Diwali 2021 Astrology: ದೀಪಾವಳಿಗೆ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಹಣಕಾಸು ವರ್ಷ ಭವಿಷ್ಯ

ದೀಪಾವಳಿ ಸಂದರ್ಭಕ್ಕೆ ಮುಂದಿನ ಒಂದು ವರ್ಷಗಳ ಕಾಲ ದ್ವಾದಶ ರಾಶಿಗಳಿಗೆ ಹಣಕಾಸು ಭವಿಷ್ಯ ಹೇಗಿರುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

TV9 Web
| Updated By: Srinivas Mata

Updated on:Nov 04, 2021 | 3:23 PM

ದೀಪಾವಳಿಗೆ ಉತ್ತರ ಭಾರತೀಯರಿಗೆ ಹೊಸ ವರ್ಷ. ಲೆಕ್ಕಪತ್ರಗಳನ್ನು ಹೊಸದಾಗಿ ಆರಂಭಿಸುವ ದಿನ. ಹೊಸದಾಗಿ ವ್ಯಾಪಾರ- ವ್ಯವಹಾರದ ಪುಸ್ತಕಗಳನ್ನು ಲೆಕ್ಕ ನೋಡಿಕೊಳ್ಳುವ ಸಮಯ ಇದು. ಆದ್ದರಿಂದ ದೀಪಾವಳಿಗೆ ಮುಂದಿನ ಒಂದು ವರ್ಷದ ಭವಿಷ್ಯ ಹೇಗಿರುತ್ತದೆ, ಅದರಲ್ಲೂ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿಸುವ ಪ್ರಯತ್ನ ಇದು. ಈ ಬಾರಿಯ ದೀಪಾವಳಿಯಿಂದ ಮುಂದಿನ ದೀಪಾವಳಿಗೆ ಅಂದರೆ ನವೆಂಬರ್ 4, 2021ರಿಂದ ಅಕ್ಟೋಬರ್ 24, 2022ರ ತನಕ ಹೇಗಿರುತ್ತದೆ ಹಣಕಾಸಿನ ಸ್ಥಿತಿಗತಿ ಎಂಬುದನ್ನು ಗ್ರಹಗಳ ಗೋಚಾರದ ಆಧಾರದ ಮೇಲೆ ತಿಳಿಸಲಾಗುತ್ತದೆ. 2021ರ ನವೆಂಬರ್​ನಿಂದ 2022ರ ಅಕ್ಟೋಬರ್​ ಮಧ್ಯೆ ಪ್ರಮುಖ ಗ್ರಹಗಳ ಸಂಚಾರವನ್ನು ಒಮ್ಮೆ ತಿಳಿದುಕೊಳ್ಳಿ. 

ಗುರು: ನವೆಂಬರ್ 20ರಿಂದ ಏಪ್ರಿಲ್​ 13, 2022ರ ತನಕ ಕುಂಭ ರಾಶಿ ಹಾಗೂ ಏಪ್ರಿಲ್ 13, 2022ರಿಂದ ಮುಂದಿನ ದೀಪಾವಳಿ ತನಕ ಮೀನ ರಾಶಿಯಲ್ಲಿ ಇರುತ್ತದೆ. ಶನೈಶ್ಚರ: ನವೆಂಬರ್​ನಿಂದ ಏಪ್ರಿಲ್​ 29, 2022ರ ತನಕ ಮಕರ ರಾಶಿಯಲ್ಲಿ ಸಂಚಾರ. ಆ ನಂತರ ಏಪ್ರಿಲ್ 29, 2022ರಿಂದ ಜುಲೈ 12, 2022ರ ತನಕ ಕುಂಭದಲ್ಲಿ ವಕ್ರೀ ಸಂಚಾರ. ಈ ಅವಧಿ ಮುಗಿದ ಮೇಲೆ ಶನಿ ಮತ್ತೆ ಮಕರ ರಾಶಿಗೆ ಪ್ರವೇಶಿಸಿ, ಮುಂದಿನ ದೀಪಾವಳಿಗೂ ಮಕರದಲ್ಲೇ ಇರುತ್ತದೆ. ಇನ್ನು ರಾಹು- ಕೇತು. ನವೆಂಬರ್​ 2021ರಿಂದ ಏಪ್ರಿಲ್ 12, 2022ರ ತನಕ ವೃಷಭದಲ್ಲಿ ರಾಹು, ವೃಶ್ಚಿಕದಲ್ಲಿ ಕೇತು ಸಂಚಾರ ಆಗುತ್ತದೆ. ಅದಾದ ಮೇಲೆ ಮುಂದಿನ ದೀಪಾವಳಿ ತನಕ ಮೇಷದಲ್ಲಿ ರಾಹು ಹಾಗೂ ತುಲಾದಲ್ಲಿ ಕೇತು ಇರುತ್ತದೆ. 

