ದೀಪಾವಳಿ ಹಬ್ಬದ ಶುಭಾಶಯ ಕೋರಿದ ಜೋ ಬೈಡೆನ್; ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಣೆ

| Updated By: ganapathi bhat

Updated on: Nov 04, 2021 | 9:25 PM

Deepavali 2021: ಹಿಂದೂ, ಸಿಖ್ಖ್, ಜೈನ್ ಮತ್ತು ಬೌದ್ಧ ಧರ್ಮದವರಿಗೆ, ಅಮೆರಿಕಾದಲ್ಲಿ ಹಾಗೂ ವಿಶ್ವದಾದ್ಯಂತ ದೀಪಾವಳಿ ಹಬ್ಬ ಆಚರಿಸುತ್ತಿರುವ ಎಲ್ಲರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಜೋ ಬೈಡೆನ್ ದಂಪತಿ ಶುಭಹಾರೈಸಿದ್ದಾರೆ.

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಜೋ ಬೈಡೆನ್; ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಣೆ
Follow us on

ನ್ಯೂಯಾರ್ಕ್: ದೀಪಾವಳಿ ಹಬ್ಬದ ಪ್ರಯುಕ್ತ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್​ ಶುಭಾಶಯ ಕೋರಿದ್ದಾರೆ. ಅಮೆರಿಕಾದ ವೈಟ್ ​ಹೌಸ್​ನಲ್ಲಿ ಬೈಡೆನ್​ ದಂಪತಿ ದೀಪಾವಳಿ ಆಚರಿಸಿದ್ದಾರೆ. ಕತ್ತಲೆ ಬಳಿಕ ಜ್ಞಾನ, ಬುದ್ಧಿವಂತಿಕೆ, ಸತ್ಯವಿದೆ ಎಂಬುದನ್ನು ದೀಪಾವಳಿಯ ಬೆಳಕು ನಮಗೆ ನೆನಪಿಸಲಿ. ಹತಾಶೆಯ ನಂತರ ಭರವಸೆ ಮತ್ತು ವಿವಿಧತೆಯಲ್ಲಿ ಏಕತೆ ಇದೆ ಎಂದು ತಿಳಿಯಲಿ. ದೀಪಾವಳಿ ಹಬ್ಬ ಆಚರಿಸುತ್ತಿರುವವರಿಗೆ ಶುಭಾಶಯಗಳು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಭಹಾರೈಸಿದ್ದಾರೆ.

ಹಿಂದೂ, ಸಿಖ್ಖ್, ಜೈನ್ ಮತ್ತು ಬೌದ್ಧ ಧರ್ಮದವರಿಗೆ, ಅಮೆರಿಕಾದಲ್ಲಿ ಹಾಗೂ ವಿಶ್ವದಾದ್ಯಂತ ದೀಪಾವಳಿ ಹಬ್ಬ ಆಚರಿಸುತ್ತಿರುವ ಎಲ್ಲರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಜೋ ಬೈಡೆನ್ ದಂಪತಿ ಶುಭಹಾರೈಸಿದ್ದಾರೆ. ವೈಟ್​ ಹೌಸ್​ನಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ದೀಪಾವಳಿ ಹಬ್ಬವನ್ನು ಭಾರತ ದೇಶಾದ್ಯಂತ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತದೆ. ಜಾತಿ, ಮತ, ಪಂತಗಳ ಭೇದವಿಲ್ಲದೆ ಎಲ್ಲರೂ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನರಕ ಚತುರ್ದಶಿ, ಲಕ್ಷ್ಮೀ ಪೂಜೆ, ಗೋಪೂಜೆ, ಬಲಿಪಾಡ್ಯಮಿ ಮುಂತಾದ ಸಂಪ್ರದಾಯಗಳೊಂದಿಗೆ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.

ಭಾರತ ಮಾತ್ರವಲ್ಲ ವಿಶ್ವದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಯಾವ ಹಬ್ಬವನ್ನು ಬಿಟ್ಟರೂ ದೀಪಾವಳಿಯನ್ನು ಆಚರಣೆ ಮಾಡದೆ ಉಳಿಯರು. ಅಂತಹ ವಿಶೇಷ ಹಬ್ಬವನ್ನು ಅಮೆರಿಕಾದ ವೈಟ್​ಹೌಸ್​ನಲ್ಲಿ ಕೂಡ ಆಚರಣೆ ಮಾಡಲಾಗುತ್ತದೆ. ಅಮೆರಿಕಾ ಅಧ್ಯಕ್ಷರು ದೀಪಾವಳಿ ಶುಭಕೋರುತ್ತಾರೆ. ಇಂದು (ನವೆಂಬರ್ 4) ಜೋ ಬೈಡೆನ್ ದೀಪಾವಳಿ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: Diwali 2021 Astrology: ದೀಪಾವಳಿಗೆ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಹಣಕಾಸು ವರ್ಷ ಭವಿಷ್ಯ

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಕಾಶ್ಮೀರದ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ- ಪಾಕಿಸ್ತಾನ ಸೈನಿಕರು

Published On - 9:15 pm, Thu, 4 November 21