊದಲ ಮಿಲಿಟರಿ ಬೇಹುಗಾರಿಕಾ ಉಪಗ್ರಹವನ್ನು ಜೂನ್‌ನಲ್ಲಿ ಉಡಾವಣೆ ಮಾಡಲು ಸಿದ್ಧವಾಗಿದೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಸಮಾರಾಭ್ಯಾಸದ ಮೇಲೆ ನಿಗಾ ಇಡಲು ಈ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಉತ್ತರ ಕೊರಿಯಾದ ನಿಗದಿತ ಉಪಗ್ರಹ ಉಡಾವಣೆಯು ಯುದ್ಧದ ಸಿದ್ಧತೆಗಳನ್ನು ಬಲಪಡಿಸುವ ಅನಿವಾರ್ಯ ಕ್ರಮವಾಗಿದೆ ಎಂದು ಕೊರಿಯಾದ ಆಡಳಿತ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ (ಡಬ್ಲ್ಯುಪಿಕೆ) ನ ಕೇಂದ್ರೀಯ ಮಿಲಿಟರಿ ಆಯೋಗದ ಉಪಾಧ್ಯಕ್ಷ ರಿ ಪ್ಯೋಂಗ್-ಚಿಯೋಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ 31 ಮತ್ತು ಜೂನ್ 11 ರ ನಡುವೆ ಉಪಗ್ರಹವನ್ನು ಉಡಾವಣೆ ಮಾಡಲು ಯೋಜಿಸಲಾಗಿದೆ ಎಂದು ಉತ್ತರ ಕೊರಿಯಾ ಜಪಾನ್ ಸರ್ಕಾರಕ್ಕೆ ತಿಳಿಸಿದ ಒಂದು ದಿನದ ನಂತರ ಈ ಪ್ರಕಟಣೆ ಹೊರಬಿದ್ದಿದೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಜಪಾನಿನ ರಕ್ಷಣಾ ಸಚಿವ ಯಸುಕಾಜು ಹಮಡಾ ಅವರು, ಜಪಾನಿನ ಭೂಪ್ರದೇಶಕ್ಕೆ ಯಾವುದೇ ಉಪಗ್ರಹ ಅಥವಾ ಅವಶೇಷಗಳನ್ನು ಪ್ರವೇಶಿಸಿದರೆ ಅದನ್ನು ಹೊಡೆದುರುಳಿಸಲು ದೇಶದ ಆತ್ಮ ರಕ್ಷಣಾ ಪಡೆಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು. ಸೇನಾ ಕಣ್ಗಾವಲು ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ.

ಮತ್ತಷ್ಟು ಓದಿ: Kim Jong Un: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 40 ದಿನಗಳಿಂದ ಕಾಣಿಸ್ತಿಲ್ವಂತೆ, ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹ

ಕಿಮ್ ಜಾಂಗ್ -ಉನ್ ಅವರ ಭವಿಷ್ಯದ ಕ್ರಿಯಾ ಯೋಜನೆಯನ್ನು ಅನುಮೋದಿಸಲು ಮೊದಲ ಮಿಲಿಟರಿ ಕಣ್ಗಾವಲು ಉಪಗ್ರಹವನ್ನು ಉಡಾವಣೆ ಮಾಡಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಉತ್ತರ ಕೊರಿಯಾದ ಉಪಗ್ರಹ ಸಾಮರ್ಥ್ಯಗಳನ್ನು ಹಲವರು ಪ್ರಶ್ನಿಸಿದ್ದಾರೆ. ಉತ್ತರ ಕೊರಿಯಾದ ಜಲಮಾರ್ಗ ಅಧಿಕಾರಿಗಳಿಂದ ಬಂದ ಸೂಚನೆಯು ಮೇ 31 ರಿಂದ ಜೂನ್ 11 ರವರೆಗೆ ಉಡಾವಣೆಯಾಗಿದೆ ಮತ್ತು ಹಳದಿ ಸಮುದ್ರ, ಪೂರ್ವ ಚೀನಾ ಸಮುದ್ರ ಮತ್ತು ಫಿಲಿಪೈನ್ಸ್‌ನ ಲುಜಾನ್ ದ್ವೀಪದ ಪೂರ್ವದ ನೀರಿನ ಮೇಲೆ ಉಡಾವಣೆ ಪರಿಣಾಮ ಬೀರಬಹುದು ಎಂದು ಜಪಾನ್‌ನ ಕೋಸ್ಟ್ ಗಾರ್ಡ್ ಹೇಳಿದೆ.

ಬೀಳುವ ಶಿಲಾಖಂಡರಾಶಿಗಳಿಂದ ಸಂಭವನೀಯ ಅಪಾಯಗಳ ಕಾರಣ ಆ ದಿನಾಂಕಗಳಲ್ಲಿ ಆ ಪ್ರದೇಶದಲ್ಲಿ ಹಡಗುಗಳಿಗೆ ಸುರಕ್ಷತಾ ಎಚ್ಚರಿಕೆಯನ್ನು ಕೋಸ್ಟ್ ಗಾರ್ಡ್ ನೀಡಿತು. ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ. ಕಳೆದ ತಿಂಗಳಷ್ಟೇ ತನ್ನ ದೇಶ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಮಾಡುತ್ತಿದೆ ಎಂದು ತಿಳಿಸಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಉ.ಕೊರಿಯಾ ತಯಾರಿಸಿರುವ ಮಿಲಿಟರಿ ಉಪಗ್ರಹ ಉಡಾಯಿಸಲು ಕಿಮ್ ಸಜ್ಜಾಗಿದ್ದಾನೆ. ಇದು ಜಪಾನ್‌ಗೆ ಭಯ ತರಿಸಿದ್ದು, ಯುದ್ಧಕ್ಕೆ ಸಜ್ಜಾಗಿದೆ.

ಈಗಾಗಲೇ ಪರಮಾಣು ಕ್ಷಿಪಣಿಗಳ ಮೂಲಕ ಹೆಸರು ಮಾಡಿರುವ ಕಿಮ್ ಜಾಂಗ್ ಉನ್, ಈಗ ಗುಪ್ತಚರ ಉಪಗ್ರಹದ ಮೂಲಕ ಶತ್ರುಗಳ ಎದೆ ನಡುಗಿಸಲು ಸಜ್ಜಾಗಿದ್ದಾನೆ. ಮಾಹಿತಿ ಸಿಕ್ಕ ತಕ್ಷಣ ದಕ್ಷಿಣ ಕೊರಿಯಾ, ಜಪಾನ್ ಸೇರಿ ಅಮೆರಿಕ ಬೆಚ್ಚಿಬಿದ್ದಿದ್ದವು. ಯಾಕೆಂದರೆ  ಈ ದೇಶಗಳೇ ಕಿಮ್‌ಗೆ ಮೊದಲ ಟಾರ್ಗೆಟ್. ಹೀಗೆ ಶತ್ರುಗಳ ಆಳ ಅರಿಯಲು ಕಿಮ್ ಮಾಡಿಕೊಳ್ಳುತ್ತಿರುವ ಸಿದ್ಧತೆ & ಮಿಲಿಟರಿ ಉಪಗ್ರಹ ಉಡಾವಣೆ ಆಗುತ್ತಿರುವ ಬಗ್ಗೆ ಜಪಾನ್ ನೇರ ಎಚ್ಚರಿಕೆ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