ಪ್ಲವನಾಮ ಸಂವತ್ಸರದ ಆರು ತಿಂಗಳು, ಶುಭಕೃತ ನಾಮ ಸಂವತ್ಸರದ ಆರು ತಿಂಗಳು ಹೀಗೆ ಒಂದು ವರ್ಷದಲ್ಲಿ ಬರುವ ಎರಡು ಸಂವತ್ಸರಗಳ ಗೋಚಾರ ಫಲದ ಮಾಹಿತಿ ನಿಮಗಾಗಿ ಇಲ್ಲಿದೆ.

ದೀಪಾವಳಿಗೆ ಉತ್ತರ ಭಾರತೀಯರಿಗೆ ಹೊಸ ವರ್ಷ. ಲೆಕ್ಕಪತ್ರಗಳನ್ನು ಹೊಸದಾಗಿ ಆರಂಭಿಸುವ ದಿನ. ಹೊಸದಾಗಿ ವ್ಯಾಪಾರ- ವ್ಯವಹಾರದ ಪುಸ್ತಕಗಳನ್ನು ಲೆಕ್ಕ ನೋಡಿಕೊಳ್ಳುವ ಸಮಯ ಇದು. ಆದ್ದರಿಂದ ದೀಪಾವಳಿಗೆ ಮುಂದಿನ ಒಂದು ವರ್ಷದ ಭವಿಷ್ಯ ಹೇಗಿರುತ್ತದೆ, ಅದರಲ್ಲೂ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಯವರಿಗೆ ಹೇಗಿರುತ್ತದೆ ಎಂದು ತಿಳಿಸುವ ಪ್ರಯತ್ನ ಇದು. ಈ ಬಾರಿಯ ದೀಪಾವಳಿಯಿಂದ ಮುಂದಿನ ದೀಪಾವಳಿಗೆ ಅಂದರೆ ನವೆಂಬರ್ 4, 2021ರಿಂದ ಅಕ್ಟೋಬರ್ 24, 2022ರ ತನಕ ಹೇಗಿರುತ್ತದೆ ಹಣಕಾಸಿನ ಸ್ಥಿತಿಗತಿ ಎಂಬುದನ್ನು ಗ್ರಹಗಳ ಗೋಚಾರದ ಆಧಾರದ ಮೇಲೆ ತಿಳಿಸಲಾಗುತ್ತದೆ. 2021ರ ನವೆಂಬರ್​ನಿಂದ 2022ರ ಅಕ್ಟೋಬರ್​ ಮಧ್ಯೆ ಪ್ರಮುಖ ಗ್ರಹಗಳ ಸಂಚಾರವನ್ನು ಒಮ್ಮೆ ತಿಳಿದುಕೊಳ್ಳಿ. ಗುರು: ನವೆಂಬರ್ 20ರಿಂದ ಏಪ್ರಿಲ್​ 13, 2022ರ ತನಕ ಕುಂಭ ರಾಶಿ ಹಾಗೂ ಏಪ್ರಿಲ್ 13, 2022ರಿಂದ ಮುಂದಿನ ದೀಪಾವಳಿ ತನಕ ಮೀನ ರಾಶಿಯಲ್ಲಿ ಇರುತ್ತದೆ. ಶನೈಶ್ಚರ: ನವೆಂಬರ್​ನಿಂದ ಏಪ್ರಿಲ್​ 29, 2022ರ ತನಕ ಮಕರ ರಾಶಿಯಲ್ಲಿ ಸಂಚಾರ. ಆ ನಂತರ ಏಪ್ರಿಲ್ 29, 2022ರಿಂದ ಜುಲೈ 12, 2022ರ ತನಕ ಕುಂಭದಲ್ಲಿ ವಕ್ರೀ ಸಂಚಾರ. ಈ ಅವಧಿ ಮುಗಿದ ಮೇಲೆ ಶನಿ ಮತ್ತೆ ಮಕರ ರಾಶಿಗೆ ಪ್ರವೇಶಿಸಿ, ಮುಂದಿನ ದೀಪಾವಳಿಗೂ ಮಕರದಲ್ಲೇ ಇರುತ್ತದೆ. ಇನ್ನು ರಾಹು- ಕೇತು. ನವೆಂಬರ್​ 2021ರಿಂದ ಏಪ್ರಿಲ್ 12, 2022ರ ತನಕ ವೃಷಭದಲ್ಲಿ ರಾಹು, ವೃಶ್ಚಿಕದಲ್ಲಿ ಕೇತು ಸಂಚಾರ ಆಗುತ್ತದೆ. ಅದಾದ ಮೇಲೆ ಮುಂದಿನ ದೀಪಾವಳಿ ತನಕ ಮೇಷದಲ್ಲಿ ರಾಹು ಹಾಗೂ ತುಲಾದಲ್ಲಿ ಕೇತು ಇರುತ್ತದೆ. ಪ್ಲವನಾಮ ಸಂವತ್ಸರದ ಆರು ತಿಂಗಳು, ಶುಭಕೃತ ನಾಮ ಸಂವತ್ಸರದ ಆರು ತಿಂಗಳು ಹೀಗೆ ಒಂದು ವರ್ಷದಲ್ಲಿ ಬರುವ ಎರಡು ಸಂವತ್ಸರಗಳ ಗೋಚಾರ ಫಲದ ಮಾಹಿತಿ ನಿಮಗಾಗಿ ಇಲ್ಲಿದೆ.

