ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ; ಅಸಿಮ್ ಮುನೀರ್ ಅವರ ಭಾರತ ಮರ್ಸಿಡಿಸ್ ಹೇಳಿಕೆಗೆ ರಾಜನಾಥ್ ಸಿಂಗ್ ಪ್ರತಿಕ್ರಿಯೆ
ಅಮೆರಿಕಕ್ಕೆ ಪ್ರವಾಸಕ್ಕೆ ತೆರಳಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತ ಮರ್ಸಿಡಿಸ್ ಇದ್ದಂತೆ, ಪಾಕಿಸ್ತಾನ ಕಸದ ಟ್ರಕ್ ಇದ್ದಂತೆ ಎಂಬ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ಕಾರಣವನ್ನೂ ವಿವರಿಸಿದ್ದರು. ಆದರೆ, ಆ ಕಾರಣಕ್ಕಿಂತ ಹೆಚ್ಚಾಗಿ ಅವರ ಹೋಲಿಕೆಯೇ ಟ್ರೋಲ್ ಆಗಿತ್ತು. ಈ ಬಗ್ಗೆ ಇಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಲೇವಡಿ ಮಾಡಿದ್ದಾರೆ.

ನವದೆಹಲಿ, ಆಗಸ್ಟ್ 22: ಅಮೆರಿಕದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (Asim Munir) ಅವರು ಭಾರತ ಮತ್ತು ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಗಳನ್ನು ಹೋಲಿಸುವ ವೇಳೆ ಭಾರತವನ್ನು ಮರ್ಸಿಡಿಸ್ಗೂ, ಪಾಕಿಸ್ತಾನವನ್ನು ಕಸದ ಟ್ರಕ್ಗೂ ಹೋಲಿಸಿದ್ದರು. ಈ ಹೇಳಿಕೆಯ ಮೂಲಕ ಪಾಕಿಸ್ತಾನ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ವ್ಯಂಗ್ಯವಾಡಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಭಾರತವನ್ನು ಐಷಾರಾಮಿ ಮರ್ಸಿಡಿಸ್ ಕಾರಿನೊಂದಿಗೆ ಮತ್ತು ತಮ್ಮ ಸ್ವಂತ ದೇಶವನ್ನು ಡಂಪ್ ಟ್ರಕ್‌ನೊಂದಿಗೆ ಹೋಲಿಸಿದ್ದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಪಹಾಸ್ಯ ಮಾಡಿದ್ದಾರೆ. ಈ ಹೇಳಿಕೆಯು ಪಾಕಿಸ್ತಾನದ ವೈಫಲ್ಯದ ತಪ್ಪೊಪ್ಪಿಗೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.
#WATCH | Delhi: Defence Minister Rajnath Singh says, “I would like to draw your attention to the statement given recently by Pakistan’s Army Chief General Asim Munir. He said, “India is a shining Mercedes coming on the highway like a Ferrari, but we are a dump truck full of… pic.twitter.com/VOqQ9BNee0
— ANI (@ANI) August 22, 2025
“ಎರಡು ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯವನ್ನು ಗಳಿಸಿತ್ತು. ಒಂದು ದೇಶವು ಕಠಿಣ ಪರಿಶ್ರಮ, ಉತ್ತಮ ನೀತಿಗಳು ಮತ್ತು ದೂರದೃಷ್ಟಿಯ ಮೂಲಕ ಮರ್ಸಿಡಿಸ್ನಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶವು ಇನ್ನೂ ಡಂಪ್ ಟ್ರಕ್ ಸ್ಥಿತಿಯಲ್ಲಿದೆ. ಅದು ಅವರ ಸ್ವಂತ ವೈಫಲ್ಯ ಎಂದು ಎಲ್ಲರೂ ಗೊತ್ತಿದೆ. ಇದೀಗ ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. ಅಸಿಮ್ ಮುನೀರ್ ಅವರ ಈ ಹೇಳಿಕೆಯನ್ನು ನಾನು ತಪ್ಪೊಪ್ಪಿಗೆಯಾಗಿಯೂ ನೋಡುತ್ತೇನೆ” ಎಂದು ರಾಜನಾಥ್ ಸಿಂಗ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಮರ್ಸಿಡಿಸ್, ಪಾಕಿಸ್ತಾನ ಡಂಪ್ ಟ್ರಕ್; ತಮ್ಮದೇ ಹೋಲಿಕೆಗೆ ಟ್ರೋಲ್ ಆದ ಅಸಿಮ್ ಮುನೀರ್
ಈ ತಿಂಗಳ ಆರಂಭದಲ್ಲಿ ಅಸಿಮ್ ಮುನೀರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಅವರ ಹೇಳಿಕೆ ಬಂದಿದೆ. ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅಸೀಮ್ ಮುನೀರ್ ಅವರು ವಿಚಿತ್ರವಾದ ಹೋಲಿಕೆಯನ್ನು ಮಾಡಿದ್ದರು. “ಭಾರತವು ಮರ್ಸಿಡಿಸ್ನಂತೆ. ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್‌ನೊಂದಿಗೆ ಹೊಳೆಯುತ್ತಿದೆ. ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಒಂದುವೇಳೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ? ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ” ಎಂದು ಅವರು ಹೇಳಿದ್ದರು. ಅವರ ಈ ಹೋಲಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟ್ರೋಲಿಂಗ್‌ಗೆ ಕಾರಣವಾಗಿತ್ತು.
ಇದನ್ನೂ ಓದಿ: ಸಿಂಧೂ ನದಿಗೆ ಭಾರತ ಡ್ಯಾಂ ನಿರ್ಮಿಸಿದರೆ ಬಾಂಬ್ ಹಾಕುತ್ತೇವೆ; ಅಮೆರಿಕದಲ್ಲಿ ಅಸೀಮ್ ಮುನೀರ್ ಬೆದರಿಕೆ
ಕಳೆದ ಒಂದು ತಿಂಗಳಿನಿಂದ ಭಾರತವನ್ನು ಗುರಿಯಾಗಿಸಿಕೊಂಡು ಅಸಿಮ್ ಮುನೀರ್ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅದೇ ಅಮೆರಿಕ ಪ್ರವಾಸದ ಸಮಯದಲ್ಲಿ ಅವರು ಪರಮಾಣು ಬೆದರಿಕೆಗಳನ್ನು ಹಾಕಿದ್ದರು. “ನಾವು ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ನಮಗೆ ಅನಿಸಿದರೆ ನಾವು ನಮ್ಮೊಂದಿಗೆ ಅರ್ಧದಷ್ಟು ಜಗತ್ತನ್ನು ನಾಶಪಡಿಸುತ್ತೇವೆ” ಎಂದು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




