ಕೊರೊನಾ ತಗುಲುವ ಭೀತಿಯಲ್ಲಿ ಕೊವಿಡ್​ ಸೋಂಕಿತ ಮಗನನ್ನು ಕಾರ್ ಡಿಕ್ಕಿಯೊಳಗೆ ಲಾಕ್ ಮಾಡಿದ ತಾಯಿ!

| Updated By: ಸುಷ್ಮಾ ಚಕ್ರೆ

Updated on: Jan 08, 2022 | 2:39 PM

ಕೊವಿಡ್ ಪಾಸಿಟಿವ್ ಬಂದಿದ್ದ ಮಗನಿಂದ ತನ್ನನ್ನು ರಕ್ಷಿಸಿಕೊಳ್ಳಲು ತಾಯಿ ಕಾರಿನ ಡಿಕ್ಕಿಯೊಳಗೆ ಮಗನನ್ನು ಲಾಕ್ ಮಾಡಿದ್ದಾಳೆ.

ಕೊರೊನಾ ತಗುಲುವ ಭೀತಿಯಲ್ಲಿ ಕೊವಿಡ್​ ಸೋಂಕಿತ ಮಗನನ್ನು ಕಾರ್ ಡಿಕ್ಕಿಯೊಳಗೆ ಲಾಕ್ ಮಾಡಿದ ತಾಯಿ!
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೊವಿಡ್ ಪಾಸಿಟಿವ್​ ಇದ್ದ ಮಗನಿಂದ ತನಗೆ ಕೊರೊನಾ ತಗುಲುವ ಭೀತಿಯಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ತಾಯಯೊಬ್ಬಳು ತನ್ನ ಮಗನನನ್ನು ಕಾರಿನ ಡಿಕ್ಕಿಯೊಳಗೆ ಲಾಕ್ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೊವಿಡ್ ಪಾಸಿಟಿವ್ ಬಂದಿದ್ದ ಮಗನಿಂದ ತನ್ನನ್ನು ರಕ್ಷಿಸಿಕೊಳ್ಳಲು ತಾಯಿ ಕಾರಿನ ಡಿಕ್ಕಿಯೊಳಗೆ ಮಗನನ್ನು ಲಾಕ್ ಮಾಡಿದ್ದಾಳೆ.

ಇದರಿಂದ ಉಸಿರು ಕಟ್ಟಿದಂತಾಗಿದ್ದ ಮಗನನ್ನು ರಕ್ಷಿಸಲಾಗಿದ್ದು, ತಾಯಿಯನ್ನು ಬಂಧಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಾರಾ ಬೀಮ್ ಎಂಬ 41 ವರ್ಷದ ಮಹಿಳೆ ಜನವರಿ 3ರಂದು ತನ್ನ ಮಗನನ್ನು ಕೊರೊನಾ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಳು. ಆಗ ಆತನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢವಾಗಿತ್ತು. ಹೀಗಾಗಿ, ಆತನಿಂದ ತನಗೂ ಕೊವಿಡ್ ತಗುಲುತ್ತದೆ ಎಂಬ ಆತಂಕದಿಂದ ಆಕೆ ಮಗನನ್ನು ಕಾರಿನ ಡಿಕ್ಕಿಯಲ್ಲಿ ಲಾಕ್ ಮಾಡಿದ್ದಾಳೆ.

ಈ ಘಟನೆಯ ಪ್ರತ್ಯಕ್ಷದರ್ಶಿ click2houston.comಗೆ ಮಾಹಿತಿ ನೀಡಿದ್ದು, ಕಾರಿನ ಡಿಕ್ಕಿಯಿಂದ ಜೋರಾಗಿ ಶಬ್ದ ಕೇಳುತ್ತಿರುವುದನ್ನು ಗಮನಿಸಿದರು. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ನಂತರ ಆ ಬಾಲಕನನ್ನು ರಕ್ಷಿಸಲಾಯಿತು. ಬೀಮ್ ಅವರು ತಮ್ಮ 13 ವರ್ಷದ ಮಗನಿಗೆ ಕೋವಿಡ್ -19 ತಗುಲಿದ್ದರಿಂದ ಆತನಿಂದ ತನಗೂ ಸೋಂಕು ತಗುಲಬಹುದು ಎಂಬ ಆತಂಕದಿಂದ ಕಾರಿನ ಡಿಕ್ಕಿಯೊಳಗೆ ಲಾಕ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅದೃಷ್ಟವಶಾತ್ ಆ ಬಾಲಕನಿಗೆ ಯಾವುದೇ ಅಪಾಯವಾಗಿಲ್ಲ.

ಇದನ್ನೂ ಓದಿ: Viral News: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಎಂಗೇಜ್​ಮೆಂಟ್ ಮಾಡಿಕೊಂಡ ಸಲಿಂಗಿ ವೈದ್ಯರು!

Viral News: ಹೀಗೂ ಇರ್ತಾರಾ?; ಗರ್ಭ ಧರಿಸಿದ ಮುದ್ದಿನ ಬೆಕ್ಕುಗಳಿಗೆ ಸೀಮಂತ ಮಾಡಿದ ಮಾಲೀಕರು!