1 / 13
ಮೇಷ
ಉದ್ಯಮದಾರರಿಗೆ ಬಾಕಿ ಹಣ ಬರಬೇಕಿದೆ. ಹೊಸ ಯೋಜನೆಗಳಿಗೆ ಕೈ ಹಾಕುವುದಕ್ಕೆ ಉತ್ತೇಜನ ಸಿಗುತ್ತದೆ. ಸಾಲ ಮಾಡಿಯಾದರೂ ಉದ್ಯಮ ವಿಸ್ತರಿಸುವ ಹಂಬಲ ಮೂಡುತ್ತದೆ. ಆದರೆ ನೆನಪಿಡಿ, ಅತಿಯಾದ ಲಾಭ ಆಗಲಿ ಅಂತ ದುಡ್ಡಿನ ಬೆನ್ನು ಹತ್ತಿ, ನೀತಿ- ನಿಯಮಗಳನ್ನು ಮೀರಬೇಡಿ. ಇದಕ್ಕೂ ಮುಂಚೆ ನೀವು ತೆಗೆದುಕೊಂಡಿದ್ದ ನಿರ್ಧಾರದಿಂದ ಲಾಭ ಆಗಿದೆ ಎಂಬ ಒಂದೇ ಕಾರಣಕ್ಕೆ ಈಗಲೂ ಅದೇ ದಾರಿ ತುಳಿಯಬೇಡಿ. ಈ ವರ್ಷ ನಿಮಗೆ ಬರುವ ಲಾಭವನ್ನು ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೂಡಿಟ್ಟುಕೊಳ್ಳಿ. ಷೇರು ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ನಷ್ಟ ಆಗಬಹುದು. ನಿಮ್ಮ ನಿರ್ಧಾರದ ಬಗ್ಗೆ ಗುಮಾನಿ ಇದ್ದಲ್ಲಿ ತಜ್ಞರಿಂದ ಮಾರ್ಗದರ್ಶನ ಪಡೆಯಿರಿ. ಖರ್ಚಿನಲ್ಲಿ ಹಿಡಿತ ಇರಲಿ.

