ಭಾರತಕ್ಕೆ ಮತ್ತೊಮ್ಮೆ ಪರಮಾಣು ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತಕ್ಕೆ ಪರಮಾಣು ಮತ್ತು ಆರ್ಥಿಕ ಬೆದರಿಕೆಗಳನ್ನು ಹಾಕಿದ್ದಾರೆ. ವಿಪರ್ಯಾಸವೆಂದರೆ ಪಾಕಿಸ್ತಾನದಲ್ಲಿ ಅಫ್ಘಾನ್ ದಾಳಿ ನಡೆಸುತ್ತಿದೆ. ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತೊಮ್ಮೆ ಭಾರತ ವಿರೋಧಿ ಹಾಗೂ ಪರಮಾಣು ದಾಳಿಯ ಮಾತುಗಳನ್ನಾಡಿದ್ದಾರೆ.

ಭಾರತಕ್ಕೆ ಮತ್ತೊಮ್ಮೆ ಪರಮಾಣು ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
Asim Munir

Updated on: Oct 18, 2025 | 8:06 PM

ಇಸ್ಲಮಾಬಾದ್, ಅಕ್ಟೋಬರ್ 18: ಪಾಕಿಸ್ತಾನಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಭಾರತದ ವಿರುದ್ಧ ಹೊಸ ಬೆದರಿಕೆಗಳನ್ನು ಹಾಕಿದ್ದಾರೆ. ಪಾಕಿಸ್ತಾನದ ಮೇಲೆ ಅಫ್ಘಾನ್ ಬಾಂಬ್‌ಗಳ ಮಳೆ ಸುರಿಸುತ್ತಿದ್ದರೂ ಅಸಿಮ್ ಮುನೀರ್ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟಿಲ್ಲ. ಇಸ್ಲಾಮಾಬಾದ್‌ನ ವಿಸ್ತರಿಸುತ್ತಿರುವ ಮಿಲಿಟರಿ ಸಾಮರ್ಥ್ಯಗಳು ಭಾರತದ ಭೌಗೋಳಿಕ ಯುದ್ಧಭೂಮಿಯನ್ನು ಛಿದ್ರಗೊಳಿಸಬಹುದು” ಎಂದು ಅಸಿಮ್ ಮುನೀರ್ ಹೇಳಿದ್ದಾರೆ.

ಕಾಕುಲ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿ (ಪಿಎಂಎ)ಯಲ್ಲಿ ಇಂದು ಪ್ರಚೋದನಕಾರಿ ಭಾಷಣ ಮಾಡಿದ ಅಸಿಮ್ ಮುನೀರ್, “ಪರಮಾಣು ರಹಿತ ವಾತಾವರಣದಲ್ಲಿ ಯುದ್ಧಕ್ಕೆ ಸ್ಥಳವಿಲ್ಲ” ಎಂದು ಹೇಳಿದ್ದಾರೆ. ನಮ್ಮ ಮೇಲಿನ ಸಣ್ಣ ಪ್ರಚೋದನೆ ಕೂಡ ಪಾಕಿಸ್ತಾನದಿಂದ ನಿರ್ಣಾಯಕವಾದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕಾಬೂಲ್ ಭಾರತದ ಕೈಗೊಂಬೆಯಾಗುತ್ತಿದೆ; ಎಲ್ಲ ಅಫ್ಘಾನಿಗಳಿಗೆ ವಾಪಾಸ್ ತೆರಳಲು ಪಾಕಿಸ್ತಾನ ಸಚಿವ ಖವಾಜಾ ಆಸಿಫ್ ಸೂಚನೆ

“ಹೊಸದಾಗಿ ಯುದ್ಧವನ್ನು ಪ್ರಚೋದಿಸಿದರೆ ಪಾಕಿಸ್ತಾನವು ಯುದ್ಧವನ್ನು ಪ್ರಾರಂಭಿಸಿದವರ ನಿರೀಕ್ಷೆಗಳನ್ನು ಮೀರಿ ಪ್ರತಿಕ್ರಿಯಿಸುತ್ತದೆ. ಆ ದುರಂತದ ಪರಿಣಾಮಗಳ ಹೊಣೆಗಾರಿಕೆ ಭಾರತದ ಮೇಲಿರುತ್ತದೆ” ಎಂದು ಅವರು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.


ಡುರಾಂಡ್ ರೇಖೆಯ ಉದ್ದಕ್ಕೂ ಅಫ್ಘಾನ್ ತಾಲಿಬಾನ್ ನಡೆಸಿದ ಮಾರಕ ದಾಳಿಗಳ ಸರಣಿಯ ನಂತರ ಪಾಕಿಸ್ತಾನಿ ಸೇನೆಯ ಸೈನಿಕರು ಮೃತಪಟ್ಟಿದ್ದಾರೆ. ಈ ಹಿಂದೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಕೊಲ್ಲುವ ಕೆಲವು ದಿನಗಳ ಮೊದಲು ಕೂಡ ಅಸಿಮ್ ಮುನೀರ್ ಭಾರತದ ವಿರುದ್ಧ ಇದೇ ರೀತಿಯ ಪ್ರಚೋದನಕಾರಿ ಭಾಷಣ ಮಾಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