ಮೇಷ ಉದ್ಯಮದಾರರಿಗೆ ಬಾಕಿ ಹಣ ಬರಬೇಕಿದೆ. ಹೊಸ ಯೋಜನೆಗಳಿಗೆ ಕೈ ಹಾಕುವುದಕ್ಕೆ ಉತ್ತೇಜನ ಸಿಗುತ್ತದೆ. ಸಾಲ ಮಾಡಿಯಾದರೂ ಉದ್ಯಮ ವಿಸ್ತರಿಸುವ ಹಂಬಲ ಮೂಡುತ್ತದೆ. ಆದರೆ ನೆನಪಿಡಿ, ಅತಿಯಾದ ಲಾಭ ಆಗಲಿ ಅಂತ ದುಡ್ಡಿನ ಬೆನ್ನು ಹತ್ತಿ, ನೀತಿ- ನಿಯಮಗಳನ್ನು ಮೀರಬೇಡಿ. ಇದಕ್ಕೂ ಮುಂಚೆ ನೀವು ತೆಗೆದುಕೊಂಡಿದ್ದ ನಿರ್ಧಾರದಿಂದ ಲಾಭ ಆಗಿದೆ ಎಂಬ ಒಂದೇ ಕಾರಣಕ್ಕೆ ಈಗಲೂ ಅದೇ ದಾರಿ ತುಳಿಯಬೇಡಿ. ಈ ವರ್ಷ ನಿಮಗೆ ಬರುವ ಲಾಭವನ್ನು ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೂಡಿಟ್ಟುಕೊಳ್ಳಿ. ಷೇರು ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ನಷ್ಟ ಆಗಬಹುದು. ನಿಮ್ಮ ನಿರ್ಧಾರದ ಬಗ್ಗೆ ಗುಮಾನಿ ಇದ್ದಲ್ಲಿ ತಜ್ಞರಿಂದ ಮಾರ್ಗದರ್ಶನ ಪಡೆಯಿರಿ. ಖರ್ಚಿನಲ್ಲಿ ಹಿಡಿತ ಇರಲಿ.

2 / 13
ವೃಷಭ

ನಿಮ್ಮ ಕಾಯುವಿಕೆಗೆ ಅಂತೂ ಫಲ ದೊರೆಯುವ ಕಾಲ ಇದು. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಶ್ರಮ ಗುರುತಿಸಲಿದ್ದಾರೆ. ಜತೆಗೆ ಆದಾಯ ಜಾಸ್ತಿ ಆಗುವ ಸಾಧ್ಯತೆ ಇದೆ. ಆದರೆ ಉಳಿಯುತ್ತದೆ ಎಂದು ಹೇಳೋದು ಸಾಧ್ಯವಿಲ್ಲ. ಮನೆ ನಿರ್ಮಾಣದಂಥ ಶುಭ ಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಯಾವಾಗಲೋ ಯಾವುದಕ್ಕೂ ಇರಲಿ ಎಂದು ಕಲಿತಿದ್ದ ವಿದ್ಯೆ ಈಗ ಕೈ ಹಿಡಿಯುತ್ತದೆ. ನಿಮ್ಮೊಳಗೆ ಇಷ್ಟು ಸಮಯ ಹೊಸದೇನನ್ನೋ ಮಾಡಬೇಕು ಎಂದು ತಹತಹಿಸುತ್ತಿದ್ದದ್ದಕ್ಕೆ ಈಗ ಅಡೆತಡೆಗಳು ಪಕ್ಕಕ್ಕೆ ಸರಿಯುತ್ತವೆ. ಆಸ್ಪತ್ರೆ, ಚಿಕಿತ್ಸೆಗಳಿಗೆ ಹೆಚ್ಚಿನ ಖರ್ಚಾಗುತ್ತದೆ. ಮನೆಯಲ್ಲಿನ ವಾಹನಗಳ ದುರಸ್ತಿಗೆ ಸಹ ಹೆಚ್ಚಿನ ವೆಚ್ಚ ಆಗಲಿದೆ.

3 / 13
ಮಿಥುನ

ತಂದೆಯ ಕಡೆ ಆಸ್ತಿ ಬರುವ ಅವಕಾಶ ಇದೆ. ಕೆಲಸ ಮಾಡುವ ಸ್ಥಳದಲ್ಲಿ ಆದ್ಯತ ನೀಡುತ್ತಾರೆ. ವರ್ಷಗಳ ಹಿಂದೆ ಮಾಡಿದ್ದ ಹೂಡಿಕೆಗೆ ಒಳ್ಳೆ ರಿಟರ್ನ್ಸ್ ಸಿಗಲಿದೆ. ಸೈಟು ಖರೀದಿ ಮಾಡಬೇಕು ಅಂತ ಬಹಳ ಕಾಲದಿಂದ ಅಂದುಕೊಳ್ಳುತ್ತಿರುವವರಿಗೆ ಆಸೆ ಈಡೇರಿಸಿಕೊಳ್ಳುವ ಸಮಯ ಇದು. ಆದರೆ ಈ ಪ್ರಯತ್ನದಲ್ಲಿ ತಾಳ್ಮೆ ಬಹಳ ಮುಖ್ಯ ಆಗುತ್ತದೆ. ದಿಢೀರ್ ಆಗಿ ಬರುವ ಅವಕಾಶಗಳ ಕಾರಣಕ್ಕೆ ಸಾಲ ಮಾಡಬೇಕಾದದ್ದು ಅನಿವಾರ್ಯ ಆಗಲಿದೆ. ಆದರೆ ಆ ಕಾರಣಕ್ಕೆ ಮನೋಸ್ಥೈರ್ಯವನ್ನು ಕಳೆದುಕೊಳ್ಳಬೇಡಿ. ಖರ್ಚಿನ ವಿಷಯದಲ್ಲಿ ಆದ್ಯತೆಯನ್ನು ನೋಡಿಕೊಳ್ಳುವುದು ಮುಖ್ಯ.

4 / 13
ಕರ್ಕಾಟಕ

ಪಾಲುದಾರಿಕೆಯಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿದ್ದಲ್ಲಿ ನೆಮ್ಮದಿ ಹಾಳಾಗಲಿದೆ. ಹೊಸದಾಗಿ ಕೊಂಡ ವಸ್ತುಗಳನ್ನು ಪದೇಪದೇ ಬದಲಾಯಿಸಬೇಕಾಗುತ್ತದೆ. ಇನ್ನು ತಂದೆ ಅಥವಾ ತಾಯಿ ಮನೆ ಕಡೆಯಿಂದ ಬರಬೇಕಾದ ಆಸ್ತಿಗಳಿದ್ದಲ್ಲಿ ನಿಮ್ಮ ಪರವಾಗಿ ಆಗುವ ಸಾಧ್ಯತೆ ಹೆಚ್ಚಿದೆ. ಆಸ್ತಿ ಖರೀದಿಸಬೇಕು ಅಂತಿರುವವರಿಗೆ ಕಾನೂನು ಅಂಶಗಳ ಕಡೆಗೆ ಹೆಚ್ಚಿನ ನಿಗಾ ಇರಬೇಕು. ಉದ್ಯಮ ಹಾಗೂ ಸಣ್ಣ- ಪುಟ್ಟ ವ್ಯಾಪಾರ- ವ್ಯವಹಾರ ನಡೆಸುತ್ತಾ ಇರುವವರು ಅದರಲ್ಲಿ ಲಾಭವನ್ನು ಕಾಣುವಂಥ ಅವಕಾಶಗಳು ಇವೆ. ನಿಮಗೆ ಗೊತ್ತಿಲ್ಲದ ವ್ಯವಹಾರಗಳಲ್ಲಿ ಕೈ ಹಾಕಬೇಡಿ.

5 / 13
ಸಿಂಹ

ಒಂದರ ಹಿಂದೆ ಒಂದರಂತೆ ಒಳಿತಾಗುವ ಕಾಲ ಇದು. ಆಲಸ್ಯ ಮಾಡಿಕೊಳ್ಳದೆ ಮುಂದಿನ ವರ್ಷದ ಏಪ್ರಿಲ್​ ತನಕ ಶುಭ ಕಾರ್ಯಗಳು, ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ. ಇರುವ ಕೆಲಸ ಬಿಟ್ಟು ಹೊಸದನ್ನು ಹುಡುಕುತ್ತಿದ್ದಲ್ಲಿ ಒಳ್ಳೆ ಸಂಬಳದ ಕೆಲಸ ಸಿಗುತ್ತದೆ. ಪಾಲುದಾರಿಕೆ ವ್ಯವಹಾರದಲ್ಲೂ ಪ್ರಗತಿ ಇದೆ. ಸರ್ಕಾರದೊಂದಿಗೆ ವ್ಯವಹಾರ ನಡೆಸುವಾಗ, ಅಂದರೆ ಜವಾಬ್ದಾರಿಗಳ ಕಡೆಗೆ ಸರಿಯಾದ ಗಮನವನ್ನು ನೀಡಿ. ಇಲ್ಲದಿದ್ದರೆ ಒಂದಕ್ಕೆ ಎರಡರಷ್ಟು ಕೈಯಿಂದ ಹಣ ಕಳೆದುಕೊಳ್ಳುವಂತಾಗುತ್ತದೆ. ಆಸ್ತಿ- ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಮುಚ್ಚು-ಮರೆ ಇಲ್ಲದೆ ವ್ಯವಹಾರ ನಡೆಸಿ.

6 / 13
ಕನ್ಯಾ

ಯಾವ ಕೆಲಸವೂ ಆಗುತ್ತಿಲ್ಲ ಎಂದು ಕೊರಗುತ್ತಿದ್ದಲ್ಲಿ ಮುಂದಿನ ವರ್ಷದ ಏಪ್ರಿಲ್​ನಿಂದ ಆಚೆಗೆ ಒಂದಿಷ್ಟು ಅನುಕೂಲಗಳು ಆಗಲಿವೆ. ಕೆಲಸ- ಕಾರ್ಯಗಳು ಪೂರ್ಣಗೊಳ್ಳುತ್ತವೆ, ಇತರರಿಂದ ಸಹಾಯ ದೊರೆಯುತ್ತದೆ. ನೀವು ಗಮನಿಸಬೇಕಾದ ಅಂಶ ಏನೆಂದರೆ, ಯಾರೋ ದುಡ್ಡು ಕೊಡುತ್ತಾರೆ ಎಂದು ನಂಬಿಕೊಂಡು, ವ್ಯವಹಾರವನ್ನು ಮಾಡಬಾರದು. ಮಕ್ಕಳಿಗೆ ಒಂದೊಳ್ಳೆ ಕಡೆ ಕೆಲಸ ಮಾಡಿಕೊಡುವುದಾಗಿ ಹೇಳಿದರು ಎಂಬ ಮಾತನ್ನು ನಂಬಿ, ಯಾರಿಗೂ ದುಡ್ಡು ಕೊಡುವುದಕ್ಕೆ ಹೋಗದಿರಿ. ನೀವು ಬಹಳ ಕಾಲದಿಂದ ನಂಬಿರುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

7 / 13
ತುಲಾ

ಮನೆ ನಿರ್ಮಾಣ, ಆಸ್ತಿ ಖರೀದಿ, ವಾಹನ ಖರೀದಿಯಂಥ ವ್ಯವಹಾರಗಳು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ಆದರೆ ಏಪ್ರಿಲ್​ನೊಳಗೆ ಖರೀದಿ ಮಾಡುವ ಸಾಧ್ಯತೆಯಂತೂ ಇದ್ದೇ ಇದೆ. ಹಣಕಾಸಿನ ವಿಚಾರಕ್ಕೆ ಇನ್ನೊಬ್ಬರಿಗೆ ಮಾತು ಕೊಡುವ ಮುನ್ನ ನಿಮ್ಮಿಂದ ಅದನ್ನು ಪೂರೈಸುವುದಕ್ಕೆ ಸಾಧ್ಯವಾ ಎಂದು ಕೇಳಿಕೊಳ್ಳಿ. ಹೂಡಿಕೆ ವಿಚಾರದಲ್ಲಿ ನಿಮ್ಮನ್ನು ದಾರಿ ತಪ್ಪಿಸುವವರು ಹೆಜ್ಜೆಹೆಜ್ಜೆಗೂ ಎದುರಾಗುತ್ತಾರೆ. ಮೇಲ್ನೋಟಕ್ಕೆ ಯಾರನ್ನಾದರೂ ನಂಬಿ ಮುಂದುವರಿಯುವುದು ಅಪಾಯಕಾರಿ. ಸಾಧ್ಯವಾದಷ್ಟೂ ಹಣಕಾಸು ವಿಚಾರದಲ್ಲಿ ಆತುರ ಮಾಡಬೇಡಿ.

8 / 13
ವೃಶ್ಚಿಕ

ಆದಾಯದ ಒಳಹರಿವಿಗೆ ಯಾವುದೇ ಕೊರತೆ ಇರುವುದಿಲ್ಲ. ಆದರೆ ಉಳಿತಾಯ ಮಾಡುವುದು ಕಷ್ಟವಾಗುತ್ತದೆ. ಹಾಗಂತ ಯಾವುದಂದರೆ ಅದಕ್ಕೆ ಖರ್ಚಾಗುವುದಿಲ್ಲ ಎಂಬುದು ಸಂತೋಷದ ವಿಚಾರ. ಏಕೆಂದರೆ ಶುಭ ಕಾರ್ಯಗಳು, ದಾನ- ಧರ್ಮಗಳಿಗೆ ನಿಮ್ಮ ಹಣ ವ್ಯಯವಾಗುವ ಸಾಧ್ಯತೆ ಇದೆ. ಇಷ್ಟು ಕಾಲ ಉದ್ಯೋಗ ಸ್ಥಳದಲ್ಲಿ ಪಟ್ಟ ಪರಿಶ್ರಮಕ್ಕೆ ಪ್ರತಿಫಲವಾಗಿ ಉತ್ತಮ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಇತರರಿಗೆ ಯಾವಾಗಲೋ ಮಾಡಿದ್ದ ಸಹಾಯ ಈಗ ನಿಮ್ಮ ನೆರವಿಗೆ ಬರಲಿದೆ. ಅಚಾನಕ್ ಆಗಿ ಹೆಚ್ಚುವರಿ ಹಣಕಾಸಿನ ಹರಿವು ಕಾಣಿಸಿಕೊಳ್ಳುತ್ತದೆ. ಆರೋಗ್ಯದ ಬಗ್ಗೆ ಸ್ವಲ್ಪ ನಿಗಾ ವಹಿಸಿ.

9 / 13
ಧನುಸ್ಸು

ಇನ್ನು ಹೆಚ್ಚಿನ ಏರಿಕೆ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಸ್ಥೈರ್ಯ ಕಳೆದುಕೊಂಡವರಿಗೆ ನಿಧಾನಕ್ಕೆ ಅದು ಮರುಕಳಿಸುತ್ತದೆ. ಸೋದರ- ಸೋದರಿಯರು ಸಹ ನಿಮ್ಮ ಬೆನ್ನಿಗೆ ನಿಂತು ಸಹಾಯ ಮಾಡುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿದೆ. ಭೂಮಿ, ಆಸ್ತಿ ವ್ಯವಹಾರಗಳು ಸಾಧ್ಯವಾದಷ್ಟು ಬೇಗ ಮುಗಿಸಿಕೊಳ್ಳುವುದು ಉತ್ತಮ. ಧಾರ್ಮಿಕ- ದತ್ತಿ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಇರುವವರು ಪದೋನ್ನತಿ ಹೊಂದುವ ಅವಕಾಶ ಇದೆ. ಅಲ್ಪಾವಧಿಯಲ್ಲಿ ತುಂಬ ಪ್ರಮುಖವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಆತ್ಮವಿಶ್ವಾಸ ಬಹಳ ಮುಖ್ಯವಾಗುತ್ತದೆ.

10 / 13
ಮಕರ

ದುಡ್ಡು- ಕಾಸಿನ ಹರಿವು ಚೆನ್ನಾಗಿದ್ದರೂ ವಿವಿಧ ವಿಚಾರಗಳಲ್ಲಿ ದುಗುಡ ಇರುತ್ತದೆ. ಎಲ್ಲ ವಿಚಾರಗಳು ನಂಬಿಕೆ ಮೇಲೆ ನಡೆಯುತ್ತದೆ ಎಂಬ ಮೂಢನಂಬಿಕೆಯನ್ನು ಬಿಡುವುದು ಒಳಿತು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಣಕಾಸು ಎಷ್ಟು ಪ್ರಾಮುಖ್ಯ ಎಂಬುದನ್ನು ಅಳೆದು- ತೂಗಿ ಮುನ್ನಡೆಯುವುದು ಒಳಿತು. ಮನೆ ನಿರ್ಮಾಣ ಮಾಡುತ್ತಿರುವವರು ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರು ಹಣದ ವಿಚಾರದಲ್ಲಿ ಇರುವ ಮಿತಿಯನ್ನು ಅರಿತುಕೊಳ್ಳುವುದು ಮುಖ್ಯ. ದೊಡ್ಡ ಬಂಡವಾಳ ಹೂಡುವ ವ್ಯಾಪಾರವನ್ನು ಸಾಧ್ಯವಾದಷ್ಟೂ ಮುಂದಕ್ಕೆ ಹಾಕಿ.

11 / 13
ಕುಂಭ

ಹಣದ ಹರಿವು ಸರಾಗವಾಗಿ ಇರುವುದಿಲ್ಲ. ಬಿಟ್ಟೂ ಬಿಡದೆ ಕಾಡುವ ಖರ್ಚನ್ನು ನಿಭಾಯಿಸುವುದು ಸವಾಲಾಗಿ ಪರಿಣಮಿಸುತ್ತದೆ. ಮುಂದಿನ ವರ್ಷ ಗುರು ಮೀನರಾಶಿಯನ್ನು ಪ್ರವೇಶಿಸಿದ ಮೇಲೆ ಆರ್ಥಿಕ ಸ್ಥಿತಿ ಸುಧಾರಿಸಿದರೂ ಉಳಿತಾಯ ಮಾಡುವುದು ಕಷ್ಟವಾಗುತ್ತದೆ. ಜಮೀನು- ಆಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳಿಗೆ ಸಹಿ ಹಾಕುವಾಗ ಕಾನೂನು ತಜ್ಞರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಬಡ್ತಿ ಸಿಗುವ ಅವಕಾಶಗಳಿವೆ. ಅದನ್ನು ಬಳಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಹೊಂದಾಣಿಕೆ ಮಾಡಿಕೊಂಡು ಮುಂದಕ್ಕೆ ಸಾಗಿದಲ್ಲಿ ನೆಮ್ಮದಿ ಇರುತ್ತದೆ.

12 / 13
ಮೀನ

ಎಷ್ಟು ಹಣ ಇದ್ದರೂ ಸಾಲುವುದಿಲ್ಲ ಎಂಬಂಥ ಸ್ಥಿತಿ ನಿಮ್ಮದಾಗುತ್ತದೆ. ಅದರ ಜತೆಗೆ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ಹಣವನ್ನು ಇಡಬೇಕಾಗುತ್ತದೆ. ವ್ಯಾಪಾರ ಮಾಡಬೇಕು ಎಂಬ ತುಡಿತ ನಿಮ್ಮನ್ನು ಕಾಡುತ್ತಿದ್ದಲ್ಲಿ ಆತುರ ಪಡುವುದರ ಬದಲಿಗೆ ಮಾರುಕಟ್ಟೆ ಸ್ಥಿತಿಗತಿಯನ್ನು ಅರಿಯಿರಿ. ಬೇರೆಯವರಿಗೆ ಸಾಧ್ಯವಾಗಿದ್ದ ನನ್ನಿಂದ ಆಗದೆ ಹೋದೀತೆ ಎಂಬ ಹುಂಬ ಧೈರ್ಯ ಮಾಡದಿರಿ. ಕುಟುಂಬದ ಸಲುವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದೀತು. ಸಂಬಂಧಿಕರಿಗೆ ಹಣ ನೀಡಿದಲ್ಲಿ ಅದು ವಾಪಸ್ ದೊರೆಯದೆ ಇರಬಹುದು ಅಥವಾ ಬಹಳ ನಿಧಾನಕ್ಕೆ ಸಿಗುವಂತೆ ಆಗುತ್ತದೆ.

13 / 13

Published On - 3:18 pm, Thu, 4 November 21

Follow us